
ಕೆಂಭಾವಿ:ಸೆ.6:ನಾಳೆಯ ಉತ್ತಮ ಸಮಾಜಕ್ಕಾಗಿ ಇಂದಿನಿಂದಲೇ ಉತ್ತಮ ಪ್ರಜೆಗಳನ್ನು ರೂಪಿಸುವ ಶಕ್ತಿ ಶಿಕ್ಷಕರಿಂದ ಮಾತ್ರ ಸಾಧ್ಯವಾಗಿದೆ.
ಪಟ್ಟಣದ ಸ್ಪಂದನ ಶಾಲೆಯಲ್ಲಿ ನಡೆದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಂದೇನವಾಜ ನಾಲತವಾಡ, ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನದ ನಿಮಿತ್ಯವಾಗಿ ಪ್ರತಿ ವರ್ಷ ಈ ದಿನವನ್ನು ಶಿಕ್ಷಕ ದಿನವನ್ನಾಗಿ ಆಚರಿಸುತ್ತೇವೆ. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾಗಿದ್ದು ಗುರು-ಶಿಷ್ಯರ ಸಂಬಂಧವನ್ನು ಗಟ್ಟಿಗೊಳಿಸುವ ಈ ಕೆಲಸವನ್ನು ಎಲ್ಲ ಶಿಕ್ಷಕ ಬಂಧುಗಳು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಬೇಕು ಎಂದು ಹೇಳಿದರು. ನಂತರ ವಿದ್ಯಾರ್ಥಿಗಳು ಶಾಲೆಯ ಶಿಕ್ಷಕರನ್ನು ವಿಶೇಷ ಸನ್ಮಾನಿಸಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಖ್ಯಾತ ಚಿತ್ರ ಕಲಾವಿದ ಹಳ್ಳೇರಾವ ಅವರ ಕುಂಚದಲ್ಲಿ ಅರಳಿದ ಶಾಲಾ ಸಂಸ್ಥೆಯ ಮುಖ್ಯಸ್ಥ ಡಿ. ಸಿ. ಪಾಟೀಲ ಅವರ ಭಾವಚಿತ್ರವನ್ನು ವಿದ್ಯಾರ್ಥಿಗಳು ಡಿ. ಸಿ. ಪಾಟೀಲ ಅವರಿಗೆ ನೀಡಿದರು. ರೇವಣಸಿದ್ದಯ್ಯ ಮಠ, ರೋಹಿಣಿ ಗುಬ್ಯಾಡ, ಫರಾನಾ ಬೇಗಂ, ಲತಾ ಕೊಣ್ಣೂರ, ಪ್ರಿಯಾಂಕಾ, ಮಾಸಬಿ, ಮಮತಾ, ರಾಣಿ, ಶಿಲ್ಪಾ, ಭಾಗೀರಥಿ, ಸನಾ, ದೇವು ಉಪ್ಪಾರ ಇದ್ದರು.
ಪಟ್ಟಣದ ಬಾಲಕರ ಮತ್ತು ಬಾಲಕಿಯರ ಸರ್ಕಾರಿ ಪ್ರೌಢ ಶಾಲೆ, ಬಾಲಕಿಯರ ಮತ್ತು ಬಾಲಕರ ಸರ್ಕಾರಿ ಪ್ರಾಥಮಿಕ ಶಾಲೆ, ಮುರಾರ್ಜಿ ದೇಸಾಯಿ ವಸತಿ ಶಾಲೆ, ಸರ್ಕಾರಿ ಪದವಿಪೂರ್ವ ಕಾಲೇಜು ಸೇರಿದಂತೆ ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಗೌರವಿಸುವ ಮೂಲಕ ಶಿಕ್ಷಕ ದಿನಾಚರಣೆಯನ್ನು ಆಚರಿಸಿದರು.