ಉತ್ತಮ ತತ್ವ ಚಿಂತನೆಗಳು ಜೀವನದಲ್ಲಿ ಅಳವಡಿಕೆಯಾಗಲಿ: ಪ್ರಣವಾನಂದ ಮಹಾಸ್ವಾಮಿಗಳು

ಕೆಂಭಾವಿ:ಎ.6:ಜ್ಞಾನೇಂದ್ರಿಯಗಳ ಸದ್ಬಳಕೆಯಾಗಲಿ ಭಗವಂತ ಮಾನವನಿಗೆ ಹಲವು ಬಗೆಯ ಇಂದ್ರೀಯಗಳನ್ನು ಕೊಟ್ಟಿರುತ್ತಾನೆ ಅವುಗಳು ಉತ್ತಮ ಕಾರ್ಯಕ್ಕೆ ಬಳಕೆಯಾದಾಗ ಮಾತ್ರ ಜೀವನ ಪರಿಪೂರ್ಣವಾಗುವುದು ವ್ಯಸನಮುಕ್ತ ಕಾಯ ನಮ್ಮದಾಗಲಿ ಎಂದು ಸಿದ್ದಾರೂಢ ಮಠದ ಪೂಜ್ಯರಾದ ಶ್ರೀ ಪ್ರಣವಾನಂದ ಮಹಾಸ್ವಾಮಿಗಳು ಹೇಳಿದರು, ನಡಕೂರ ಗ್ರಾಮದ ಸದ್ಗುರು ಸಿದ್ದಾರೂಢರ ಜಾತ್ರಾಮಹೋತ್ಸವ ಮತ್ತು ಪ.ಪೂ.ಶ್ರೋ.ಬ್ರ ಸಂಗಮೇಶ್ವರರ 41ನೇ ಪುಣ್ಯಾರಾಧನೆ ನಿಮಿತ್ಯ 5ದಿನಗಳ ಕಾಲ ಹಮ್ಮಿಕೊಂಡಿರುವ ಪ್ರವಚನ ಮತ್ತು ಸತ್ಸಂಗ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು ಭಗವಂತ ನಮಗೆಲ್ಲ ಆಶ್ರಯದಾತನಾಗಿದ್ದಾನೆ ಸಕಲ ಚರಾಚರಗಳಿಗೆ ಮೂಲ ಭಗವಂತನೆ ಆಗಿದ್ದಾನೆ ಕಳೆದ ಸಂಪತ್ತು ಮರಳಿಯಾವದೋ ರೂಪದಲ್ಲಿ ಹಿಂದಿರುಗ ಬಹುದು ಆದರೆ ವ್ಯಥರ್À ಮಾಡಿದ ಸಮಯ ಮರಳಿಬಾರದು ಮಾನವನಾದವನು ಉತ್ತಮ ತತ್ವ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಸಿದ್ದರೂಢರ ಮಠ ತತ್ವ ಚಿಂತನಗಳ ಕುರಿತು ಸಂದೇಶ ಸಾರುವ ಮಠವಾಗಿದೆ ಎಂದು ಹೇಳೀದರು.
ಮೊದಲಿಗೆ ಮಾತನಾಡಿದ ಯಳಸಂಗಿಯ ಸಿದ್ದಾರೂಢ ಮಠದ ಪೂಜ್ಯರಾದ ಪರಮಾನಂದ ಮಹಾಸ್ವಾಮಿಗಳು ಮಾನವನು ಸೌಂದರ್ಯದ ಉಪಾಸಕನಾಗಿದ್ದಾನೆ ಆಡಂಬರದ ಜೀªನಶೈಲಿಗೆ ಮಾರು ಹೋಗುತಿದ್ದಾನೆ ಅದು ಕೇವಲ ಬಾಹ್ಯವಾಗಿ ಸುಂದರವಾಗಿ ಕಂಡರು ಒಂದು ದಿನ ಕುಂದಿಹೋಗುವಂತಹದು ನಿಜ ಭಕ್ತನಾದವನು ಅಂತರಂಗವನ್ನು ಶೃಣಗರೀಸಿದಾಗ ಸುಬುದ್ದಿ ಸುವಿಚಾರಗಳು ಅವನಲ್ಲಿ ಮೂಡುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಬೋರಗಿ ಪುರದಾಳ ವಿಶ್ವರಾಧ್ಯ ಮಠದ ಪೂಜ್ಯರಾದ ಮಹಾಲಿಂಗೇಶ್ವರ ಸ್ವಾಮಿಗಳು, ಹುಲ್ಯಾಳದ ಓಂಕಾರೇಶ್ವರ ಮಠದ ಮಾತೋಶ್ರೀ ಜಯಶ್ರೀ ದೇವಿ ಮತ್ತು ಚೆನ್ನಮ್ಮ ತಾಯಿಯವರು, ಗೋಪಾಲಶಾಸ್ತ್ರೀಗಳು ಕಲ್ಲಹಂಗರಗಾ,ಮಲಕಯ್ಯ ಸ್ವಾಮಿ ಯಡಿಯಾಪೂರ ,ಇದ್ದರು. ಸಂಗೀತ ಕಲಾವಿದರಾದ ರಾಜು ಗಬ್ಬೇವಾಡ ಮತ್ತು ಶ್ರೀಕಾಂತ ಮುದ್ದೇಬಿಹಾಳ ಇವರಿಂದ ಸಂಗೀತ ಸೇವೆ ನೇರವೇರಿತು.ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಮಠದ ಆಡಳಿತ ಮಂಡಳಿಯ ಸದಸ್ಯರಿದ್ದರು,