ಉತ್ತಮ ಜೀವನ ಶೈಲಿಯಿಂದ ಮಾತ್ರ ಉತ್ತಮ ಆರೋಗ- ಡಾ.ಎಸ್.ಬಿ.ಹಂದ್ರಾಳ.

ಸಂಜೆವಾಣಿ ವಾರ್ತೆಹೊಸಪೇಟೆ, ಜ.21: ಉತ್ತಮ ಜೀವನ ಶೈಲಿ ಆಹಾರ ಪದ್ದತಿ, ದೇಹದ ವಾಯು ವಿಕಾರಗಳನ್ನು ದೂರಮಾಡುವ ಜೊತೆ ನಮ್ಮ ದೇಹದ  ಸಮತೋಲನಕ್ಕೆ ಕಾರಣವಾಗಲಿದೆ ಎಂದು ಪತಂಜಲಿ ಯೋಗ ಸಮಿತಿ ವಿಜಯನಗರ ಜಿಲ್ಲಾ ಉಸ್ತುವಾರಿ ಡಾ.ಎಸ್.ಬಿ.ಹಂದ್ರಾಳ ಹೇಳಿದರು.ಅವರು ಪತಂಜಲಿ ಯೋಗ ಸಮಿತಿ ಭಾನುವಾರ ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಂಡಿದ್ದ ವಿಶೇಷ ಯೋಗ ತರಬೇತಿ ನೀಡಿ ಮಾತನಾಡಿದ ಅವರು  ಸಂಧಿವಾತ(ಮಂಡಿ ನೋವು) ಬೆನ್ನು ನೋವು  ಮತ್ತು  ನರಗಳ ಮತ್ತು ಮಾಂಸ ಖಂಡಗಳ ದೌರ್ಬಲತೆಗಳ ನಿವಾರಣೆಗಾಗಿ ವಿಶೇಷ ಆಸನಗಳು ಮತ್ತು ಮುದ್ರೆಗಳು ಹಾಗೂ ಪ್ರಾಣಾಯಾಮಗಳು ಜೊತೆಗೆ  ಮತ್ತು ಮನೆ ಮದ್ದು ಆಹಾರ  ಪದ್ಧತಿ ಮತ್ತು ಜೀವನಶೈಲಿ  ಹಾಗೂ ಯೋಗಾಬ್ಯಾಸಗಳು ಆಲಸ್ಯ ದೂರ ಮಾಡಲು ಜೀವನದ ಉತ್ಸಾಹಕ್ಕೆ ಆತ್ಮಸ್ಥೈರ್ಯವನ್ನು ತುಂಬುವದರ ಜೊತೆ ರೋಗಮುಕ್ತ ದೇಹಕ್ಕೆ ಸಹಕಾರಿಯಾಗಲಿದೆ ಎಂದು ಯಾವ ಆಸನ ಯಾವ ಮುದ್ರೆ ಯಾವ ರೋಗಳಿಗೆ ಸಹಕಾರಿಯಾಗುತ್ತದೆ. ಏನು ಕಾರಣ ಎಂನುವುದನ್ನು ವೈಜ್ಞಾನಿಕ ಕಾರಣದೊಂದಿಗೆ ವಿವರಿಸಿದರು.ಸಾತ್ವೀಕ ಪೌಷ್ಟಿಕಾಹಾರ, ವ್ಯಾಯಾಮ, ಹಸಿರು ತರಕಾರಿಗಳು ಹಾಗೂ ಮೀರಿದಾಗ ಪಂಚಕರ್ಮ ಚಿಕಿತ್ಸೆಗಳಿಂದ  ಒತ್ತಡ ರಹಿತ ಬದುಕು ನಮ್ಮದಾಗಿಸಿಕೊಳ್ಳ ಬಹುದು ಎಂದರು.ಯುವ ಭಾರತ  ರಾಜ್ಯ ಪ್ರಭಾರಿ ಕಿರಣ ಕುಮಾರ್  ವಿಜಯನಗರ ಉಸ್ತುವಾರಿ ಡಾ.ಎಫ್.ಟಿ.ಹಳ್ಳಿಕೇರಿ, ಬಳ್ಳಾರಿ ಉಸ್ತುವಾರಿ ರಾಜೇಶ ಕರ್ವಾ, ಶ್ರೀರಾಮ ಅನಂತ ಜೋಶಿ ಹಾಗೂ ಹೊಸಪೇಟೆಯ ವಿವಿಧ ಕೇಂದ್ರಗಳ ಸಂಚಾಲಕರು ಉಸ್ತುವಾರಿ ಗಳು ಹಾಗೂ ಯೋಗ ಸಾಧಕರು ಪಾಲ್ಗೊಂಡಿದ್ದರು.