ಉತ್ತಮ ಚಿಕಿತ್ಸೆ ನೀಡಲು ದರ್ಶನಾಪೂರ ಕರೆ

ಕೆಂಭಾವಿ:ಜ.13:ಹೆಚ್ಚು ಹೆಚ್ಚು ತಜ್ಞ ವೈದ್ಯರು ಗ್ರಾಮಗಳಿಗೆ ಮರಳಿ ಆಸ್ಪತ್ರೆಗಳನ್ನು ತೆರೆದಾಗ ಮಾತ್ರ ಗ್ರಾಮಸ್ಥರಿಗೆ ಉತ್ತಮ ಚಿಕಿತ್ಸೆ ತಾವಿದ್ದಲ್ಲಿಯೆ ದೊರೆತಂತಾಗುತ್ತದೆ ಎಂದು ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ಪಟ್ಟಣದ ಟಿಪ್ಪು ಸುಲ್ತಾನ ವೃತ್ತದಲ್ಲಿ ಗ್ಯಾಲಾಕ್ಸಿ ಮೆಡಿಕಲ್ ಹಾಗೂ ಖಾಸಗಿ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದರು. ಪಟ್ಟಣದಲ್ಲಿ ಸರಕಾರಿ ಆಸ್ಪತ್ರೆಯ ನೂತನ ಕಟ್ಟಡ ಸೇರಿದಂತೆ ಅನೇಕ ಖಾಸಗಿ ಆಸ್ಪತ್ರೆಗಳು ತಲೆ ಎತ್ತುತ್ತಿವೆ. ಹೆಚ್ಚು ಹೆಚ್ಚು ಆಸ್ಪತ್ರೆಗಳು ತೆರೆದಂತೆ ಉತ್ತಮ ವೈದ್ಯರ ಸೇವೆಯನ್ನು ಕಡಿಮೆ ದರದಲ್ಲಿ ಸಾರ್ವಜನಿಕರು ಪಡೆಯುವಂತಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಖಾಜಾ ಹುಸೇನ ನಾಶಿ, ಡಾ. ಆರೀಫ್ ಹುಸೇನ, ಬಸನಗೌಡ ಹೊಸಮನಿ ಯಾಳಗಿ, ಜಿಲಾನಿ ನಾಶಿ, ಹಸನಲಿ ಮೇಟಿ, ಹಮೀದ ಮೌಲಾನಾ, ಎಸ್‍ಕೆ ಖಲೀಮ್, ಶಫೀಕ್ ದಫೇದಾರ ಮತ್ತು ರಜಾಕ್ ಸೋಲಾಪುರ ಸೇರಿದಂತೆ ಇತರರಿದ್ದರು.