ಉತ್ತಮ ಚಿಕಿತ್ಸೆ ಜೊತೆಯಲ್ಲಿ ಧೈರ್ಯದಿಂದ ರೋಗವನ್ನು ಎದುರಿಸಿ :ವಿ.ಸೋಮಣ್ಣ ಕರೆ


ಬೆಂಗಳೂರು,ಮೇ ೨೦- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ವ ವಲಯದ ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಚೋಳನಗರದ ರಾಜೀವ್‌ಗಾಂಧಿ ದಂತ ವೈದ್ಯಕೀಯ ಆಸ್ಪತ್ರೆಯನ್ನು ಖಾಸಗಿ ಸಹಭಾಗಿತ್ವದೊಂದಿಗೆ ಕೊರೊನಾ ಸೊಂಕಿತರ ಚಿಕಿತ್ಸೆಗಾಗಿ ೧೦೦ ಬೆಡ್‌ಗಳ ಸಂಪೂರ್ಣ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿದ್ದು ಈ ಆಸ್ಪತ್ರೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ವ ವಲಯ ಕೋವಿಡ್-೧೯ ಮೇಲ್ವಿಚಾರಣೆ ಉಸ್ತುವಾರಿ ಹೊತ್ತಿರುವ ವಸತಿ ಸಚಿವ ವಿ.ಸೋಮಣ್ಣನವರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಶಾಸಕರಾದ ಭೈರತಿ ಸುರೇಶ್ ರವರು ಇಂದು ಬೆಳಗ್ಗೆ ಸಾರ್ವಜನಿಕರ ಸೇವೆಗಾಗಿ ಉದ್ಘಾಟಿಸಿದರು ಈ ಆಸ್ಪತ್ರೆಯಲ್ಲಿ ಆಮ್ಲಜನಕ ಹಾಗೂ ಐಸಿಯು ಸೌಲಭ್ಯವನ್ನೂ ಒಳಗೊಂಡಿದ್ದು,
ಸೋಂಕಿಕರಿಗೆ ಆರೋಗ್ಯ ಸುಧಾರಣೆಗೆ ನೆರವಾಗವಾಗಲಿದೆ ಎಂದರು.
ಸಚಿವರಾದ ವಿ.ಸೋಮಣ್ಣರವರು ಕರ್ನಾಟಕದಲ್ಲಿ ಕೊವಿಡ್ ಸೋಂಕುನಿಂದ ಗುಣಮುಖರಾಗುವವರ ಸಂಖ್ಯೆ ಹೆಚ್ಚು ಇದೆ .ಇದು ಆಶಾದಾಯಕ ಬೆಳವಣಿಗೆಯಾಗಿದೆ .ಸರ್ಕಾರದ ಜೊತೆಯಲ್ಲಿ ಸಾರ್ವಜನಿಕರ ಸಹಕಾರ ನೀಡಬೇಕು .ಮಾಸ್ಕ್ ಧರಿಸಿ ಅವಶ್ಯಕತೆ ಇದ್ದಲ್ಲಿ ಮನೆಯಿಂದ ಹೊರಬನ್ನಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಿ .ಕೋವಿಡ್ ರೋಗ ಬಂದಿದೆ ಎಂದು ಭಯ,ಅತಂಕಪಡಬೇಡಿ ಧೈರ್ಯಂ ಸರ್ವತ್ರ ಸಾಧನಂ ಎಂಬಂತೆ ಆತ್ಮ
ವಿಶ್ವಾಸದಿಂದ ಎದುರಿಸಿ .
೧೦೦ಹಾಸಿಗೆ ಸಾಮ್ಯರ್ಥವುಳ್ಳ ಕೊವಿಡ್ ಸೆಂಟರ್ ನಲ್ಲಿ ಮೂರು ಪಾಳಿಗಳಲ್ಲಿ ತಜ್ಞ ವೈದ್ಯರುಗಳು ,ದಾದಿಯರು ಸೋಂಕಿತರ ಆರೈಕೆ ಮಾಡಲಿದ್ದಾರೆ ಎಂದು ಹೇಳಿದರು.