ಉತ್ತಮ ಕೆಲಸದಿಂದ ಉತ್ತಮ ಹೆಸರು

ಕೋಲಾರ,ಏ.೩:ಮನುಷ್ಯ ಬದುಕಿದಷ್ಟು ದಿನ ಶಾಶ್ವತವಾಗಿ ಉಳಿಯುವಂತಹ ಕೆಲಸ ಮಾಡಿದಾಗ ಮಾತ್ರ ಹೆಸರು ಶಾಶ್ವತವಾಗಿ ಉಳಿಯುತ್ತದೆ ಎಂದು ಕೋಟಿಗಾನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆ.ವೈ.ಗಣೇಶ್‌ಗೌಡ ತಿಳಿಸಿದರು.
ನಗರದ ನಲ್ಲೂರಮ್ಮ ದೇವಿ ಅನಾಥಶ್ರಮದ ವಿದ್ಯಾರ್ಥಿಗಳಿಗೆ ಕಲಿಕಾ ಸಮಾಗ್ರಿಗಳ್ನು ವಿತರಿಸಿ ಮಾತನಾಡಿದ ಅವರು, ಬಾಲ್ಯದಲ್ಲಿಯೇ ತಂದೆ ತಾಯಿ ಮೃತಪಡುವುದರಿಂದ ಅನಾಥರಾಗುತ್ತಿದ್ದಾರೆ. ಅವರು ಸಮಾಜದಲ್ಲಿ ಸವಾಲುಗಳ ನಡುವೆ ಜೀವನ ರೂಪಿಸಿಕೊಳ್ಳಲು ಮುಂದಾಗುತ್ತಾರೆ. ಅಂತಹವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಜವಾಬ್ದಾರಿ ಸಂಘಸಂಸ್ಥೆಗಳ ಮೇಲಿದೆ ಎಂದು ಹೇಳಿದರು.
ಅನಾಥಶ್ರಮದ ಮಕ್ಕಳು ಸಮಾಜದಲ್ಲಿ ತಾವು ಒಬ್ಬಂಟಿಗರು ಎಂಬ ಯೋಚನೆಯನ್ನು ಬಿಟ್ಟು ಸಮಾಜದಲ್ಲಿ ಇತರಂತೆ ಬದುಕಿ ಮುಖ್ಯ ವಾಹಿನಿಗೆ ಬರುವಂತೆ ಆಗಬೇಕು. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಹೊಂದಲು ಸಹಕಾರ ನೀಡುವಂತಾಗಬೇಕು ಎಂದು ತಿಳಿಸಿದರು.
ಪ್ರತಿಯೊಬ್ಬ ಅನಾಥ ಮಗುವು ಸಹ ಪೊ?ಷಕರಿಂದ ದೂರವಾಗಿದ್ದೇವೆ ಎಂಬುವುದನ್ನು ಬಿಟ್ಟು ಸಂತೋಷವಾಗಿ ಇತರರೊಂದಿಗೆ ಜೀವನ ನಡೆಸುವ ಧೈರ್ಯ ತುಂಬಬೇಕು. ಪ್ರತಿಯೊಬ್ಬ ಮಗುವಿಗೂ ಸಹ ಶಿಕ್ಷಣ ಒಂದು ಪ್ರಮುಖ ಅಸ್ತ್ರವಾಗಿದ್ದು, ಇದನ್ನು ಮೈಗೂಡಿಸಿ ಕೊಳ್ಳುವ ನಿಟ್ಟಿನಲ್ಲಿ ಛಲದ ಮನೋಭಾವವನ್ನು ದಿನ ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ತಿಳಿಸಿದರು.
ಸರ್ಕಾರಿ ಮತ್ತು ಖಾಸಗಿ ಕಾರ್ಯಕ್ರಮಗಳಿಲ್ಲದೆ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿದೆ. ಇದನ್ನು ಮನಗಂಡು ತಮ್ಮ ಕೈಲಾದ ಸಹಾಯ ಮಾಡಬೇಕು. ಇಲ್ಲಿನ ನಲ್ಲೂರಮ್ಮ ಅನಾಥಶ್ರಮದ ಮಕ್ಕಳ ಅನುಕೂಲಕ್ಕಾಗಿ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಲಾಗುತ್ತದೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಯಲವಾರ ವಿಶ್ವನಾಥಗೌಡ, ಪುರುಷೋತ್ತಮ್, ಸತೀಶ್, ಶಿಕ್ಷಕ ಭುವನೇಶ್ವರ ಇದ್ದರು.