ಸೈದಾಪುರ:ಎ.28:ಪುರಾಣದಲ್ಲಿ ಭಗೀರಥನ ಕಥೆಗೆ ವಿಶೇಷ ಪ್ರಾಮುಖ್ಯತೆ ಇದೆ. ಲೋಕ ಕಲ್ಯಾಣಕ್ಕಾಗಿ ದೇವಲೋಕದ ಗಂಗೆಯನ್ನು ಭೂವಿಗೆ ತಂದು ಒಳಿತನ್ನು ಮಾಡಿದರು. ಉತ್ತಮ ಕಾರ್ಯಗಳಿಗೆ ಛಲ, ದೃಢ ಸಂಕಲ್ಪಬೇಕು ಎಂದು ಮುಖ್ಯಗುರು ಲಿಂಗಾರೆಡ್ಡಿ ನಾಯಕ ಹೇಳಿದರು.
ವಿದ್ಯಾ ವರ್ಧಕ ಸಂಘದ ವಿವಿಧ ವಿಭಾಗಗಳ ವತಿಯಿಂದ ಹಮ್ಮಿಕೊಂಡ ಶ್ರೀ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ದಾರ್ಶನಿಕರ ಜಯಂತಿ ಆಚರಣೆ ಮೂಲಕ ಅವರ ತತ್ವ ಆದರ್ಶಗಳನ್ನು ಪಾಲನೆ ಮಾಡಬೇಕು. ಸಮಾಜದ, ನಾಡಿನ, ದೇಶಕ್ಕೆ ಪೂರಕವಾದ ವ್ಯಕ್ತಿತ್ವ ಪ್ರತಿಯೊಬ್ಬರದಾಗಬೇಕು ಎಂದು ಕಿವಿ ಮಾತುಗಳನ್ನು ಹೇಳಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲ ಜಿ.ಎಂ.ಗುರುಪ್ರಸಾದ, ಕರಬಸಯ್ಯ ದಂಡಿಗಿಮಠ, ಉಪನ್ಯಾಸಕರಾದ ಸಾಬಯ್ಯ ರಾಯಪ್ಪನೋರ, ಆನಂದ ಪಾಟೀಲ ಕೊಂಡಾಪುರ, ಡಿ.ಎಲ್.ಎಡ್ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಸೇರಿದಂತೆ ಇತರರಿದ್ದರು.