ಉತ್ತಮ ಆಹಾರ ಸೇವನೆಯಿಂದ ಆರೋಗ್ಯ

ಕಲಬುರಗಿ,ಜೂ.9:ಉತ್ತಮ ಆಹಾರ ಸೇವನೆಯೇ ಆರೋಗ್ಯಕರ ಜೀವನಕ್ಕೆ ಮೂಲ ಜೌಷದಿ. ಆರೋಗ್ಯಕ್ಕೆ ಸಮತೋಲನ ಆಹಾರ ಅತ್ಯವಶಕವಾಗಿದ್ದು, ಪೌಷ್ಠಿಕಾಂಶವುಳ್ಳ ಆಹಾರ ಸೇವನೆ ಮಾಡುವ ಮೂಲಕ ಪೌಷ್ಠಿಕ ಮಟ್ಟವನ್ನು ಕಾಪಾಡಿಕೊಳ್ಳುವತ್ತ ಪ್ರತಿಯೊಬ್ಬರು ಗಮನಹರಿಸಬೇಕೆಂದು ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ದೇವಿಂದ್ರಪ್ಪ ವಿಶ್ವಕರ್ಮ ಹೇಳಿದರು.
ಅವರು ಜೇವರ್ಗಿ ನಗರದ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವಿಶ್ವ ಆಹಾರಸುರಕ್ಷತಾ ದಿನಾಚರಣೆಯಲ್ಲಿ ಪ್ರಶಿಕ್ಷಣಾರ್ಥಿ ಚಂದ್ರಕಲಾ ಅವರು ತಯಾರಿಸಿದ ವಿಶೇಷವಾದ ತರಕಾರಿ ಆಹಾರವನ್ನು ತಿನಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಅವರು ಸಿಹಿಯಾಗಿರುವ ಸೀತಾಫಲ್ ಹಣ್ಣಿನಲ್ಲಿ ವಿಟಾಮಿನ್, ಮಾಗ್ನೇಶಿಯಮ್, ಕ್ಯಾಲ್ಸಿಯಂ, ಐರನ್ ನಂತಹ ಅನೇಕ ಪೋಷಕಾಂಶಗಳಿವೆ. ಈ ಹಣ್ಣನ್ನು ನಿತ್ಯದ ಆಹಾರದಲ್ಲಿ ಸೇವಿಸುವುದರಿಂದ ಎಷ್ಟೋ ಕಾಯಿಲೆಗಳಿಂದ ರಕ್ಷಣೆ ಪಡೆದುಕೊಳ್ಳಬಹುದು. ಹಣ್ಣು ಮಾತ್ರವಲ್ಲ ಇದರ ಎಲೆಗಳು, ಬೇರುಗಳಿಂದ ಅನೇಕ ಉಪಯೋಗಗಳಿವೆ. ಪ್ರಕೃತಿಯ ಆಸರೆಯಿಂದ ಸರಳ ಹಾಗೂ ಸುಲಭವಾಗಿ ದೊರೆಯುವ ಆಹಾರ ಪದಾರ್ಥಗಳಾದ ಹಣ್ಣು, ತರಕಾರಿಗಳಿಂದ ನಾನಾ ಬಗೆಯ ರೋಗಗಳನ್ನು ನಿವಾರಿಸಬಹುದು ಎಂದರು. ಇತ್ತಿಚೀನ ದಿನಗಳಲ್ಲಿ ತಲೆನೊವು, ಕೆಮ್ಮು-ಕಫ, ಹಲ್ಲು ನೋವು, ಅಜೀರ್ಣದ ಸಮಸ್ಯೆ, ಮೂತ್ರ ತಡೆ, ಜ್ಞಾಪಕ ಶಕ್ತಿ ಸಮಸ್ಯೆ, ಹೃದಯ, ಕಿಡ್ನಿ ಕಿರಿಯರಿಂದ ಹಿಡಿದು ಹಿರಿಯ ನಾಗರಿಕರವರೆಗೂ ಸಮಸ್ಯೆಯಾಗಿದೆ. ಮನೆ ಆಯುರ್ವೇದ ಔಷದಿಗಳನ್ನು ವೈದ್ಯಕೀಯ ಚಿಕಿತ್ಸೆ ಸಿಗುವತನಕ, ಮನೆಯಲ್ಲಿ ಲಭ್ಯವಿರುವ ಆಹಾರ ಪದಾರ್ಥಗಳಿಂದ, ಸುಲಭವಾಗಿ ಲಭ್ಯವಾಗುವ ಗಿಡಮೂಲಿಕೆಗಳಿಂದ ತಾತ್ಕಾಲಿಕ ಉಪಶಮನ ಖಂಡಿತಾ ಸಿಗುತ್ತದೆ. ಮಾನವನು ಆರೋಗ್ಯಪೂರ್ಣವಾಗಿ ಜೀವಿಸಲು ಶುದ್ಧವಾದ ಆಕ್ಸಿಜನ್, ಕುಡಿಯುವ ನೀರು ಮತ್ತು ಆಹಾರ ಅವಶ್ಯಕವಾಗಿವೆ. ನಮ್ಮ ದೇಹಕ್ಕೆ ಬರುವ ಅನೇಕ ಕಾಯಿಲೆಗಳು ಇವುಗಳಿಗೆ ಸಂಬಂಧಿಸಿವೆ. ಶುಚಿಯಾದ, ಸತ್ವಯುತ ಮತ್ತು ಸಮತೋಲಿತವಾದ ಆಹಾರದ ಸೇವನೆಯಿಂದ ದೇಹವು ಆರೋಗ್ಯಪೂರ್ಣವಾಗಿರಲು ಸಾಧ್ಯವಿದೆ ಎಂದರು. ಈ ಸಂಧರ್ಭದಲ್ಲಿ ಡಾ. ಸೂರ್ಯಕಾಂತ ಕುಲಕರ್ಣಿ, ಗ್ರಂಥಪಾಲಕರಾದ ಸಿದ್ದಣ್ಣ ಹತಗುಂದಿ, ಉಪನ್ಯಾಸಕಿಯರಾದ ಕಾವೇರಿ ಘಾಟೆ, ಕವಿತಾದೇವಿ ಹಿರೇಮಠ, ಪ್ರಥಮ ದರ್ಜೆ ಸಹಾಯಕ ಅನಂತಕುಮಾರ ಸೇರಿ ಮುಂತಾದವರು ಹಾಜರಿದ್ದರು.