ಉತ್ತಮ ಆಹಾರವೇ ಅತ್ಯುತ್ತಮ ಆರೋಗ್ಯಕ್ಕೆ ಬುನಾದಿ

ಧಾರವಾಡ, ಸೆ.23: ಕೇಂದ್ರ ಸಂವಹನ ಇಲಾಖೆ, ಧಾರವಾಡ, ವಾರ್ತಾ ಮತ್ತು ಪ್ರಸಾರ ಸಚಿವಾಲಯ ಭಾರತ ಸರ್ಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಧಾರವಾಡ, ಕರ್ನಾಟಕ ಸರ್ಕಾರ ವತಿಯಿಂದ ಮಣ್ಕಿಲಾದ ಸಮಗಾರ ಹರಳಯ್ಯ ಸಮುದಾಯ ಭವನದಲ್ಲಿ ರಾಷ್ಟ್ರೀಯ ಪೋಷಣ ಮಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಡಾ. ಹುಲಿಗೆಮ್ಮ ಕುಕನೂರು ಉಪನಿರ್ದೇಶಕಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ನೆರೆದಿದ್ದವರನ್ನು ಉದ್ದೇಶಿಸಿ, ಪೌಷ್ಠಿಕಾಂಶ ಉಳ್ಳ ಆಹಾರವೇ ಉತ್ತಮವಾದ ಔಷಧಿ, ಮನೆಯಲ್ಲಿ ಸಿಗುವ ಧಾನ್ಯಗಳು, ಹಣ್ಣು ತರಕಾರಿಗಳೇ ಉತ್ತಮ ಆರೋಗ್ಯ ನೀಡುವ ಆಹಾರಗಳು. ಇದನ್ನು ಎಲ್ಲರೂ ಉಪಯೋಗಿಸಿ ಪೌಷ್ಠಿಕತೆ ಪಡೆಯಬಹುದು ಎಂದು ಹೇಳಿದರು.

ಕ್ಷೇತ್ರ ಪ್ರಚಾರ ಅಧಿಕಾರಿ ಶ್ರುತಿ.ಎಸ್.ಟಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಪೌಷ್ಠಿಕ ಮಾಸ ಕಾರ್ಯಕ್ರಮವು ಹೆಚ್ಚು ಜನರನ್ನು ತಲುಪಲು ದೇಶಾದ್ಯಂತ ಸಪ್ಟೆಂಬರ್ ತಿಂಗಳಲ್ಲಿ ವಿವಿಧ ಬಗೆಯ ಜನ-ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.

ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ.ಶೋಭಾರಾಣಿ ಮಾತನಾಡಿ, ಉತ್ತಮ ಆಹಾರದ ಜೊತೆಗೆ ಸ್ವಚ್ಚತೆಯನ್ನು ಕಾಪಾಡಿಕೊಂಡು ಅತ್ಯುತ್ತಮ ಆರೋಗ್ಯವನ್ನು ಪಡೆಯಬೇಕೆಂದು ಗರ್ಭಿಣಿ, ಬಾಣಂತಿಯರಿಗೆ, ಕಿಶೋರಿಯರಿಗೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ರುಚಿಯಾದ ಪೌಷ್ಠಿಕ ಆಹಾರ ಹಾಗೂ ಆರೋಗ್ಯವಂತ ಮಗು ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಡಾ.ಕಮಲಾ ಬೈಲೂರು, ಸಮುದಾಯ ಭವನದ ಮುಖ್ಯಸ್ಥರಾದ ಸುನಿಲ್ ಹೊಂಗಲ್, ರಮೇಶ್ ದೊಡ್ಡವಾಡ, ಕೇಂದ್ರ ಸಂವಹನ ಇಲಾಖೆ, ಮುರಳಿಧರ ಕಾರಭಾರಿ, ಅಂಗನವಾಡಿ ಮೇಲ್ವಿಚಾರಕಿಯರಾದ ಸಂತೋಷಿಮಾ ಪಾಟೀಲ, ಜಯಶ್ರೀ ಕೋರಿ, ಎಚ್.ಡಿ.ಎಮ್.ಸಿ ಹಾಗೂ ಮದಾರಮಡ್ಡಿ ಎರಡು ವಲಯಗಳ ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಮಹಿಳಾ ಸಂಘದ ಸದಸ್ಯೆಯರು ಮುಂತಾದವರು ಉಪಸ್ಥಿತರಿದ್ದರು. ಅಂಗನವಾಡಿ ಮೇಲ್ವಿಚಾರಕಿ ಸರೋಜಾ ಕಟ್ಟಿಮನಿ ಕಾರ್ಯಕ್ರಮ ನಿರೂಪಿಸಿ, ಅಂಗನವಾಡಿ ಕಾರ್ಯಕರ್ತೆ ಅಕ್ಕಮ್ಮ ಕ್ಯಾಡರ ಪ್ರಾರ್ಥಿಸಿದರು.