ಉತ್ತಮ ಆರೋಗ್ಯ ಯೋಗ ಮಾಡಿ: ಸಿಎಂ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಜೂ ೨೧: ಮನಸ್ಸು ದೇಹ ಮತ್ತು ದೇಶದ ಅಧ್ಯಾತ್ಮಿಕ ಚೈತನ್ಯ ಆರೋಗ್ಯಕರವಾಗಿ ಇರಬೇಕಾದರೆ ಯೋಗ ಮಾಡಿ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ
ಜಿಲ್ಲೆಯ ತೋರಗಲ್ಲಿನ ಜಿಂದಾಲ್ ಕಾರ್ಖಾನೆಯ ವಿದ್ಯಾನಗರದಲ್ಲಿ
ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹರಿಹರದ ಶ್ವಾಸಯೋಗ ಸಂಸ್ಥೆ ಮತ್ತು ಸಂಡೂರಿನ ಸಂತೋಷ್ ಲಾಡ್ ಫೌಂಡೇಷನ್ ಆಯೋಜಿಸಿದ್ದ “ಯೋಗ ರತ್ನ-೨೦೨೪” ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಿದ್ದರು. ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಘೋಷಣೆ ಮಾಡುವುದಕ್ಕೆ ಮೊದಲೇ ನಾನು ರಾಜ್ಯದಲ್ಲಿ ಯೋಗದಿನವನ್ನು ಆಚರಿಸುವ ಮೂಲಕ ಯೋಗ ವಿಜ್ಞಾನವನ್ನು ಜನರಲ್ಲಿ ವಿಸ್ತರಿಸುವ ಕಾರ್ಯಕ್ಕೆ ಮುಂದಾಗಿದೆಂದರು.
ಮನಸ್ಸು , ದೇಹ, ಅಧ್ಯಾತ್ಮಿಕ ಚೈತನ್ಯ ಆರೋಗ್ಯಕರವಾಗಿ ಇರಬೇಕಾದರೆ ಯೋಗ ಮಾಡಬೇಕು. ಇದರಿಂದ ಮನಸ್ಸು, ದೇಹ ಮತ್ತು ದೇಶ ರೋಗ ರಹಿತವಾಗಿ ಸಮಾಜಮುಖಿಯಾಗಿ ಬೆಳೆಯುತ್ತದೆ ಎಂದರು.
ವಿವಿಧ ಮಠಾಧೀಶರು, ಸಚಿವ ಸಂತೋಷ್ ಲಾಡ್, ಸಂಸದ ಈ.ತುಕಾರಾಂ, ಮಾಜಿ ಸಚಿವ ಮುರುಗೇಶ್ ನಿರಾಣಿ ಸೇರಿ ಹಲವರು ಉಪಸ್ಥಿತರಿದ್ದರು.