ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯ ಸೇವನೆ ಅಗತ್ಯ

ಸಿರಾ, ನ. ೨೧- ಸಿರಿಧಾನ್ಯಗಳು ಮನುಷ್ಯನ ಆರೋಗ್ಯ ಸ್ಥಿರವಾಗಿರಿಸುವಲ್ಲಿ ಹೆಚ್ಚು ಸಹಕಾರಿ. ಇಂತಹ ಸಿರಿಧಾನ್ಯಗಳ ಅವಶ್ಯಕತೆಗಳನ್ನು ನಾಡಿನ ಜನರಿಗೆ ಯರಗುಂಟೆಯಂತಹ ಪುಟ್ಟ ಗ್ರಾಮದ ಉದ್ಯಮಿ ದಿಲೀಪ್ ಸೇವೆ ಮೆಚ್ಚುವಂತಹದ್ದು. ಸಾಧಿಸುವ ಗುರಿ ನಿಶ್ಚಲವಾಗಿದ್ದರೆ ಯಶಸ್ಸು ತಾನಾಗಿಯೇ ಬರಲಿದೆ ಎಂದು ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ ಹೇಳಿದರು.
ತಾಲ್ಲೂಕಿನ ಯರಗುಂಟೆ ಗ್ರಾಮದಲ್ಲಿ ಜಿನಿ ಸಿರಿಧಾನ್ಯಗಳ ಪೂರೈಕೆ ಮಿತ್ರರು ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಮ್ಮ ಮಾತೆಯಂತೆ ನಮ್ಮ ನಾಡು-ನುಡಿಗೆ ಅತ್ಯಂತ ಗೌರವದಿಂದ ಕಾಣುವಂತ ಸಂಸ್ಕಾರವನ್ನು ಪ್ರತಿಯೊಬ್ಬ ಕನ್ನಡಿಗರು ಮೈಗೊಡಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಭಾಷೆಗೆ ಭದ್ರ ಬುನಾದಿಯಿದ್ದು, ಇದನ್ನು ಉಳಿಸಿ ಬೆಳೆಸುವಂತ ಹೊಣೆಗಾರಿಕೆ ಪ್ರತಿಯೊಬ್ಬ ಯುವಕನ ಕರ್ತವ್ಯವಾದಾಗ ಕನ್ನಡ ಭಾಷೆಯ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಸಿರಾ ನಗರ ಸಿಪಿಐ ಹನುಮಂತಪ್ಪ, ಪಿಎಸ್‌ಐ ಭಾರತಿ, ಜಿನಿ ಸಿರಿಧಾನ್ಯ ಪ್ರಾಡೆಕ್ಟ್‌ನ ದಿಲೀಪ್, ಕರ್ನಾಟಕ ನ್ಯೂಸ್‌ನ ಶಿವು, ಪತ್ರಕರ್ತ ಫಕೃದೀನ್ ಬಾಬು, ಶಿಕ್ಷಕ ಅನಿಲ್, ಅಮ್ಮಾಜಮ್ಮ ಮತ್ತಿತರರು ಉಪಸ್ಥಿತರಿದ್ದರು.