ಉತ್ತಮ ಆರೋಗ್ಯಕ್ಕೆ ಶುಚಿ ರುಚಿ ಆಹಾರ ಅವಶ್ಯ: ಕಲ್ಮಠ


(ಸಂಜೆವಾಣಿ ವಾರ್ತೆ)
ಬಳ್ಳಾರಿ: ಜ 10- ಉತ್ತಮ ಆರೋಗ್ಯಕ್ಕೆ  ಶುಚಿ, ರುಚಿಯಾದ ಆಹಾರ ಸೇವನೆ ಅವಶ್ಯ. ಆದರೆ ಇತ್ತೀಚೆಗೆ ಹೊರಗಿನ ಆಹಾರಕ್ಕೆ ಮಕ್ಕಳು ಆಕರ್ಷಿತರಾಗಿ ಆರೋಗ್ಯ ಹದಗೆಡಿಸಿಕೊಳ್ಳುತ್ತಿದ್ದಾರೆಂದು  ನಗರದ ಕಿತ್ತೂರು ರಾಣಿ ಚೆನ್ನಮ್ಮ ಪ್ರಾಥಮಿಕ ಹಾಗೂ ಬಾಲಕಿಯರ ಪ್ರೌಢಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಸಿದ್ದರಾಮ‌ ಕಲ್ಮಠ ಅವರ  ಅಭಿಪ್ರಾಯವಾಗಿದೆ.
ತಮ್ಮ ಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ “ಶುಚಿ – ರುಚಿ ಆಹಾರ ಸ್ಪರ್ಧೆ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಶಾಲೆಗಳಲ್ಲಿ ಈ ರೀತಿಯ ಅಡುಗೆಯ ಸ್ಪರ್ಧೆ ಆಯೋಜಿಸುವದರಿಂದ  ವಿದ್ಯಾರ್ಥಿಗಳಲ್ಲಿ ಅಡುಗೆ ಕಲಿಯುವ  ಮನೋಭಾವನೆ ಬೆಳೆದು ನಮ್ಮ‌ಹಳೆಯ ಆಹಾರ ಪದ್ದತಿ ,ಮನೆಯ ಅಡುಗೆಯ ಬಗ್ಗೆ ಅರಿತುಕೊಳ್ಳಲು ಸಹಾಯವಾಗುತ್ತದೆಂದರು.
ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿವಿಧ ರೀತಿಯ   ತಿನಿಸುಗಳನ್ನು ,ಪ್ರೌಢಶಾಲೆಯ  ವಿದ್ಯಾರ್ಥಿನಿಯರು ತಾವೇ ಸ್ವತಃ ತಯಾರಿಸಿದ ವಿವಿಧ ಬಗೆಯ ಹಬ್ಬದ ಸಿಹಿ ರುಚಿಯ ಅಡುಗೆಯನ್ನು ಉತ್ಸಾಹದಿಂದ  ತಯಾರಿಸಿದ್ದು ಮೆಚ್ಚುಗೆ ಪಡೆಯಿತು.
 ಸ್ಪರ್ಧೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಸಹಕರಿಸಿದ ಆಡಳಿತ ಮಂಡಳಿ,ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳ ಪಾಲಕರ ಪ್ರೋತ್ಸಾಹ ಶ್ಲಾಘನೀಯವೆಂದು ತೀರ್ಪುಗಾರರು ಹೇಳಿದರು.
ಶಾಲೆಯ ಆಡಳಿತ ಮಂಡಳಿ ಸದಸ್ಯರಾದ ಆರ್.ಜೆ.ಸುಜಾತ,ಕೆ.ವಿ.ವೀಣಾ,ಯಂ.ಮಂಜುನಾಥಗೌಡ,
ಪಿ.ಬಸವರಾಜಗೌಡ,ಎಸ್.ಟಿ.ಎಂ.ಸದಾಶಿವ ,  ಮತ್ತು ಕರೂರು ವಿರುಪಾಕ್ಷಗೌಡ, ಐ.ಎಂ.ಮಹೇಶ್ ಹಾಗೂ ತೀರ್ಪುಗಾರರಾಗಿ ಆಗಮಿಸಿದ್ದ ಎಸ್.ಎಂ
ಉಷಾರಾಣಿ,ಪ್ರಿಯಾ ರವೀಂದ್ರ,ಪಿ.ಉಷಾರಾಣಿ,
ಮುಕ್ತಾ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಪಿ. ಕಟ್ಟೆಮ್ಮ, ಎಂ.ಗಿರಿಜ,ತಿಪ್ಪೇರುದ್ರ ಇದ್ದರು.