ಉತ್ತಮ ಆರೋಗ್ಯಕ್ಕೆ ವ್ಯಾಯಾಮ ಅತ್ಯಗತ್ಯ :ಎ.ಡಿ.ಜಿ.ಪಿ. ಅಲೋಕ್ ಕುಮಾರ್

ವಿಜಯಪುರ:ಜ:7: ನಾವು ಫಿಟ್‍ನೆಸ್ ಇದ್ದಾಗ ಮಾತ್ರ ನಾವುಗಳು ಆರೋಗ್ಯವಂತರಾಗಿರಲು ಸಾಧ್ಯ ಎಂದು ಕೆ.ಎಸ್.ಆರ್.ಪಿ ಎ.ಡಿ.ಜಿ.ಪಿ ಅಲೋಕ ಕುಮಾರ ಹೇಳಿದರು.

 ಇಂದು ನಗರದ ಗೋಳಗುಮಟ್ಟ ಆವರಣದಲ್ಲಿ ಇಂಡಿಯಾ ರಿಸರ್ವ ಬಟಾಲಿಯನ್ ವಿಜಯಪುರ. ಆಯೋಜಿಸಿದ ರನ್ ಫಾರ್ ಫಿಟ್ ಇಂಡಿಯಾ ಗೋಳಗುಮ್ಮಟದಿಂದ ಬಿ.ಎಲ್.ಡಿ.ಇ ಪ್ರವೇಶ ದ್ವಾರದ ವರೆಗೆ ಆರೋಗ್ಯಕ್ಕಾಗಿ ಓಟ  ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಾವು  ದಿನನಿತ್ಯ ಕ್ರೀಡೆ, ವ್ಯಾಯಾಮ, ಯೋಗ ಮಾಡುವುದರಿಂದ ಲವಲವಿಕೆಯಿಂದಿರಲು ಸಾಧ್ಯ .ಅದು ಅಲ್ಲದೆ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಇನ್ನಿತರ ರೋಗಗಳಿಂದಲೂ ದೂರವಿದ್ದು ಸದೃಡರಾಗಬಲ್ಲೆವು ಎಂದು ಹೇಳಿದರು.

ಆರೋಗ್ಯ ಕೇವಲ ಪೆÇಲೀಸ ಇಲಾಖೆ, ಕ್ರೀಡಾ ಇಲಾಖೆ ಇನ್ನಿತರ ಇಲಾಖೆಗಳಿಗೆ ಸೀಮಿತ ಅಲ್ಲ. ಎಲ್ಲ ಸಾರ್ವಜನಿಕರಿಗೂ ಆರೋಗ್ಯ ಅತಿ ಅವಶ್ಯಕ ಆರೋಗ್ಯವಂತರಿದ್ದಾಗ ಮಾತ್ರ ನಾವು ದಿನನಿತ್ಯ ಕೆಲಸ ಕಾರ್ಯಗಳಲ್ಲಿ ಉತ್ಸಾಹದಿಂದಿರಲು ಸಾಧ್ಯ .ಶಾರಿರೀಕವಾಗಿ ಕಾಯಿಲೆ ಹೊಂದಿದವರು ಮಾತ್ರ ಕಾಯಿಲೆ ಸಹಿಸಿಕೊಳ್ಳಬಲ್ಲರು . ಮತ್ತೊಬ್ಬರೊಂದಿಗೆ ಹಂಚಿಕೊಳ್ಳಲು ಸಾಧ್ಯವಿಲ್ಲ.

   ಜೀವನದಲ್ಲಿ ದುಡ್ಡು ಸಂಪಾದನೆ ಮಾತ್ರ ಸಂಪಾದನೆಯಲ್ಲ. ಅದರೊಂದಿಗೆ ಆರೋಗ್ಯ ಸಂಪತ್ತು ಕೂಡ ಹೊಂದಬೇಕಾಗುತ್ತದೆ. ನಾವು ಆರೋಗ್ಯವಂತರಿದ್ದಾಗ  ನಮ್ಮ ಮಕ್ಕಳು ಹಾಗೂ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಫಿಟ್‍ನೆಸ್ ಕುರಿತು ಪೆÇೀಲಿಸ್ ಇಲಾಖೆ ಹಾಗೂ ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸುವುದು ಅಗತ್ಯ ಎಂದ ಅವರು ಕರೋನ ಕುರಿತು ನಿಷ್ಕಾಳಜಿ ಹೊಂದಬಾರದು. ಎಲ್ಲರೂ ಮಾಸ್ಕ ಧರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅತ್ಯಗತ್ಯ.ನಾವು ದಿನ ನಿತ್ಯ ಕ್ರೀಡೆಗಳಲ್ಲಿ ಭಾಗವಹಿಸುವುದರೊಂದಿಗೆ ಆರೋಗ್ಯ ಕಾಪಾಡಕೊಳ್ಳೋಣ, ಸ್ವಸ್ಥ ವಿಜಯಪುರವನ್ನು ಕಟ್ಟೋಣ. ಎಲ್ಲರೂ ಆರೋಗ್ಯವಂತರಾಗೋಣ ಎಂದು ಅವರು ಹೇಳಿದರು.

  ತಮ್ಮ ಸೇವೆಯ ದಿನಗಳನ್ನು  ನೆನೆಪಿಸಿಕೊಳ್ಳುತ್ತ ವಿಜಯಪುರ ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧವನ್ನು ಸ್ಮರಿಸಿದರು. ಐ.ಆರ್.ಬಿ ಪೆÇೀಲಿಸ್ ಇನ್ಸ್ಪೆಕ್ಟರ ಮಹಾಂತೇಶ ಇಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.


     ಕಾರ್ಯಕ್ರಮದಲ್ಲಿ ವಿಜಯಪುರದ ಐ.ಆರ್.ಬಿ ಕಮಾಂಡೆಂಟ್ ಎಸ್.ಡಿ ಪಾಟೀಲ, ಹೆಚ್ಚುವರಿ  ಪೆÇಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ದಿ, ಕಮಾಂಡೆಂಟ್ ಪ್ರಿನ್ಸಿಪಾಲಗಳಾದ ಡಾ.ರಾಮಕೃಷ್ಣ ಮುದ್ದೇಪಾಲ, ಬಸವರಾಜ ಜಿಳೆ, ರಮೇಶ ಮೋರಗಾವಿ, ಕ್ರೀಡಾಧಿಕಾರಿ  ಎಸ್ ಜಿ.ಲೋನಿ ,ಜಂಟಿ ನಿರ್ದೇಶಕ ಎಂ.ಆರ್ ರಮೇಶ,ಸಿ.ಎ.ಎ ರಾಕೇಶ ಎಸ್.ಬಿ.ಐ ಬ್ಯಾಂಕ್ ಮ್ಯಾನೇಜರ್ ರವೀಂದ್ರ ರತ್ನಾಕರ ಹಾಗೂ ಇತರರು ಉಪಸ್ಥಿತರಿದ್ದರು.

ಆರೋಗ್ಯಕ್ಕಾಗಿ ಓಟದಲ್ಲಿ ಭಾಗವಹಿಸಿದ ಡೈನಾಮಿಕ್ ಸ್ಪೋಟ್ರ್ಸನ ವಿಜಯಪುರ ಶುಬಂ ಬಿಸೆ, ಪುಟಬಾಲ್ ಟೀಮ್ ಡಿಸ್ಟಿಕ್ಟ ಸ್ಟೇಡಿಯಂನ ವಾಯ್.ಬಿ ಜಂಪಲೆ, ಬಾಸ್ಕೆಟ್ ಬಾಲ್ ಟೀಮ್‍ನ ಎಸ್.ಎಸ್ ಕೋಟ್ಯಾಳ, ಅಥ್ಲೆಟಿಕ್ಸ್ ಟೀಮ್ ಗೋಪಾಲ ಲಮಾಣಿ, ಕರಾಟೆ ಅಸೋಶಿಯೇಶನ್‍ನ ಎ.ಎಸ್ ಪಟೇಲ ಹಾಗೂ ಬಿ.ಎಲ್.ಡಿ.ಇ ಇಂಜಿನೀಯರ್ ಕಾಲೇಜ ಸ್ಪೋಟ್ರ್ಸ್‍ನ ಭಾರತಿ ಮಠಪತಿ ಇವರಿಗೆ ಪಾರಿತೊಷಕಗಳನ್ನು ವಿತರಿಸಲಾಯಿತು. ಪೆÇೀಲಿಸ್ ಇನ್ಸ್ಪೆಕ್ಟರ ಮಹಾಂತೇಶ ಇಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.