ಉತ್ತಮ ಆರೋಗ್ಯಕ್ಕೆ ತ್ಯಾಜ್ಯಗಳ ವಿಂಗಡಣೆ ಅವಶ್ಯ:ಉದಯಕುಮಾರ

ತಾಳಿಕೋಟೆ:ಸೆ.10: ನಮ್ಮ ನಿತ್ಯ ಜೀವನದಲ್ಲಿ ಬಳೆಸಲಾಗುತ್ತಿರುವ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಾ ಸಾಗಿದ್ದರ ಪರಿಣಾಮ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ರೋಗಗಳು ಹುಟ್ಟುಕೊಳ್ಳುತ್ತಾ ಸಾಗಿವೆ ಇದನ್ನು ತಪ್ಪಿಸಲು ಕಸದ ತ್ಯಾಜ್ಯಗಳನ್ನು ವಿಂಗಣೆ ಮಾಡುವದರ ಜೊತೆಗೆ ಜಾಗೃತಿಕೈಗೊಳ್ಳುವಂತಹ ಕಾರ್ಯ ಮಾಡಬೇಕಿದೆ ಎಂದು ತಾಳಿಕೋಟೆ ಪುರಸಭೆ ಮುಖ್ಯಾಧಿಕಾರಿ ಉದಯಕುಮಾರ ಘಟಕಾಂಬಳೆ ಅವರು ಹೇಳಿದರು.
ಶನಿವಾರರಂದು ಪಟ್ಟಣದ ಸರ್ಕಾರಿ ಪಧವಿಪೂರ್ವ ಕಾಲೇಜ್‍ನಲ್ಲಿ ಪೌರಾಡಳಿತ ನಿರ್ದೇಶನಾಲಯ ಬೆಂಗಳೂರ, ಜಿಲ್ಲಾಡಳಿತ ಮತ್ತು ಜಿಲ್ಲಾ ನಗರಾಭಿವೃದ್ದಿ ಕೋಶ ವಿಜಯಪುರ, ಪುರಸಭೆ ಕಾರ್ಯಾಲಯ ತಾಳಿಕೋಟೆ ಇವರ ವತಿಯಿಂದ ಸನ್ 2023ನೇ ಸಾಲಿನ ಸಪ್ಟಂಬರ್-ಅಕ್ಟೋಬರ್-ನವ್ಹೇಂಬರ್ ತಿಂಗಳ ತ್ರೈಮಾಸಿಕ ಅಭಿಯಾನ ಅಂಗವಾಗಿ ತ್ಯಾಜ್ಯ ವಿಂಗಡಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು ಕಸವನ್ನು ಎಲ್ಲೆಂದರಲ್ಲಿ ಎಸೆಯುವದರಿಂದ ಪರಿಸರ ಹಾಳಾಗುವದರ ಜೊತೆಗೆ ಆರೋಗ್ಯವೂ ಕೂಡಾ ಹಾಳಾಗುತ್ತದೆ ಮನೆಯಿಂದ ಬರುವಾಗ ಬಟ್ಟೆ ಕೈಚೀಲಗಳನ್ನು ತರುವದರ ಜೊತೆಗೆ ನಿತ್ಯ ಬಳಕೆಯ ವಸ್ತುಗಳನ್ನು ಖರೀದಿಸುವಂತಹ ಕೆಲಸ ವಾಗಬೇಕಿದೆ ಪುರಸಭೆಯ ವತಿಯಿಂದ ಈಗಾಗಲೇ ಕಸಗಳ ಸಂಗ್ರಹಣೆಗೆ ಮನೆ ಭಾಗೀಲಿಗೆ ವಾಹನಗಳು ಬರುತ್ತಿವೆ ಕಸಗಳನ್ನು ಚರಂಡಿ ಇನ್ನಿತರ ಕಡೆಗಳಲ್ಲಿ ಎಸೆಯದೇ ವಾಹನದಲ್ಲಿ ಹಾಕುವಂತೆ ಆಗಬೇಕು ಒಣಕಸ, ಹಸಿಕಸ ಬೇರ್ಪಡಿಸಿಡಬೇಕು ಅದರ ಜೊತೆಗೆ ಅಪಾಯಕಾರಿ ತ್ಯಾಜ್ಯ ಮತ್ತು ಇಲೇಕ್ಟ್ರಾನಿಕ್ ತ್ಯಾಜ್ಯಗಳನ್ನು ಬೇರ್ಪಡಿಸಿ ಹಾಕಬೇಕು ಇದರಿಂದ ಸುಂದರ ನಗರದ ಜೊತೆಗೆ ಉತ್ತಮ ಆರೋಗ್ಯವನ್ನು ಎಲ್ಲರೂ ಹೊಂದಲು ಸಾಧ್ಯವಾಗುತ್ತದೆ ಎಂದು ಕಸ ವಿಂಗಡಣೆಯ ಬಗ್ಗೆ ವಿವರಿಸಿದರು.
ಇನ್ನೋರ್ವ ಪುರಸಭೆಯ ಆರೋಗ್ಯ ವಿಭಾಗದ ಅಧಿಕಾರಿ ಶಿವಾನಂದ ಜುಮನಾಳ ಅವರು ಮಾತನಾಡಿ ಒಂದೇ ಭಾರಿ ಬಳಕೆ ಮಾಡುವ ಪ್ಲಾಸ್ಟಿಕ್‍ಗಳನ್ನು ಈಗಾಗಲೇ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ನಿಷೇಧಿಸಿದೆ ಅಂತಹ ಪ್ಲಾಸ್ಟಿಕ್‍ಗಳನ್ನು ಯಾರೂ ಬಳಕೆ ಮಾಡದೇ ನಿತ್ಯ ಜೀವನಕ್ಕೆ ಬಟ್ಟೆ ಉಪಯುಕ್ತ ಚೀಲಗಳನ್ನು ಬಳೆಸುವಂತಾಗಬೇಕು ಇದರಿಂದ ಪರಿಸರವನ್ನು ಸಂರಕ್ಷೀಸಲು ಪ್ರತಿಯೊಬ್ಬರು ಕೈಜೋಡಿಸಿದಂತಾಗುತ್ತದೆ ಎಂದ ಅವರು ಹಸಿ ಕಸ ಎಂದರೆ ನಿತ್ಯ ಮನೆಯಲ್ಲಿ ಬಳಕೆ ಮಾಡುವ ಕಾಯಪಲ್ಲೆ, ತಿಂಡಿ, ತಿನಿಸು ಉಳಿದ ಕೊಳೆಯುವಂತಹ ಪದಾರ್ಥವಾಗಿದೆ ಒಣ ಕಸವೆಂದರೆ ಯಾವತ್ತಿಗೂ ಕೊಳೆಯದೇ ಪರಿಸರಕ್ಕೆ ಹಾನಿ ಉಂಟುಮಾಡುವ ನಿತ್ಯ ಪ್ಲಾಸ್ಟಿಕ್, ಗಾಜಿನ ಚೂರುಗಳು, ಕಟ್ಟಿಗೆ ಚೂರುಗಳು ಒಳಗೊಂಡಿವೆ ಇವುಗಳ ಉಪಯೋಗಿಸುವದರ ಬಗ್ಗೆ ಏಚ್ಚರವಹಿಸುವದರ ಜೊತೆಗೆ ಪುರಸಭೆಯ ಕಸ ವಿಲೇವಾರಿ ವಾಹನಕ್ಕೆ ನೀಡುವಂತಹ ಕಾರ್ಯವಾಗಬೇಕು ಇದರಲ್ಲಿ ಅಪಾಯಕಾರಿ ತ್ಯಾಜ್ಯದ ಕಸವೂ ಬರುತ್ತದೆ ವೈಧ್ಯರು ಬಳಕೆ ಮಾಡಿದ ಸೀರಿಂಜ್, ಮತ್ತು ಸಲೈನ್ ಬಾಟಲಿ, ಇನ್ನಿತರವಾದ ವಸ್ತುಗಳು ಅಪಾಯಕಾರಿಯಾಗಿವೆ ಇವುಗಳು ಎಲ್ಲೆಂದರಲ್ಲಿ ಎಸೆಯುವದರಿಂದ ತಿರುಗಾಡುವ ಜನರಿಗೆ ಮತ್ತು ಧನಕರುಗಳಿಗೆ ಚುಚ್ಚಿದರೆ ವಿಚೀತ್ರ ರೋಗಗಳು ಹುಟ್ಟುಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ ಎಂದ ಅವರು ಇಲೇಕ್ಟ್ರಾನಿಕ್ ವಸ್ತುಗಳಾದ ಟಿವಿ, ಬ್ಯಾಟರಿ, ಬಲ್ಪು ಒಳಗೊಂಡಂತೆ ಇನ್ನಿತರ ವಸ್ತುಗಳು ಬರುತ್ತಿದ್ದು ಇವುಗಳ ಬಗ್ಗೆಯೂ ಯಾರೂ ನಿರ್ಲಕ್ಷ ವಹಿಸದೇ ವಸ್ತುಗಳ ಬಳಕೆಯ ಜೊತೆಗೆ ಅವುಗಳನ್ನು ನಿರ್ದಿಷ್ಟ ಪಡಿಸಿದ ಪುರಸಭೆಯ ಕಸ ವಿಲೇವಾರಿ ವಾಹನಕ್ಕೆ ನೀಡುವಂತಾಗಬೇಕು ಇದರಿಂದ ಉತ್ತಮ, ಸುಂದರ ನಗರ, ಮತ್ತು ಉತ್ತಮ ಆರೋಗ್ಯವಂತ ನಗರವನ್ನು ಕಟ್ಟಲು ಸಾಧ್ಯವಾಗುತ್ತದೆ ವಿಧ್ಯಾರ್ಥಿಗಳು ಈ ದೆಸೆಯಲ್ಲಿ ಮನೆಯಲ್ಲಿ ಮತ್ತು ತಮ್ಮ ಬಡಾವಣೆಗಳಲ್ಲಿ ಜಾಗೃತಿ ಪಡಿಸುವಂತಹ ಕಾರ್ಯದಲ್ಲಿ ತೊಡಗಿಕೊಳ್ಳಬೇಕೆಂದು ಕಸ ವಿಂಗಡಣೆಯ ಬಗ್ಗೆ ವಿವರಿಸಿದರು.
ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಪುರಸಭೆ ಮುಖ್ಯಾಧಿಕಾರಿ ಉದಯಕುಮಾರ ಘಟಕಾಂಬಳೆ ಅವರು ಉದ್ಘಾಟಿಸಿದರು.
ಈ ಸಮಯದಲ್ಲಿ ಸರ್ಕಾರಿ ಪಧವಿಪೂರ್ವ ಕಾಲೇಜ್‍ನ ಪ್ರಾಚಾರ್ಯ ಶ್ರೀಮತಿ ಅಕ್ಕಮಹಾದೇವಿ ಬಾರಕೇರ, ಪ್ರೋ.ವಸಂತ ಪಂಡಿತ, ಕುಮಾರಿ ಮೇಘಾ ಬಳಗಾನೂರ, ಮೊದಲಾದವರು ಉಪಸ್ಥಿತರಿದ್ದರುಮಲ್ಲಿಕಾರ್ಜುನ ವಸ್ತ್ರದ ನಿರೂಪಿಸಿದರು. ಭಾಗ್ಯಶ್ರೀ ಬಡಿಗೇರ ವಂದಿಸಿದರು.

ನಿತ್ಯ ಜೀವನದಲ್ಲಿ ಬಳಕೆ ಮಾಡುವ ಪ್ರತಿಯೊಂದರಲ್ಲಿಯೂ ಕಸವೆಂಬುದು ಹುಟ್ಟಿಕೊಳ್ಳುತ್ತದೆ ಅದನ್ನು ಎಲ್ಲೆಂದರಲ್ಲಿ ಎಸೆಯುವದರಿಂದ ಆರೋಗ್ಯದ ಮೇಲೆ ದುಸ್ಪರಿಣಾಮ ಬೀರುತ್ತಾ ಸಾಗಿದೆ ಪ್ರತಿ ವಿಧ್ಯಾರ್ಥಿಯು ಈಗೀನಿಂದಲೇ ಜಾಗೃತರಾಗುವದರ ಜೊತೆಗೆ ಮನೆಗಳಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯ ಮಾಡಿದರೆ ಸ್ವಚ್ಚನಗರ ಪರಿಸರ ಪೂರಕ ನಗರ ನಿರ್ಮಾಣ ಮಾಡಲು ಸಾದ್ಯವಾಗುತ್ತದೆ.

ಶಿವಾನಂದ ಜುಮನಾಳ
ಪುರಸಭೆ ಆರೋಗ್ಯ ಅಧಿಕಾರಿ