ಉತ್ತಮ ಆರೋಗ್ಯಕ್ಕೆ ಕ್ರೀಡೆ ಅವಶ್ಯಕ – ಗಿರಿಜಾ

ರಾಯಚೂರು,ಆ.೦೧- ಪ್ರತಿಯೊಬ್ಬ ವಿದ್ಯಾರ್ಥಿಯೂ ಮಾನಸಿಕವಾಗಿ, ದೈಹಿಕವಾಗಿ ಹಾಗೂ ಉತ್ತಮವಾಗಿ ಆರೋಗ್ಯ ಪಡೆಯಲು ಕ್ರೀಡೆಗಳು ಜೀವನದಲ್ಲಿ ಬಹಳ ಅವಶ್ಯಕ ಎಂದು ಸಿಎಮ್‌ಎನ್ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಗಿರಿಜಾ ವಕೀಲರು ಹೇಳಿದರು.
ನಗರದ ಎಸ್‌ಎಸ್‌ಆರ್‌ಜಿ ಮಹಿಳಾ ಮಹಾವಿದ್ಯಾಲಯದಲ್ಲಿ೭೫ನೇ ಆಜಾಧಿಕಾ ಅಮೃತ ಮಹೋತ್ಸವದ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ತಾರಾನಾಥ್ ಶಿಕ್ಷಣ ಸಂಸ್ಥೆಯ ಎಲ್ಲಾ ಮಹಾವಿದ್ಯಾಲಯಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರಿಗೆ ತಾರಾನಾಥ್ ಶಿಕ್ಷಣ ಸಂಸ್ಥೆಯ ಕ್ರೀಡಾ ಸಮಿತಿಯ ನಿರ್ಣಯದಂತೆ ಥ್ರೋಬಾಲ್ ಪಂದ್ಯಾವಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಕ್ರೀಡೆ ಮುಂತಾದ ದೈಹಿಕ ಮತ್ತು ಮಾನಸಿಕ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಕಲಿಕಾ ಶಕ್ತಿ ಜೊತೆಗೆ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಮತ್ತಷ್ಟು ಉತ್ತಮವಾಗಿರುತ್ತದೆ ಜೊತೆಗೆ ಪ್ರತಿಯೊಬ್ಬರ ಆರೋಗ್ಯದ ದೃಷ್ಟಿಯಿಂದ ಸ್ನೇಹಪೂರ್ವಕವಾಗಿ ಭಾಗವಹಿಸಲು ಬೋಧಕ ಭೋದಕೆ ತರ ಸಿಬ್ಬಂದಿ ಅವರಿಗೂ ಕೂಡ ಆಯೋಜಿಸಿರುವುದು ತುಂಬಾ ಹರ್ಷದಾಯಕ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ತಾರಾನಾಥ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನಂದಾಪುರ್ ಶ್ರೀನಿವಾಸ್ ಇವರು ಮಾತನಾಡಿ,ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರೂ ವ್ಯವಸಾಯದಲ್ಲಿ ತೊಡಗಿಕೊಂಡು ತೊಡಗಿಸಿಕೊಂಡು ಉತ್ತಮ ಆಹಾರವನ್ನು ಸೇವಿಸಿ ನೂರಾರು ವರ್ಷಗಳ ಕಾಲ ಜೀವನ ನಡೆಸುತ್ತಿದ್ದರು.ಇತ್ತೀಚಿನ ದಿನಮಾನಗಳಲ್ಲಿ ಮನುಷ್ಯ ಹಲವಾರು ರೀತಿಯ ರೋಗಗಳಿಗೆ ಒಳಪಡುತ್ತಿದ್ದು ಈ ನೆಟ್ಟಿನಲ್ಲಿ ಮನುಷ್ಯ ಆರೋಗ್ಯವಾಗಿ ಜೀವನ ನಡೆಸಲು ಕ್ರೀಡೆಗಳಲ್ಲಿ ಭಾಗವಹಿಸುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು.
ವೀರಭದ್ರಪ್ಪ ವಕೀಲರು ಮಾತನಾಡಿದ, ಕ್ರೀಡೆಗಳಿಂದ ಬುದ್ಧಿ ಚುರುಕಾಗುವುದು ಆದ್ದರಿಂದ ಕಡ್ಡಾಯವಾಗಿ ವಿದ್ಯಾರ್ಥಿಗಳು ಶಿಕ್ಷಕರು ಕ್ರೀಡೆಗಳಲ್ಲಿ ಸ್ಪೂರ್ತಿಯಿಂದ ಹಾಗೂ ಸ್ನೇಹಜೀವಿಯಾಗಿ ಭಾಗವಹಿಸಬೇಕು ಎಂದು ಹೇಳಿದರು.
ತಾರಾನಾಥ ಶಿಕ್ಷಣ ಸಂಸ್ಥೆಯ ಕ್ರೀಡಾ ಸಮಿತಿಯ ಅಧ್ಯಕ್ಷರಾದ ಎಮ್. ವಿಜಯ್ ಕುಮಾರ್ ಇವರು ಮಾತನಾಡುತ್ತಾ ಪ್ರತಿಯೊಬ್ಬರು ದೈಹಿಕವಾಗಿ ಬಲಿಷ್ಠರಾದಾಗ ಮಾತ್ರ ಮಾನಸಿಕವಾಗಿ ಏನು ಬೇಕಾದರೂ ಸಾಧಿಸಬಹುದು ಈ ನಿಟ್ಟಿನಲ್ಲಿ ಕ್ರೀಡೆ ಅತಿ ಮುಖ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಾನಕಿ ಪುರೋಹಿತ, ಕೆ. ಗುರುಪುರ, ಸುರೇಂದ್ರ ಭಂಡಾರಿ, ರವಿಕಿರಣ್, ಬೋಧಕ ಬೋಧಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಭಾಗ್ಯ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಮಲ್ಲಿಕಾರ್ಜುನ ದೈಹಿಕ ನಿರ್ದೇಶಕರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಮಹಮ್ಮದ ಇಲಿಯಾಸ್ ನಿರೂಪಿಸಿದರು, ಉಪಪ್ರಾಚಾರ್ಯರಾದ ಡಾ.ವೆಂಕಟಪ್ಪ ನಾಯಕ ಇವರು ಸ್ವಾಗತಿಸಿದರು, ಪ್ರಾಚಾರ್ಯ ವೆಂಕಟೇಶ್ ದೊಡ್ಡಮನಿ ವಂದಿಸಿದರು.