ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿ

(ಸಂಜೆವಾಣಿ ವಾರ್ತೆ)
ನವಲಗುಂದ,ಅ30: ನವಲಗುಂದ ವಿಧಾನಸಭಾ ಮತಕ್ಷೇತ್ರದ ಶಿರಗುಪ್ಪಿ ಗ್ರಾಮದಲ್ಲಿ ನೆಹರು ಕ್ರೀಡಾ ಅಕ್ಯಾಡೆಮಿ ಹಾಗೂ ಶಿರಗುಪ್ಪಿ ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹೊನಲು ಬೆಳಕಿನ ಖೋ ಖೋ ಪಂದ್ಯಾವಳಿಯನ್ನು ಶಾಸಕ ಎನ್ ಎಚ್ ಕೋನರಡ್ಡಿಯವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಪರಸ್ಪರ ಸೌಹಾರ್ಧತೆ ಮತ್ತು ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಗ್ರಾಮದಲ್ಲಿ ಉತ್ಸಾಹದೊಂದಿಗೆ ಪಂದ್ಯಾವಳಿಯನ್ನು ಆಯೋಜಿಸುವುದರ ಮೂಲಕ ಕ್ರೀಡಾ ಕ್ಷೇತ್ರಕ್ಕೆ ಹೊಸ ಆಯಾಮವನ್ನು ನೀಡಿದ್ದಾರೆ ಎಂದು ಕಾರ್ಯವನ್ನು ಶ್ಲಾಘಿಸಿ ಆಟಗಾರರಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ನೆಹರು ಕ್ರೀಡಾ ಅಕ್ಯಾಡೆಮಿ ಅಧ್ಯಕ್ಷರ ಎಚ್. ಡಿ ಪೂಜಾರ, ಗ್ರಾಮದ ಹಿರಿಯರಾದ ಪ್ರಕಾಶಗೌಡ್ರು ಹನುಮರಡ್ಡಿ, ಮಹಾಬಳೇಶ್ವರ ಅಣ್ಣಿಗೇರಿ, ಶಿವಣ್ಣ ಹುಬ್ಬಳ್ಳಿ, ಗುರುನಾಥ ಹಳ್ಳೂರ, ದೇವು ಪತ್ತಾರ, ಮಹಾಂತೇಶ ಭಗವತಿ, ತಾಜುದ್ದೀನ್ ಮುಲ್ಲಾನವರ, ಎನ್.ಎನ್.ಕಂಪ್ಲಿ, ಎಸ್.ಜಿ. ಮೆಣಸಿನಕಾಯಿ, ಎಂ.ವಾಯ್. ಅಣ್ಣಿಗೇರಿ, ರಾಜಶೇಖರ ಕಂಪ್ಲಿ, ಪರಶುರಾಮ ದಿವಾನದ, ಆಯ್.ವಿ. ಕಾಳೆ, ಹಾಗೂ ಸರ್ವ ಸದಸ್ಯರು, ಯುವಕ ಮಂಡಳಿಯವರು ಮತ್ತು ಗ್ರಾಮದ ಮುಂತಾದವರು ಉಪಸ್ಥಿತರಿದ್ದರು.