ಉತ್ತಮ ಆರೋಗ್ಯಕ್ಕಾಗಿ ಯೋಗ ಮಾಡಿ: ಭವರಲಾಲ ಆರ್ಯ

ಬೀದರ:ನ.29: ಉತ್ತಮ ಆರೋಗ್ಯಕ್ಕಾಗಿ ಯೋಗ ಮಾಡಬೇಕು ಎಂದು ಯೋಗ ಸಮಿತಿಯ ಭವರಲಾಲ್ ಆರ್ಯ ನುಡಿದರು.
ನಗರದ ಕರ್ನಾಟಕ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ವಿಭಾಗವು ಆಯೋಜಿಸಿದ್ದ ಆನಂದಮಯ ಜೀವನಕ್ಕಾಗಿ ಯೋಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯೋಗಕ್ಕೆ ವಯಸ್ಸು, ಲಿಂಗ ಭೇದ ಇಲ್ಲ.

ದೈಹಿಕ ಆರೋಗ್ಯ ಕಾಯ್ದುಕೊಳ್ಳಲು ಇರುವ ಉತ್ತಮ ಕ್ರಿಯೆಯಾಗಿದೆ ಎಂದು ತಿಳಿಸಿದರು.

ಯೋಗವು ಋಷಿ, ಮುನಿಗಳಿಂದ ಬಳುವಳಿಯಾಗಿ ಬಂದಿದೆ. ಈಗ ದೇಶ, ವಿದೇಶಗಳಿಗೂ ವ್ಯಾಪಿಸಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕೆಆರ್‍ಇ ಸಂಸ್ಥೆಯ ಕಾರ್ಯದರ್ಶಿ ಸಿದ್ಧರಾಮ ಪಾರಾ ಮಾತನಾಡಿ, ನಿತ್ಯ ಯೋಗ ಮಾಡುವುದರಿಂದ ರೋಗ ಮುಕ್ತರಾಗಲು ಸಾಧ್ಯವಿದೆ ಎಂದು ತಿಳಿಸಿದರು.

ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಸಿದ್ದರಾಜ್ ಪಾಟೀಲ, ಉದ್ಯಮಿ ಜಗದೀಶ ಖೂಬಾ, ಪ್ರಾಚಾರ್ಯ ಮಲ್ಲಿಕಾರ್ಜುನ ಚಲುವಾ, ಉಪ ಪ್ರಾಚಾರ್ಯ ಮಲ್ಲಿಕಾರ್ಜುನ ಹಂಗರಗಿ ಉಪಸ್ಥಿತರಿದ್ದರು.