ಉತ್ತಮ ಆಡಳಿತ ವ್ಯವಸ್ಥೆಗೆ ವೋಟು ಬಳಕೆಯಾಗಲಿ-ಜಾಲವಾಡಿ

ಹಾವೇರಿ, ಡಿ 18- ಗ್ರಾಮದ ಉತ್ತಮ ಆಡಳಿತ ವ್ಯವಸ್ಥೆಗೆ ನಿಮ್ಮ ವೋಟು ಬಳಕೆಯಾಗಲಿ. ಯಾವುದೇ ಆಮಿಷಕ್ಕೆ ಒಳಗಾಗದೇ ಮತ ಚಲಾಯಿಸಿ ಎಂದು ಕಾಕೋಳ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ವೀರಣ್ಣ ಜಾಲವಾಡಿ ಗ್ರಾಮಸ್ಥರಿಗೆ ಕರೆ ನೀಡಿದರು.
ರಾಣೇಬೆನ್ನೂರ ತಾಲೂಕಿನ ಕಾಕೋಳ ಗ್ರಾಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ ಮತದಾರರ ಜಾಗೃತಿ ಹಾಗೂ ಕೋವಿಡ್ ಮುನ್ನೆಚ್ಚರಿಕೆ ಕುರಿತಂತೆ ಬೀದಿನಾಟಕ ಹಾಗೂ ಜಾನಪದ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಮತದಾನ ಮಾಡುವ ಹಕ್ಕನ್ನು ನೀಡಲಾಗಿದೆ. ಈ ಹಕ್ಕನ್ನು ಉತ್ತಮ ಸಮಾಜ ನಿರ್ಮಾಣಕ್ಕೆ ಬಳಸಿ ಎಂದು ಹೇಳಿದರು.
ಕಡ್ಡಾಯವಾಗಿ ಮತದಾನ ಮಾಡಿ
ಮತದಾನ ಮಾಡಲು ಹಿಂಜರಿಕೆ ಬೇಡ. ವಿಕಲಚೇತನರಿಗೆ, ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ ಮತಗಟ್ಟೆಗಳಲ್ಲಿ ವಿಶೇಷ ಸೌಲಭ್ಯಗಳು ಕಲ್ಪಿಸಲಾಗುತ್ತಿದೆ. ಈ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಮತ ಚಲಾಯಿಸಿ. ಇದೇ ಡಿಸೆಂಬರ್ 22 ರಂದು ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆ ಹಾಗೂ ಡಿಸೆಂಬರ್ 27 ರಂದು ಎರಡನೇ ಹಂತದ ಗ್ರಾಮ ಪಂಚಾಯತಿ ಚುನಾವಣೆಗಳು ನಡೆಯಲಿದೆ ಎಂದು ಕಲಾ ತಂಡಗಳ ಮಹಿಳಾ ಕಲಾವಿದರು ಮತದಾರರಲ್ಲಿ ಜಾಗೃತಿ ಮೂಡಿಸಿದರು.
ರಾಣೆಬೆನ್ನೂರು ತಾಲೂಕಿನ ಕಾಕೋಳ ಮತ್ತು ಹಲಗೇರಿ ಗ್ರಾಮಗಳಲ್ಲಿ ಕನ್ನಡತಿ ಕಲಾ ತಂಡದ ಮುಖ್ಯಸ್ಥೆ ಶ್ರೀಮತಿ ಲತಾ ಪಾಟೀಲ ಹಾಗೂ ಶ್ರೀ ದುರ್ಗಾದೇವಿ ಸಾಂಸ್ಕøತಿಕ ಕಲಾ ತಂಡದ ಮುಖ್ಯಸ್ಥೆ ಶ್ರೀಮತಿ ರೇಣುಕಾ ಚಲವಾದಿ ಅವರ ನೇತೃತ್ವದ ಮಹಿಳಾ ತಂಡದ ಪ್ರದರ್ಶನಗಳು ಸಾರ್ವಜನಿಕರ ಗಮನ ಸೆಳೆದವು.