ಉತ್ತಮ ಆಡಳಿತಕ್ಕಾಗಿ ಬಿಜೆಪಿಗೆ ಮತ ನೀಡಿ: ಸೋಮಶೇಖರ ರೆಡ್ಡಿ

ಬಳ್ಳಾರಿ ಏ 21 : ಮಹಾನಗರ ಪಾಲಿಕೆ ಚುನಾವಣೆ ಅಂಗವಾಗಿ 4ನೇ ವಾರ್ಡಿನಲ್ಲಿ ಇಂದು ಬಿಜೆಪಿ ಅಭ್ಯರ್ಥಿ ವನಿತಾ ಶ್ರೀನಿವಾಸ್ ಅವರ ಪರವಾಗಿ ನಗರ ಶಾಸಕರಾದ ಜಿ. ಸೋಮಶೇಖರ್ ರೆಡ್ಡಿ ಅವರ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಮತದಾರರಲ್ಲಿ ಮತಯಾಚನೆ ಮಾಡಲಾಯಿತು.
ಗುಗ್ಗರಹಟ್ಟಿ ಪ್ರದೇಶಕ್ಕೆ ಬಂದ ಶಾಸಕರಿಗೆ ಕೋವಿಡ್ ಕಾಲದಲ್ಲಿ ತಮ್ಮ ಸಂಕಷ್ಟಕ್ಕೆ ನೆರವಾದುದನ್ನು ಸ್ಮರಿಸಿದ ಜನತೆ. ನಿಮ್ಮ ಸಹಾಯ ಸಹಕಾರ ಮರೆಯಲಾಗದು ಎಂದರು.
ಉತ್ತಮ ಆಡಳಿತಕ್ಕಾಗಿ ಬಿಜೆಪಿ ಅಭ್ಯರ್ಥಿಗಳಿಗೆ ಮತ‌ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷದ ನಗರ ಪ್ರಧಾನ ಕಾರ್ಯದರ್ಶಿ ಕೆ. ರಾಮಾಂಜನಿ, ವಾರ್ಡಿನ ಪ್ರಮುಖ ಮುಖಂಡರುಗಳಾದ ರಮೇಶ್, ಹೊನ್ನೂರ್ ಸ್ವಾಮಿ, ಪುಟ್ಟೇಗೌಡ, ಮೌಲಾ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.