ಉತ್ತಮ ಅಭ್ಯರ್ಥಿಗೆ ಮತ ನೀಡಿ ಭ್ರಷ್ಟರಿಗೆ ಬೇಡ ಜಾಗೀರದಾರ

ಸಿಂಧನೂರು,ಏ.೦೨- ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವ ಜನರಿಗೆ ಸದಾ ಹತ್ತಿರ ಇರುವ ಅಭ್ಯರ್ಥಿಗೆ ಮತ ನೀಡಬೇಕು ಎಂದು ಜಿಲ್ಲಾ ನಾಗರಿಕ ಹಿತ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಶಾಂತಗೌಡ ಜಾಗೀರದಾರ ಮತದಾರರಲ್ಲಿ ಮನವಿ ಮಾಡಿಕೊಂಡರು.
ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜನರಿಂದ ಈಗಾಗಲೆ ಶಾಸಕರಾಗಿ ಸಂಸದರಾಗಿ ಸಚಿವರಾಗಿ ಆಯ್ಕೆ ಯಾದ ವಿವಿಧ ಪಕ್ಷಗಳ ಮುಖಂಡರು ಜನರಿಗೆ ಹೇಳಿಕೊಳ್ಳುವಂತ ಕೆಲಸ ಮಾಡಿರುವುದಿಲ್ಲ ಜನರ ಹೆಸರಿನಲ್ಲಿ ತಾವು ಹಣ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಶಾಸಕ ವೆಂಟರಾವ ನಾಡಗೌಡ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಶಾಸಕರಾಗಿದ್ದಾಗ ಆರಂಭ ಮಾಡಿದ ಯುಜಿಡಿ ಹಾಗೂ ನಿರಂತರ ಸುದ್ದ ಕುಡಿಯುವ ನೀರಿನ ಕಾಮಗಾರಿ ಸಂಪೂರ್ಣ ವಾಗದೆ ಅರ್ಧಕ್ಕೆ ನಿಂತವೆ. ಈ ಯೋಜನೆಯ ಹೆಸರಿನಲ್ಲಿ ಇವರು ಸಾಕಷ್ಟು ಭ್ರಷ್ಟಾಚಾರ ನಡೆಸಿ ಹಣ ಲೂಟಿ ಮಾಡಿದ್ದಾರೆ. ಹಾಗಾಗಿ ಈ ಸಲ ಚುನಾವಣೆಯಲ್ಲಿ ಭ್ರಷ್ಟಾರಿಗೆ ಮತ ನೀಡದೆ ಜನಪರ ವಾಗಿ ಕೆಲಸ ಮಾಡುವ ಉತ್ತಮ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಬೇಕು ಎಂದರು.
೨೦೨೩ ಚುನಾವಣೆಯಲ್ಲಿ ಉತ್ತಮ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಲು ನಾವು ಪ್ರಯತ್ನ ಪಡುತ್ತಿದ್ದ ಒಂದು ವೇಳೆ ಉತ್ತಮ ಅಭ್ಯರ್ಥಿ ಸಿಗದಿದ್ದರೆ ವೇದಿಕೆಯಿಂದ ಸೂಕ್ತ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸುವ ಆಲೋಚನೆ ಮಾಡುತ್ತಿದ್ದೇವೆ ಯಾರು ಹಣ ಮದ್ಯಕ್ಕೆ ಮರಳಾಗಿ ನಿಮ್ಮ ಅಮೂಲ್ಯವಾದ ಮತವನ್ನು ಮಾರಿಕೋಳ್ಳಬೇಡಿ ಎಂದು ಶಾಂತಗೌಡ ಮತದಾರರಲ್ಲಿ ಮನವಿ ಮಾಡಿಕೊಂಡರು.
ವೇದಿಕೆಯ ಮುಖಂಡರಾದ ಉಸ್ಮಾನ ಮಕಂದರ. ಸಾಮೀದ ಸಾಬ ನಿತೀಶ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.