ಉತ್ತಮ ಅಂಕ ಗಳಿಸಿದ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು


ಸಂಜೆ ವಾಣಿ ವಾರ್ತೆ
ಕೊಟ್ಟೂರು, ಏ.23: ಪಟ್ಟಣದ  ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿದ್ದಾರೆ. 
2023ರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಉತ್ತಮ ಅಂಕಗಳನ್ನು ಪಡೆಯುವುದರ ಮೂಲಕ ಕಾಲೇಜಿಗೆ ಹಾಗೂ ತಂದೆ ತಾಯಿಗೆ ಕೀರ್ತಿಯನ್ನು ತಂದಿದ್ದಾರೆ.
ಕಲಾ ವಿಭಾಗದಲ್ಲಿ  ಮಹಾಲಕ್ಷ್ಮಿ( 587), ಶ್ವೇತಾ ಕುಮಾರಿ. ಬಿ (586), ಕೊಟ್ರೇಶ್ ಗೌಡ ಎಂಜಿಎಂ (557), ಬಂಗಿ ಮಂಜುನಾಥ (532) ಅಂಕಗಳನ್ನು ಪಡೆದರೆ, ವಾಣಿಜ್ಯ ವಿಭಾಗದಲ್ಲಿ ಪಿ. ತೇಜ (547),
ಕಾರ್ತಿಕ K (537),ಮರೇಗೌಡರ ಪ್ರಶಾಂತ್ ( 530), ವಿಜ್ಞಾನ ವಿಭಾಗದಲ್ಲಿ V L ಲಕ್ಷ್ಮಿ (504) ಎಚ್.ಡಿ. ಅನುಷಾ (493), ಎಚ್.ಪಿ ಪವಿತ್ರ (491) ಅಂಕ ಪಡೆದಿದ್ದಾರೆ.
ಅನೇಕ ಮೂಲಭೂತ ಸೌಲಭ್ಯಗಳ ಕೊರತೆಯ ನಡುವೆಯೂ ಉತ್ತಮ ಫಲಿತಾಂಶ ತಂದಿದ್ದು, ಒಟ್ಟು ಫಲಿತಾಂಶದಲ್ಲಿ ಶೇಕಡ 58% ಅತ್ಯುತ್ತಮ ಶ್ರೇಣಿಯಲ್ಲಿ ಪಾಸಾಗಿ,
ಪ್ರಥಮ ದರ್ಜೆಯಲ್ಲಿ  91, ದ್ವಿತೀಯ ದರ್ಜೆಯಲ್ಲಿ 56, ತೃತೀಯ ದರ್ಜೆಯಲ್ಲಿ 59 ವಿದ್ಯಾರ್ಥಿಗಳು ಪಾಸಾಗಿದ್ದಾರೆ ಎಂದು ಪ್ರಾಂಶುಪಾಲರಾದ ಸೋಮಶೇಖರ್  ತಿಳಿಸಿದರು