
ಹುಬ್ಬಳ್ಳಿ, ಏ.2: ಪೆÇಲೀಸರಿಗೆ ಶಿಸ್ತು ಬಹಳ ಮುಖ್ಯ. ಆರೋಗ್ಯವನ್ನು ಕಾಪಾಡಿಕೊಂಡು ಹೋಗಬೇಕು. ಸದೃಢ ಆರೋಗ್ಯಕ್ಕೆ ಹೆಚ್ಚಿನ ಗಮನ ನೀಡಬೇಕು. ಉತ್ತಮವಾಗಿ ಕೆಲಸ ನಿರ್ವಹಿಸಿ ಇಲಾಖೆಗೆ ಗೌರವ ತನ್ನಿ ಎಂದು ನಿವೃತ್ತ ಸಹಾಯಕ ಪೆÇಲೀಸ್ ಆಯುಕ್ತರಾದ ಟಿ.ಜಿ. ದೊಡ್ಡಮನಿ ಹೇಳಿದರು.
ಇಂದು ಗೋಕುಲ್ ರಸ್ತೆಯ ಹೊಸ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಹುಬ್ಬಳ್ಳಿ ಧಾರವಾಡ ಪೆÇಲೀಸ್ ಆಯುಕ್ತಾಲಯದಿಂದ ಆಯೋಜಿಸಿದ್ದ ಪೆÇಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೆÇಲೀಸರು ಒಂದೇ ಸ್ಥಳದಲ್ಲಿಯೇ ಕಾರ್ಯನಿರ್ವಹಿಸದೇ ವಿವಿಧ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಲು ಮುಂದಾಗಬೇಕು. ಮಕ್ಕಳಿಗೆ ಸರಿಯಾದ ಶಿಕ್ಷಣ, ಕುಟುಂಬದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ನೊಂದವರು, ಮಹಿಳೆಯರಿಗೆ ಶೀಘ್ರವಾಗಿ ಸ್ಪಂದನೆ ನೀಡಬೇಕು. ಅಸಹಾಯಕರಿಗೆ ಧೈರ್ಯ ತುಂಬಿ ಕೂಡಲೇ ಸ್ಪಂದಿಸಿ ಸಮಸ್ಯೆ ಪರಿಹರಿಸಿ. ಸರಿಯಾಗಿ ತನಿಖೆ ಕೈಗೊಂಡು ನೊಂದವರಿಗೆ ನ್ಯಾಯ ದೊರಕಿಸಿ ಕೊಡಬೇಕು. ಸಮಾಜದಲ್ಲಿ ಶಾಂತಿಯುತ ವಾತಾವರಣ ನಿರ್ಮಿಸಬೇಕು. ಸಾರ್ವಜನಿಕ ಸ್ಥಳ ಹಾಗೂ ಪೆÇಲೀಸ್ ಕಚೇರಿ ಎದುರಿಗೆ ಜನರು ಗುಂಪು ಸೇರಲು ಅವಕಾಶ ಮಾಡಿಕೊಡಬಾರದು. ಸಮಾಜದಲ್ಲಿ ಅಹಿತಕರ ಘಟನೆಗಳು ಸಂಭವಿಸದಂತೆ ನೋಡಿಕೊಂಡು ಹೋಗಬೇಕು ಎಂದರು.
ಹುಬ್ಬಳ್ಳಿ ಧಾರವಾಡ ಪೆÇಲೀಸ್ ಆಯುಕ್ತರಾದ ರಮನ್ ಗುಪ್ತಾ ಮಾತನಾಡಿ, ಕರ್ನಾಟಕ ರಾಜ್ಯ ಏಕೀಕರಣವಾದ ನಂತರ 1965 ಎಪ್ರೀಲ್ 2 ರಂದು ಕರ್ನಾಟಕ ಪೆÇಲೀಸ್ ಕಾಯ್ದೆಯನ್ನು ಜಾರಿಗೆ ತರಲಾಯಿತು. ಅದರ ಸವಿನೆನಪಿಗಾಗಿ ಪ್ರತಿವರ್ಷ ಏಪ್ರೀಲ್ 2 ರಂದು ಪೆÇಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಸಮಾಜದಲ್ಲಿ ಪೆÇಲೀಸರು ಒಳ್ಳೆಯ ಬಾಂಧವ್ಯ ಬೆಳೆಸಿಕೊಂಡು ಸೇವೆ ಸ್ಮರಿಸುವ ದಿನವಾಗಿದೆ. ಕಾನೂನು ಪಾಲನೆ, ಜನರ ಆಸ್ತಿಪಾಸ್ತಿ ರಕ್ಷಣೆ, ಅಕ್ರಮ ಚಟುವಟಿಕೆ ತಡೆಯುವಲ್ಲಿ ಪೆÇಲೀಸ್ ಇಲಾಖೆ ನಿರಂತರವಾಗಿ ಶ್ರಮಿಸುತ್ತಿದೆ. ಅವರ ಸಾಹಸ ಮತ್ತು ನಿಸ್ವಾರ್ಥ ಸೇವೆಯನ್ನು ಈ ದಿನ ನೆನೆಯಲಾಗುವುದು. ಕಳೆದ ಸಾಲಿನಲ್ಲಿ ಪೆÇಲೀಸ್ ಧ್ವಜ ಮಾರಾಟದಿಂದ ರೂ. 28 ಲಕ್ಷ ರೂ. ಸಂಗ್ರಹವಾಗಿದ್ದು, ಈ ಹಣವನ್ನು ನಿವೃತ್ತ ಅಧಿಕಾರಿಗಳ ಕ್ಷೇಮ ನಿಧಿ, ಪೆÇಲೀಸ್ ಕಲ್ಯಾಣ ನಿಧಿ, ಪೆÇಲೀಸರ ಇತರ ಕಾರ್ಯಗಳಿಗೆ ಬಳಸಲಾಗುತ್ತಿದೆ ಎಂದು ಅವರು ಹೇಳಿದರು.
ಉದ್ಯಮಿ ವಿ.ಎಸ್.ವಿ. ಪ್ರಸಾದ್ ಅವರು ರೂ. 1 ಲಕ್ಷ ಹಣವನ್ನು ಪೆÇಲೀಸ್ ಕಲ್ಯಾಣ ನಿಧಿಗೆ ನೀಡಿದರು.
ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಪೆÇಲೀಸ್ ಧ್ವಜಗಳನ್ನು ಬಿಡುಗಡೆ ಮಾಡಲಾಯಿತು.
ನಿವೃತ್ತ ಸಹಾಯಕ ಪೆÇಲೀಸ್ ಆಯುಕ್ತರಾದ ಟಿ.ಜಿ. ದೊಡ್ಡಮನಿ ಅವರು ವಿವಿಧ ಪೆÇಲೀಸ್ ತಂಡಗಳಿಂದ ಗೌರವ ವಂದನೆಯನ್ನು ಸ್ವೀಕರಿಸಿದರು.
ಕವಾಯತ ಪ್ರಧಾನ ದಂಡನಾಯಕ ಮಾರುತಿ ಹೆಗಡೆ, ಸಹಾಯಕ ಕವಾಯತ ದಂಡನಾಯಕ ಭಾಗಣ್ಣ ವಾಲೀಕಾರ ನೇತೃತ್ವದಲ್ಲಿ ನಗರ ಸಶಸ್ತ್ರ ತುಕಡಿ, ಉತ್ತರ ಉಪ ವಿಭಾಗ ತುಕಡಿ, ದಕ್ಷಿಣ ಉಪವಿಭಾಗ ತುಕಡಿ, ಧಾರವಾಡ ಉಪವಿಭಾಗ ತುಕಡಿ, ಮಹಿಳಾ ತುಕಡಿ, ಸಂಚಾರ ಉಪವಿಭಾಗ ತುಕಡಿ, ಪೆÇಲೀಸ್ ವಾದ್ಯ ವೃಂದದ ಆಕರ್ಷಕ ಪಥ ಸಂಚಲನ ಗಮನ ಸೆಳೆದವು.
ಡಿಸಿಪಿ ವೈ.ಕೆ. ಕಾಶಪ್ಪನವರ, ರವಿ ನಾಯ್ಕ, ಆರ್.ಕೆ. ಬಡಿಗೇರ, ನಿವೃತ್ತ ಪೆÇಲೀಸ್ ಅಧಿಕಾರಿಗಳು, ಕುಟುಂಬಸ್ಥರು, ಸಾರ್ವಜನಿಕರು ಭಾಗವಹಿಸಿದ್ದರು.
ಡಿಸಿಪಿ ರಾಜೀವ ಎಂ ಸ್ವಾಗತಿಸಿದರು. ಡಿಸಿಪಿ ಗೋಪಾಲ ಬ್ಯಾಕೋಡ ವಂದಿಸಿದರು.