ಉತ್ತಮರೊಂದಿಗಿನ ಒಡನಾಟ, ಅಧ್ಯಾತ್ಮಿಕ ಕೃತಿಗಳು ನಮ್ಮನ್ನು ದುಶ್ಚಟಗಳಿಗೆ ಬಲಿಯಾಗದಂತೆ ಪ್ರೇರಣೆ ನೀಡುತ್ತವೆ:ಕಾಮಶೆಟ್ಟಿ ಚಿಕಬಸೆ

ಬೀದರಃಮೆ.22: ಮಾನವನು ಇಂದು ಎಷ್ಟೆಲ್ಲ ದುಡ್ಡು ಗಳಿಸಿದರೂ ಸಹ ಅವನಿಗೆ ಶಾಂತಿ, ನೆಮ್ಮದಿ, ಲಭಿಸದೆ ಪರಿತಪಿಸುತ್ತಿದ್ದಾನೆ. ಇಂದಿನ ಒತ್ತಡದ ಬದುಕಿಗೆ ಶಾಂತಿ, ಸಮಧಾನ ಅತ್ಯಂತ ಜರೂರಿಯಾಗಿದೆ. ನಮ್ಮ ದಿನನಿತ್ಯದ ಕೆಲಸ-ಕಾರ್ಯಗಳೊಂದಿಗೆ ಒಂದಿಷ್ಟು ಸಮಯ ಮೀಸಲಿಟು, ಅಧ್ಯಾತ್ಮಿಕವಾದ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಸಾಹಿತಿ ಹಣಮಂತಪ್ಪಾ ವಲ್ಲೆಪುರೆ (ಹಂಶÀಕವಿ) ಅವರು ಅಭಿಪ್ರಾಯಪಟ್ಟರು.

ಅವರು ದಿನಾಂಕ 21-05-2023 ರಂದು ಬೀದರ ನಗರದದಲ್ಲಿರುವ ಬಿ.ವಿ. ಭೂಮರೆಡ್ಡಿ ಮಹಾವಿದ್ಯಾಲಯದ ಮೈದಾನದಲ್ಲಿ ಸೂರ್ಯ ನಮಸ್ಕಾರ ಸಂಘವು ಹಮ್ಮಿಕೊಂಡ ‘ಅಧ್ಯಾತ್ಮಿಕ ಸಿಂಚನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸೂರ್ಯ ನಮಸ್ಕಾರ ಸಂಘದ ಅಧ್ಯಕ್ಷರಾದ ಕಾಮಶೆಟ್ಟಿ ಚಿಕಬಸೆ ಅವರು ಮಾತನಾಡಿ, ನಮ್ಮ ಬದುಕು ಸರಳವಾಗಿ ರೂಪಿಸಿಕೊಳ್ಳಬೇಕು. ಯಾವುದೇ ಆಡಂಬರಕ್ಕೆ ಒತ್ತು ಕೊಡದೆ ಸರಳ ಬದುಕು ಸಾಗಿಸಬೇಕಾದರೆ ನಾವು ನ್ಯಾಯ-ನೀತಿ ಧರ್ಮದ ಮಾರ್ಗದಲ್ಲಿ ನಡೆಯಬೇಕು, ಧರ್ಮದ ಮಾರ್ಗದಲ್ಲಿ ಸಾಗಬೇಕಾದರೆ ಸತ್ಸಂಗಗಳಲ್ಲಿ ಪಾಲ್ಗೊಳ್ಳುವುದು ಅತ್ಯವಶ್ಯಕವಾಗಿದೆ. ‘ಸಾರ ಸಜ್ಜನರ ಸಂಗ ಲೇಸು’ ಎಂಬ ಶರಣರ ದಿವ್ಯ ವಾಣಿಯಂತೆ ನಮ್ಮ ಒಡನಾಟ ಸಜ್ಜನರೊಂದಿಗಿದ್ದರೆ ನಾವು ಯಾವುದೇ ಕೆಟ್ಟ ಚಟಗಳಿಗೆ ದಾಸರಾಗುವುದಿಲ್ಲ.Å ಉತ್ತಮರೊಂದಿಗಿನ ಒಡನಾಟ, ಅಧ್ಯಾತ್ಮಿಕ ಕೃತಿಗಳು ನಮ್ಮನ್ನು ದುಶ್ಚಟಗಳಿಗೆ ಬಲಿಯಾಗದಂತೆ ಪ್ರೇರಣೆ ನೀಡುತ್ತವೆ, ರಕ್ಷಿಸುತ್ತವೆ. ಹಾಗಾಗಿ ಸತ್ಸಂಗದಲ್ಲಿ, ಪಾಲ್ಗೊಳ್ಳುವುದು, ಪಾಠ-ಪ್ರವಚನಗಳು ಕೇಳುವುದು, ಪುಸ್ತಕಗಳನ್ನು ಓದುವುದು ಮತ್ತು ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಆಧುನಿಕತೆಯ ಒತ್ತಡ ಬದುಕಿನಲ್ಲಿ ತೀವ್ರ ಅಗತ್ಯವಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಸಾಗೋಣ, ಇದಕ್ಕಾಗಿ ನಮ್ಮ ಸೂರ್ಯ ನಮಸ್ಕಾರ ಸಂಘವು ಸದಾ ಶ್ರಮಿಸುತ್ತದೆ ಎಂದರು.

ಮೊದಲಿಗೆ ಬಸವರಾಜ ದಾನಿ ಸ್ವಾಗತಿಸಿದರೆ, ವಿಜಯಕುಮಾರ ರಾಥೋಡ ಕಾರ್ಯಕ್ರಮ ನೀರೂಪಿಸಿದರು. ಕೊನೆಯಲ್ಲಿ ಅನೀಲ ಸೊರಳ್ಳಿ ವಂದಿಸಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರದಮಲ್ಲಿ ಪಾಲ್ಗೊಂಡವರಿಗೆ ಹಂಶÀಕವಿ ರಚಿತ ಶ್ರೀ ದತ್ತಭಾಗವತ್ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು.

ನವನೀತ ಪಾಟೀಲ, ಶಿವಕುಮಾರ ಬಿರಾದಾರ, ವಿನೀತ್ ಪಸರಗೆ, ಭದ್ರು ಸ್ವಾಮಿ, ಗವಿಸಿದ್ದಪ್ಪಾ, ರಾಜಕುಮಾರ, ನಾಗರಾಜ ರಾಗಾ, ರಾಘವೇಂದ್ರ ಬಿರಾದಾರ, ಉಮೇಶ ಬಿರಾದಾರ, ಮಾಣಿಕೆಶ ಪಾಟೀಲ, ಜಿ.ಎಂ. ಮರಕಲೆ, ಹಾಗೂ ಸೂರ್ಯ ನಮಸ್ಕಾರ ಸಂಘದ ಸದಸ್ಯರುಗಳು, ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.