
ಕಲಬುರಗಿ,ಆ.25:ಗುಣಮಟ್ಟದ ಸಂಶೋಧನಾ ಪ್ರಬಂಧಗಳನ್ನು ಬರೆಯಲು ಮತ್ತು ಪ್ರಕಟಿಸಲು ಅಧ್ಯಾಪಕರು ಉನ್ನತ ಶ್ರೇಯಾಂಕದ ಮತ್ತು ಹೆಚ್ಚು ಪ್ರಭಾವುಳ್ಳ ನಿಯತಕಾಲಿಕಗಳನ್ನು ಓದಬೇಕು ಎಂದು ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ್ ಅವರು ಹೇಳಿದರು.
ಜಿಲ್ಲೆಯ ಆಳಂದ್ ತಾಲ್ಲೂಕಿನ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕೇಂದ್ರ ಗ್ರಂಥಾಲಯವು ಭಾರತೀಯ ಗ್ರಂಥಾಲಯ ಸಂಘ, ನವದೆಹಲಿಯ ಸಹಯೋಗದಲ್ಲಿ ಆಯೋಜಿಸಿದ್ದ ‘ಐಇಇಇ-ಗುಣಮಟ್ಟದ ಸಂಶೋಧನಾ ಲೇಖನಗಳ ಬರವಣಿಗೆ’ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ ಪದ್ಮಶ್ರೀ ಡಾ. ಎಸ್.ಆರ್. ರಂಗನಾಥನ್ ಅವರ 131ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ರಾಷ್ಟ್ರೀಯ ಗ್ರಂಥ ಪಾಲಕರ ದಿನಾಚರಣೆಯ ಅಂಗವಾಗಿ ಕೇಂದ್ರ ಗ್ರಂಥಾಲಯದಲ್ಲಿ ಜ್ಞಾನದ ಸಂಕೇತವಾಗಿ ಸರಸ್ವತಿ ದೇವಿಯ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಕಾರ್ಯಾಗಾರದ ವಿಷಯವು ತುಂಬಾ ಸೂಕ್ತವಾಗಿದೆ ಮತ್ತು ಪ್ರಸ್ತುತವಾಗಿದೆ. ನಾವು ಪ್ರತಿದಿನ ನಮ್ಮ ಜ್ಞಾನವನ್ನು ನವೀಕರಿಸಬೇಕು ಮತ್ತು ನಾವು ಇನ್‍ಫ್ಲಿಬೆನ್ಟ್ ಇ-ಶೋಧ್ ಸಿಂಧು ಇತ್ಯಾದಿಗಳ ಮೂಲಕ ಆನ್‍ಲೈನ್ ಜರ್ನಲ್‍ಗಳಿಂದ ಮಾಹಿತಿ ಪಡೆಯಬಹುದು. ನಾವು ಲೇಖನಗಳನ್ನು ಪ್ರಕಟಿಸುವಲ್ಲಿ ಅತ್ಯಂತ ಪ್ರಾಮಾಣಿಕ ಮತ್ತು ನೈತಿಕವಾಗಿರಬೇಕು. ಪ್ರತಿಯೊಬ್ಬರೂ ಕೃತಿಚೌರ್ಯದ ನೀತಿಯನ್ನು ಅನುಸರಿಸಬೇಕು ಮತ್ತು ಪ್ರಕಟಣೆಯು ಕೃತಿಚೌರ್ಯದ ಶೇಕಡಾ 10ಕ್ಕಿಂತ ಕಡಿಮೆ ಇರಬೇಕು. ಯುಜಿಸಿ ಮಾರ್ಗಸೂಚಿಯ ಪ್ರಕಾರ ಕೃತಿಚೌರ್ಯವು ಶೇಕಡಾ 10ಕ್ಕಿಂತ ಹೆಚ್ಚು ಇದ್ದರೆ ಅಂತಹ ಪ್ರಬಂಧವನ್ನು ಸ್ವೀಕರಿಸಲಾಗುವುದಿಲ್ಲ ಎಂದರು.
ವಿಶ್ವವಿದ್ಯಾಲಯದ ಗ್ರಂಥಾಲಯವು ಬಹಳ ಮುಖ್ಯವಾದ ಸಾಫ್ಟ್‍ವೇರ್, ಡೇಟಾಬೇಸ್‍ಗಳು ಮತ್ತು ಇ-ಸಂಪನ್ಮೂಲಗಳನ್ನು ಹೊಂದಿದೆ, ಆದ್ದರಿಂದ ಗುಣಮಟ್ಟದ ಪೇಪರ್‍ಗಳನ್ನು ಪ್ರಕಟಿಸಲು ಅಧ್ಯಾಪಕರುಇದನ್ನು ಬಳಸಿಕೊಳ್ಳಬೇಕು ಎಂದು ಅವರು ಹೇಳೀದರು.
ಕುಲಸಚಿವ ಪೆÇ್ರ. ಆರ್.ಆರ್. ಬಿರಾದಾರ್ ಅವರು ಮಾತನಾಡಿ, ಪರಿಣಾಮಕಾರಿ ಸಂಶೋಧನೆಯೊಂದಿಗೆ ಗುಣಾತ್ಮಕ ಸಂಶೋಧನೆಗೂ ಪ್ರಾಮುಖ್ಯತೆ ನೀಡಬೇಕು. ಸಂಶೋಧನೆಯು ಕಾರ್ಯಸಾಧ್ಯತೆ, ಆಸಕ್ತಿ, ಹೊಸತನವನ್ನು ಹೊಂದಿರಬೇಕು ಮತ್ತು ಅದು ಕೇವಲ ಪ್ರಕಟಣೆಗಾಗಿ ಇರಬಾರದು. ಸಂಶೋಧನೆಯಲ್ಲಿ ನೈತಿಕತೆಯು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಎಲ್ಲ ಸಂಶೋಧನೆಗಳು 100% ನೈತಿಕವಾಗಿರಬೇಕೆಂದು ನಿರೀಕ್ಷಿಸಲಾಗುತ್ತದೆ ಎಂದರು.
ಸ್ಕೂಲ್ ಆಫ್ ಎಂಜಿನಿಯರಿಂಗ್‍ನ, ಡೀನ್, ಡಾ. ಪರಮೇಶ್ ಅವರು ಮಾತನಾಡಿ, ಐಇಇಇ ಬಳಕೆ ಆನ್‍ಲೈನ್ ವಿಷಯಗಳ ಸಂಶೋಧನೆಗೆ ಬಹಳ ಮುಖ್ಯವಾಗಿದೆ. ನಮ್ಮ ವಿದ್ಯಾರ್ಥಿಗಳು ಐಇಇಇ ವಿದ್ಯಾರ್ಥಿಗಳ ವಿಭಾಗದ ಮೂಲಕ ಅನೇಕ ಚಟುವಟಿಕೆಗಳನ್ನು ಮಾಡಿದ್ದಾರೆ ಎಂದರು.
ವಿಶ್ವವಿದ್ಯಾನಿಲಯದ ಗ್ರಂಥಪಾಲಕ ಡಾ. ಪಿ.ಎಸ್. ಕಟ್ಟಿಮನಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಾಗಾರದ ಉದ್ದೇಶಗಳನ್ನು ವಿವರಿಸಿದರು. ಪೆÇ್ರ. ಶ್ರೀಕಂಠಯ್ಯ ಕೆಸಿ, ಪರೀಕ್ಷಾ ನಿಯಂತ್ರಕ ಕೋಟ ಸಾಯಿಕೃಷ್ಣ, ಬೆಂಗಳೂರಿನ ಐಇಇಇ, ಕ್ಲೈಂಟ್ ಸರ್ವಿಸ್ ಮ್ಯಾನೇಜರ್ ಡಾ. ಧನುಕುಮಾರ್ ಪಟ್ಟಣಶೆಟ್ಟಿ, ತೆಲಂಗಾಣ್ ರಾಜ್ಯ ಗ್ರಂಥಾಲಯ ವೃತ್ತಿಪರ ಸಂಘದ ಅಧ್ಯಕ್ಷ ಪೆÇ್ರ. ಎನ್. ಲಕ್ಷ್ಮಣ್‍ರಾವ್, ಆಶಿಶ್ ಕೆ ದಾಸ್ ಮತ್ತು ಅಧ್ಯಾಪಕರು ಉಪಸ್ಥಿತರಿದ್ದರು. ಡಾ. ಜಿಜೆಪಿ ದೀಕ್ಷಿತ್ ಅವರು ಕಾರ್ಯಕ್ರಮ ನಿರೂಪಿಸಿದರು. ರಾಜಕುಮಾರ್ ಕಲ್ಯಾಣಿ ಅವರು ವಂದಿಸಿದರು.