ಉಡ ಬೇಟೆಗಾರರ ಬಂಧನ

ಶ್ರೀನಿವಾಸಪುರ,ಜು,೧೭- ಕಾಡು ಪ್ರಾಣಿಗಳನ್ನು ಬೇಟೆಯಾಡಿದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ತಾಲ್ಲೂಕಿನ ರಾಯಲ್ಪಾಡಿನಲ್ಲಿ ನಡೆದಿದೆ.
ಬಂಧಿತ ಅರೋಪಿಗಳು ಗ್ರಾಮದ ಮೊಹಮದ್ ರಫೀಕ್ ಮತ್ತು ಗೋವಿಂದ ಎಂದು ಗುರುತಿಸಲಾಗಿದೆ. ಈ ಇಬ್ಬರು ಅರೋಪಿಗಳು ಗ್ರಾಮದ ಹೊರವಲಯದ ಕಾಡಿನಲ್ಲಿ ಉಡಗಳನ್ನು ಭೇಟೆ ಮಾಡುತ್ತಿದ್ದ ಖಚಿತ ಮಾಹಿತಿಯು ಬೆಂಗಳೂರಿನ ಜಾಲಹಳ್ಳಿಯ ವ್ಯಾಪ್ತಿಗೆ ಸೇರಿದ ಅರಣ್ಯಾಧಿಕಾರಿಗಳಿಗೆ ಬಂದ ಹಿನ್ನಲೆಯಲ್ಲಿ ದಾಳಿ ಮಾಡಿ ಇಬ್ಬರನ್ನು ಬಂಧಿಸಿದರು.
ಗ್ರಾಮ ಹೊರವಲಯದ ಡಾಬಾವುಂದರಲ್ಲಿ ಆರೋಪಿಗಳು ಭೇಟೆಯಾಡಿದ ಉಡಗಳನ್ನು ಮಾರಾಟ ಮಾಡಲು ವ್ಯವಹಾರ ಕುದುರಿಸುತ್ತಿದ್ದರು.
ದಾಳಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ಸಿದ್ದರಾಜು, ಚಿದಾನಂದ ಹೆಚ್, ಆರ್.ಅಮೃತ್.ಅಶ್ವಿನ್ ಮತ್ತಿತರರು ಇದ್ದರು.