ಉಡುಪಿಯ ಪ್ರತಿಭೆ: ತನುಶ್ರೀ ಪಿತ್ರೋಡಿ

ಮಂಗಳೂರು, ಎ.೨೪- ಹಿಸ್ಟರಿಟಿವಿ೧೮ ನ ಅತ್ಯಂತ ಯಶಸ್ವಿ ವಾಸ್ತವಾಧಾರಿತ ಮನರಂಜನೆ ಸರಣಿ ‘ಒಎಂಜಿ! ಯೇ ಮೇರಾ ಭಾರತ ’ಏಳನೇ ಸೀಸನ್ ಹೊತ್ತು ತಂದಿದ್ದು, ಪ್ರತಿ ಸೋಮವಾರ ರಾತ್ರಿ ೮ ಗಂಟೆಗೆ ದೇಶಾದ್ಯಂತ ಜನರನ್ನು “ಒಎಂಜಿ!” ಎನ್ನುವಂತೆ ಮಾಡುತ್ತಿದೆ. ದೇಶದ ಉದ್ದಗಲ ವಿವಿಧ ರೀತಿಯ ಸ್ಪೂರ್ತಿದಾಯಕ ಪ್ರತಿಭೆಗಳನ್ನು ಪರಿಚಯಿಸುತ್ತಿದೆ. ಈ ಸೋಮವಾರ ರಾತ್ರಿ ೮ ಗಂಟೆಗೆ ಪ್ರಸಾರವಾಗಲಿರುವ ಸಿರೀಸ್ ಎಪಿಸೋಡ್‌ನಲ್ಲಿ ಕರ್ನಾಟಕದ ಇಬ್ಬರು ಅದ್ಭುತ ವ್ಯಕ್ತಿಗಳು ಕಾಣಿಸಿಕೊಳ್ಳಲಿದ್ದಾರೆ. ದೇಹವನ್ನು ಅದ್ಭುತವಾಗಿ ತಿರುಗಿಸುವ ೧೧ ವರ್ಷದ ಬಾಲಕಿಯ ಪರಿಚಯ ಮತ್ತು ದೇಶದ ಮೊದಲ ಸಂಗೀತ ಮ್ಯೂಸಿಯಂನ ಪರಿಚಯ ಇರಲಿದೆ. ಉಡುಪಿಯಲ್ಲಿ ವಾಸಿಸುವ ೧೧ ವರ್ಷದ ತನುಶ್ರೀ ಪಿತ್ರೋಡಿ ದಾಖಲೆಗಳ ಸರದಾರಿಣಿ. ಈ ಭರತನಾಟ್ಯ ಕಲಾವಿದೆ ದೇಶದಾದ್ಯಂತ ೪೦೦ ಕ್ಕೂ ಹೆಚ್ಚು ಪ್ರದರ್ಶನಗಳನ್ನು ಮಾಡಿದ್ದಾಳೆ. ಈಕೆ ಯೋಗ ಪರಿಣಿತಳೂ ಆಗಿದ್ದಾಳೆ. ಅಷ್ಟೇ ಅಲ್ಲ, ಕಾಲುಗಳನ್ನು ಎರಡೂ ಕೈಗಳಲ್ಲಿ ಹಿಡಿದುಕೊಂಡು ದೇಹವನ್ನು ೪೪ ಬಾರಿ ತಿರುಗಿಸುತ್ತಾ ಸಾಗುವ ಇವಳ ಸಾಧನೆಗೆ ವಿಶ್ವ ದಾಖಲೆಯೂ ಆಗಿದೆ. ಹಿಸ್ಟರಿಟಿವಿ ೧೮ನಲ್ಲಿ ಸೋಮವಾರ ರಾತ್ರಿ ೮ ಗಂಟೆಗೆ ವೀಕ್ಷಿಸ ಬಹುದು.