ಉಡಿ ತುಂಬುವ ಕಾರ್ಯಕ್ರಮ

ಬಾಗಲಕೋಟೆ, ಮೇ23: ತಾಲೂಕಿ ಹೋಸ ಮುರನಾಳದಲ್ಲಿ ಶ್ರೀಗ್ರಾಮದೇವಿ ಕಡವಾರದ ನಿಮಿತ್ಯ ಉಡಿ ತುಂಬುವ ಕಾರ್ಯ ಅದ್ದೂರಿಯಾಗಿ ಜರುಗಿತು, ಗ್ರಾಮದ ಹಿರಿಯರು, ರೋಗ ರುಜಿಣಗಳು ಗ್ರಾಮದಲ್ಲಿ ಬರದಿರಲಿ,ಮಳೆ ಬೆಳೆ ಚೆನ್ನಾಗಿ ಬಂದು ಲೋಕವೆಲ್ಲಾ ಸಮೃದ್ಧಿಯಾಗಲಿ ಗ್ರಾಮಸ್ಥರು ಪ್ರಾರ್ಥಿಸಿದರು.
ಗ್ರಾಮದಲ್ಲಿ ಮಳೆ ಬೆಳೆಗಾಗಿ ವಾರದ ವೃತ ಹಿಡಿಯಲಾಗಿತ್ತು ಮಂಗಳವಾರ ಕೋನೆಯ ಐದನೇ ವಾರ ಆಗಿದ್ದರಿಂದ ಚಿಕ್ಕಮಕ್ಕಳು ಗ್ರಾಮದೇವತೆ ದೇವಸ್ಥಾನ ಸೇರಿದಂತೆ ಎಲ್ಲ ದೇವಸ್ಥಾನಗಳಿಗೆ ತೆರಳಿ ನೀರೂ ನೇವೇದ್ಯ ಸರ್ಮಸಿದರು, ಬೆಳಗಿನ ಜಾವ ಬ್ರಾಹ್ಮಿ ಮುಹೋರ್ತದಲ್ಲಿ ಶ್ರೀ ಮಳೆರಾಜೇಂದ್ರ ಸ್ವಾಮಿಮಠ ಪೂಜ್ಯರಾದ ಮೌನೇಶ್ವರ ಸ್ವಾಮಿಗಳು ಹಾಗೂ ಗುರುನಾಥಸ್ವಾಮಿಗಳ ನೇತೃತ್ವದಲ್ಲಿ ಶ್ರೀ ದೇವಿಗೆ ಪಂಚಾಮೃತ ಅಭಿμÉೀಕ, ಶ್ರೀ ಸೂಕ್ತ, ಪುರುಷಸೂಕ್ತ, ನಂತರ ಶ್ತೀ ಚಕ್ರಕ್ಕೆ ಸಹಸ್ರ ನಾಮಾವಳಿ, ರಾಜರಾಜೇಶ್ವರಿ ಅಷ್ಟೋತ್ತರ ಶತನಾಮಾವಳಿ ಮೂಲಕ ಕುಂಕುಮಾರ್ಚನೆ, ಏಲೆಪೂಜೆ, ಪುμÁ್ಪಲಂಕಾರ, ಮಹಾಮಂಗಳಾರುತಿ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು,
ಸಂಜೆ ಶ್ರೀ ಮಾರುತೇಶ್ವರ ದೇವಸ್ಥಾನದಿಂದ ಶ್ರೀ ಗ್ರಾಮದೇವಿ ಘಳಿಗೆಯನ್ನು ಮೇರವಣಿಗೆ ಮೂಲಕ. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಗ್ರಾಮದೇವಿ ದೇವಸ್ಥಾನಕ್ಕೆ ತಲುಪಿದರು, ಮೇರವಣಿಗೆಯಲ್ಲಿ ಡೊಳ್ಳು ವಾದ್ಯಗಳ ಮೂಲಕ ಛತ್ರಿ ಚಾಮರಗಳು. ಸುಮಂಗಲೆಯರು ಆರತಿ ಹಿಡಿದು ದೇವಿ ಘಳಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು, ಮೆರವಣಿಗೆ ಬರುವ ದಾರಿಯುದ್ದಕ್ಕೂ ಜನರು ನೀರು ಹಾಕಿ ಸ್ವಾಗತಿಸಿ,ಪೂಜೆ ಪುನಸ್ಕಾರ ಕೈಗೊಂಡರು.