ಉಡಿ ತುಂಬುವ ಕಾರ್ಯಕ್ರಮ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಸೆ23 : ತಾಲೂಕಿನ ಶಿಗ್ಲಿ ಗ್ರಾಮದ ಶ್ರೀ ವೀರ ಕೇಸರಿ ಹಿಂದು ಮಹಾಸಭಾ ಶಿಗ್ಲಿ ಕಾ ಯುವರಾಜ್ ಸ್ಥಾಪಿಸಿರುವ ಗಣೇಶೋತ್ಸವದ ಅಂಗವಾಗಿ ಶುಕ್ರವಾರ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಹೂವಿನ ಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಗಣೇಶೋತ್ಸವ ಹಿಂದುಗಳ ಪಾಲಿಗೆ ಅತ್ಯಂತ ದೊಡ್ಡ ಉತ್ಸವ ಆಗಿದೆ ವಿದ್ಯಾದಿ ದೇವತೆಯಾದ ಹಾಗೂ ವಿಘ್ನ ನಿವಾರಕ ಗಣೇಶನ ಸ್ತುತಿ ಎಲ್ಲ ಕಾರ್ಯಗಳಲ್ಲೂ ಮೊದಲಿಗೆ ಸಲ್ಲುತ್ತದೆ ಎಂದರು.
ನಮ್ಮ ಧರ್ಮ ಸಂಸ್ಕೃತಿ ಪರಂಪರೆಗಳು ಸನಾತನ ಕಾಲದಿಂದಲೂ ನಡೆದುಬಂದಿದ್ದು ಇಂತಹ ಸಂದರ್ಭದಲ್ಲಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿದ್ದು ಹರ್ಷದ ಸಂಗತಿ ಆಗಿದೆ ಎಂದರು ಇದೇ ಸಂದರ್ಭದಲ್ಲಿ ಹಾವೇರಿ ಜಿಲ್ಲಾ ಶಿಕ್ಷಕ ಪ್ರಶಸ್ತಿ ವಿಜೇತ ನೀಲಪ್ಪ ಅಜ್ಜಪ್ಪನವರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ವೀರ ಕೇಸರಿ ಹಿಂದು ಮಹಾಸಭಾ ದ ಮುಖಂಡರು ಕಾರ್ಯಕರ್ತರು ಗಣ್ಯರು ಗ್ರಾಮಸ್ಥರು ಹಾಜರಿದ್ದರು.