ಉಡಿತುಂಬುವುದು, ಪೂರ್ಣ ಕುಂಭ, ವರಮಹಾಲಕ್ಷ್ಮೀ ಪೂಜೆಗಳು ನಮ್ಮ ಸಂಪ್ರದಾಯಗಳು- ಪ್ರಭುಮಹಾಸ್ವಾಮಿಗಳು


ಸಂಜೆವಾಣಿ ವಾರ್ತೆ
ಸಂಡೂರು: ಅ: 6: ( 2ನೇ ಹಾಗೂ 3ನೇ ಪೋಟೋ ನೋಡಿ ) ಉಡಿ ತುಂಬುವ ಕಾರ್ಯಕ್ರಮ ಮತ್ತು ಪೂರ್ಣಕುಂಭ ಮೇಳದೊಂದಿಗೆ ಹುಲಿಗೆಮ್ಮ ದೇವಸ್ಥಾನದಿಂದ ಮೆರವಣಿಗೆಯನ್ನು ಮಾಡಿ ಆಚರಿಸುತ್ತಿರುವುದು ನಮ್ಮ ಸಂಸ್ಕೃತಿಯ ಆಚರಣೆಯಾಗಿದೆ, ಅಲ್ಲದೆ ಶ್ರಾವಣ ಮಾಸ ಹಾಗೂ ವರಮಹಾಲಕ್ಷ್ಮೀ ಪೂಜೆ ನಮ್ಮ ಭಕ್ತಿಯನ್ನು ಅರ್ಪಿಸುವ ಮೂಲಕ ಮಾನಸಿಕ ನೆಮ್ಮದಿಯನ್ನು ಪಡೆಯುವ ಈ ಕಾರ್ಯವನ್ನು ದಿವಾಕರ್ ಅವರು ಹಮ್ಮಿಕೊಂಡಿರುವುದು ಸಂಸ್ಕೃತಿಯ ರಕ್ಷಣೆಯಾಗಿದೆ ಎಂದು ಪ್ರಭುಮಹಾಸ್ವಾಮಿಗಳು ತಿಳಿಸಿದರು.
ಅವರು ಪಟ್ಟಣದ ಶ್ರೀ ಹುಲಿಗೆಮ್ಮ ದೇವಸ್ಥಾನದಿಂದ ಅರಂಭವಾದ ಬೃಹತ್ ಮೆರವಣಿಗೆಗೆ ಚಾಲನೆ ನೀಡಿದರು, ಈ ಸಂದರ್ಭದಲ್ಲಿ ತಾಲೂಕಿನ ವೀರಶೈವ ಕಲ್ಯಾಣ ಮಂಟಪದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಕೆ.ಎಸ್. ದಿವಾಕರ್ ಮಾತನಾಡಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಶ್ರೀರಾಮುಲು ಅವರು ವರಮಹಾಲಕ್ಷ್ಮಿ ಹಬ್ಬದಂದು ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮವನ್ನು ಮುಂಚೂಣಿಗೆ ತಂದರು ಅವರ ಹಾದಿಯಲ್ಲಿಯೇ ನಾನು ಕೂಡ ಸಂಡೂರಿನ ಮುತ್ತೈದೆ ಮಾತಾ ಭಗಿನಿಯರಿಗೆ ಉಡಿತುಂಬುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ, ವರಮಹಾಲಕ್ಷ್ಮಿ ಹಬ್ಬದಂದು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮಕ್ಕೂ ಮುಂಬರುವ ಚುನಾವಣೆಗೂ ಯಾವುದೇ ಸಂಬಂಧವಿಲ್ಲ ನಾನು ಸಂಡೂರಿನ ಜನತೆಯ ಸೇವಕನಾಗಿದ್ದೇನೆ ಅವರ ಆಶೀರ್ವಾದ ಒಂದಿದ್ದರೆ ಸಾಕು ಪಕ್ಷ ಯಾವುದೇ ಜವಾಬ್ದಾರಿ ನೀಡಲಿ ನಾನು ನಿಭಾಯಿಸಲು ಸಿದ್ಧ ಅಲ್ಲದೆ ಪಕ್ಷದ ಸಂಘಟನೆಯಲ್ಲಿ ತೊಡಗಿಸಿ ಕೊಂಡಿರುವ ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಪಕ್ಷ ಸಂಘಟನೆಯ ನನ್ನ ಧ್ಯೇಯ. ಮುಖ್ಯವಾಗಿ ಮುಂಬರುವ ಸಂಡೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸುವುದಾಗಿದೆ. ಅಲ್ಲದೆ ಹೋದ ಚುನಾವಣೆಯಲ್ಲಿಯೇ ಸಂಡೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯ ಬೇಕಾಗಿತ್ತು. ಆದರೆ ಕಾರ್ತಿಕ್ ಘೋರ್ಪಡೆಯವರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎನಿಸಿಕೊಂಡೆ, ಶ್ರೀರಾಮುಲು, ಜನಾರ್ಧನ್ ರೆಡ್ಡಿ, ಸೋಮಶೇಖರ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುವೆ, ಎಂದು ರಾಜ್ಯ ಎಸ್. ಟಿ..ಮೋರ್ಚಾದ ಕಾರ್ಯಕಾರಣಿ ಸದಸ್ಯ, ಸಂಡೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿ ಕೆ.ಎಸ್.ದಿವಾಕರ್ ತಿಳಿಸಿದರು
ವಿರಕ್ತಮಠದ ಶ್ರೀ.ಮ. ನಿ.ಪ್ರ. ಪ್ರಭು ಮಹಾಸ್ವಾಮಿಗಳು ಮತ್ತು ಯಶವಂತನಗರದ ಸಿದ್ದರಾಮೇಶ್ವರ ಮಠದ ಗಂಗಾಧರಸ್ವಾಮಿ ಗಳು ನೆರೆದಿದ್ದ ನೂರಾರು ಭಕ್ತರಿಗೆ ಆಶೀರ್ವಚನ ನೀಡಿದರು.   ಶ್ರೀದೇವಿ ದಿವಾಕರ್ ಅವರು ದಿವಾಕರ್ ಅವರ ಜೊತೆಗಿದ್ದು 1000ಕ್ಕೂ ಹೆಚ್ಚು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೂ ಮುನ್ನ ಹುಲಿಗಮ್ಮ ದೇವಸ್ಥಾನದಿಂದ ವೀರಶೈವ ಕಲ್ಯಾಣ ಮಂಟಪ ದವರೆಗೂ ಪಟ್ಟಣದ ಮುಖ್ಯ ಬೀದಿಗಳಲ್ಲಿ ಶ್ರೀಗಳನ್ನು ಪೂರ್ಣಕುಂಭ ದೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು ಈ ಸಂದರ್ಭದಲ್ಲಿ ರಾಜ್ಯದ ಅನೇಕ ಕಡೆಯಿಂದ ಆಗಮಿಸಿದ ವೀರಗಾಸಿ ಕಲಾವಿದರು. ಡೊಳ್ಳುಕುಣಿತದ ಕಲಾವಿದರು.ಮರಗಾಲು ಕುಣಿತದ ಕಲಾವಿದರು.ಮತ್ತಿತರ ಅನೇಕ ಕಲಾತಂಡಗಳು ಕಾರ್ಯಕ್ರಮದ ರಂಗನ್ನು ಇಮ್ಮಡಿಗೊಳಿಸಿದವು.
ಪಟ್ಟಣದ ಹುಲಿಗೆಮ್ಮ ದೇವಸ್ಥಾನದಲ್ಲಿ ಸಂಡೂರು ವಿರಕ್ತಮಠದ ಪ್ರಭುಮಹಾಸ್ವಾಮಿಗಳು, ಯಶವಂತನಗರದ ಶ್ರೀ ಗಂಗಾಧ ಮಹಾಸ್ವಾಮಿಗಳು ಪೂರ್ಣಕುಂಭದ ಮೆರವಣಿಗೆಗೆ ಚಾಲನೆ ನೀಡಿದರು.
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ವರಲಕ್ಷ್ಮೀ ಹಬ್ಬದ ಪ್ರಯುಕ್ತ ಕೆ.ಎಸ್. ದಿವಾಕರ್ ಅವರು ಹಮ್ಮಿಕೊಂಡಿದ್ದ 1000ಕ್ಕೂ ಹೆಚ್ಚು ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮವನ್ನು ಶ್ರೀ ಗಂಗಾಧರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಚಾಲನೆ ನೀಡಿದರು.