ಉಡಮಗಲ್ ಖಾನಾಪುರದ ಪ್ರೌಢಶಾಲೆ: ತಾರಾಲಯ ಕಾರ್ಯಕ್ರಮ

ರಾಯಚೂರು,ನ.೨೧-ತಾಲೂಕಿನ ಉಡಮಗಲ್ ಖಾನಾಪುರ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಾಲಾ ಅಂಗಳದಲ್ಲಿ ತಾರಾಲಯ ಕಾರ್ಯಕ್ರಮ ಜರುಗಿತು.
ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಸಹಕಾರದೊಂದಿಗೆ ಶಾಲಾ ವಿದ್ಯಾರ್ಥಿಗಳಿಗೆ ಆಕಾಶ ನಕ್ಷತ್ರಗಳು ಆಕಾಶಕಾಯಗಳು ಗ್ರಹಗಳ ಚಲನವಲನ ಸೂರ್ಯನ ಕಾರ್ಯ ಚಂದ್ರನ ಚಲನವಲನ ಆಕಾಶದಲ್ಲಿ ಹೇಗೆ ನಡೆಯುತ್ತದೆ ಕುರಿತು ವಿದ್ಯಾರ್ಥಿಗಳಿಗೆ ಉತ್ತಮವಾದ ರೀತಿಯಲ್ಲಿ ವೀಕ್ಷಣೆ ಮಾತನಾಡಿದರು.
ನಮ್ಮ ಶಾಲೆಯಲ್ಲಿ ಈ ಒಂದು ಕಾರ್ಯಕ್ರಮವನ್ನು ಮಕ್ಕಳಿಗೆ ಸಂಯೋಜಕರಾದ ಅರ್ಜುನ್ ಮತ್ತು ಅಕ್ಷಯರವರು ಬಹಳ ಅರ್ಥಪೂರ್ಣವಾಗಿ ಆಯೋಜನೆಯನ್ನ ಮಾಡಿದ್ದರು. ನಮ್ಮೆಲ್ಲ ಶಿಕ್ಷಕರು ಮತ್ತು ಮುಖ್ಯ ಗುರುಗಳು ಸಮೇತವಾಗಿ ಆಕಾಶ ಕಾಯದ ನಡೆಯುತಕ್ಕಂತಹ ನಕ್ಷತ್ರಗಳ ಗ್ರಹಗಳ ಚಂದ್ರನ ಸೂರ್ಯನ ಕಾರ್ಯ ಚಟುವಟಿಕೆಗಳನ್ನ ಬಹಳ ಆಕರ್ಷಣೆಯವಾದ ರೀತಿಯಲ್ಲಿ ದೃಶ್ಯಾವಳಿಗಳನ್ನು ತೋರಿಸಿದರು.
ಇದು ಮಕ್ಕಳಿಗೆ ಬಹಳ ಉಪಯೋಗವಾಗುತ್ತದೆ ಎಂದು ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರು ಡೆಡ್ ಕ್ರಾಸ್ ಶಿಕ್ಷಣ ವಿಭಾಗದ ಜಿಲ್ಲಾ ಸಂಚಾಲಕರಾದ ಡಾ. ದಂಡಪ್ಪ ಬಿರಾದಾರ್ ರವರು ಹೇಳಿದರು.ಶಾಲೆಯ ಮುಖ್ಯ ಗುರುಗಳಾದ ವೀರೇಶ್ ಅಂಗಡಿ ರವರು ಮಾತನಾಡುತ್ತಾ ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ತೋರಿಸುವುದರಿಂದ ವಿಜ್ಞಾನ ವಿಷಯದಲ್ಲಿ ಹೆಚ್ಚು ಆಸಕ್ತಿ ಮೂಡುತ್ತದೆ ಜೊತೆಗೆ ಸರಳವಾಗಿ ಪಠ್ಯಪುಸ್ತಕದಲ್ಲಿ ಬರುವ ವಿಷಯವನ್ನು ಬೇಗ ಮನನ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.
ಇವರು ವಾಹನ ಸಮೇತವಾಗಿ ಬಂದು ನಮಗೆ ಈ ಕಾರ್ಯಕ್ರಮ ನಡೆಸಿ ಕೊಟ್ಟಿದ್ದಕ್ಕೆ ಶಾಲೆ ಪರವಾಗಿ ಅಭಿನಂದನೆಗಳನ್ನು ತಿಳಿಸಿದರು. ಶಾಲೆಯ ವಿಜ್ಞಾನ ವಿಷಯ ಶಿಕ್ಷಕರಾದ ವೀರೇಂದ್ರ ಪಾಟೀಲ್ ರವರು ಕಾರ್ಯಕ್ರಮ ಆಯೋಜನೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇದೇ ಸಂದರ್ಭದಲ್ಲಿ ಈ ಕಾರ್ಯಕ್ರಮದ ಸಂಯೋಜಕರಾದ ಅರ್ಜುನ್ ಮತ್ತು ಅಕ್ಷಯ ಇವರಿಗೆ ಡಾ ಬಿರಾದಾರ ಪುಸ್ತಕವನ್ನು ಕೊಟ್ಟು ಅಭಿನಂದನೆಗಳನ್ನ ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಲಕ್ಷ್ಮಿದೇವಿ ನಫಿಜಾ ಅಂಜುಮ್ ಪಾಂಡುರಂಗ ದೇಸಾಯಿ ಶಶಿಕಲಾ ಮಂಜುಳಾ ಸೇರಿದಂತೆ ರಾಯಚೂರು ನವೋದಯ ಶಿಕ್ಷಣ ಮಹಾವಿದ್ಯಾಲಯದ ಬಿ.ಎಡ್ ಕಾಲೆಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನರಸಿಂಹಲು ಪ್ರಶಿಕ್ಷಣಾರ್ಥಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಚೆನ್ನರೆಡ್ಡಿ ಪಾಟೀಲ್ ವಂದನಾರ್ಪಣೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.