ಉಡಚಾನಹಟ್ಟಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ

ಕರಜಗಿ:ಮಾ.16:ಅಫಜಲಪುರ ತಾಲ್ಲೂಕಿನ ಉಡಚಾನಹಟ್ಟಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎದುರಾಗಿದೆ.
ನೀರು ಸಂಗ್ರಹಣೆಗೆ ಮಹಿಳೆಯರು, ಮಕ್ಕಳು ರಾತ್ರಿ ಹಗಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ರಾತ್ರಿ 3 ಗಂಟೆಯಿಂದ ದಿನವಿಡೀ ನೀರಿಗಾಗಿ ಕಾಯ್ಕೊಂಡು ಕುಳಿತುಕೊಳ್ಳಬೇಕು ಕೆಲವರು ಎರಡು ಕಿ.ಮೀ. ದೂರ ನಡೆದು ನೀರು ತರಬೇಕಾದ ಸ್ಥಿತಿ ಇದೆ.
ಉಡಚಾನಹಟ್ಟಿ ಗ್ರಾಮದಲ್ಲಿ ನೀರಿಗೆ ತಾತ್ವಾರ ಎದುರಾಗಿರುವುದು ಅಚ್ಚರಿ ಮೂಡಿಸಿದೆ. ನೀರು ಲಭ್ಯವಾಗದೇ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಜನರ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸಬೇಕು ಎಂದು ಗ್ರಾಮಸ್ಥರು ಕಳಕಳಿಯಿಂದ ಕೇಳಿ ಕೊಳ್ಳುತ್ತಿದ್ದಾರೆ, ಮೂರು ಕೀ, ಮೀ ಪಕ್ಕದಲ್ಲಿ ಹಿರಿಯಾಳ ಗ್ರಾಮದಲ್ಲಿ ಭೀಮಾ ನದಿ ಇದ್ದರು ನಮಗೆ ಕುಡಿಯಲು ನೀರು ಸಿಗತಾಯಿಲ್ಲ,ಭೀಮಾ ನದಿಯಲ್ಲಿ ಒಂದು ಹನಿಯು ಕೂಡಾ ನೀರು ಇಲ್ಲ ಅದರಿಂದಲೂ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಮೂರ್ನಾಲ್ಕು ವರ್ಷಳಿಂದಲೂ ಈ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಸೆ ಇದೆ ಆದರೂ ಕೂಡಾ ಅಧಿಕಾರಿಗಳು ಕೊಳವೆಬಾವಿ ಕೊರೆಸುತ್ತಲೇ ಇದ್ದಾರೆ. ನೀರಿನ ಲಭ್ಯತೆ ಇಲ್ಲದೇ ಕೈಚೆಲ್ಲಿ ಕುಳಿತ್ತಿದ್ದಾರೆ. ಕುಡಿಯುವ ನೀರಿನ ಪೂರೈಕೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿರುವುದು ಇದಕ್ಕೆ ತಾಜಾ ಉದಾಹರಣೆಯಾಗಿದೆ ಎನ್ನುತ್ತಾರೆ ಅಲ್ಲಿನ ಜನರು. ಜನಪ್ರತಿನಿಧಿಗಳು ಕುಡಿಯುವ ನೀರಿನ ಸಲುವಾಗಿ ಯಾವುದೇ ಪ್ರಯತ್ನ ಮಾಡದಿರುವುದು ಶೋಚನೀಯವಾಗಿದೆ.

ಗ್ರಾಮದಲ್ಲಿ ಲಭ್ಯವಿರುವ ಒಂದೇ ಒಂದು ಕೊಳವೆ ಬಾವಿಯಿಂದ ಒಂದಿಂಚಿನಷ್ಟು ನೀರು ದೊರೆಯುತ್ತಿದೆ. ಬಹಳಷ್ಟು ಸಮಯ ಕೊಳವೆಬಾವಿಯಿಂದ ನೀರು ಎತ್ತಲು, ನೀರು ತುಂಬಿಕೊಳ್ಳಲು ಗ್ರಾಮದ ಬಹುತೇಕರು ಕೆಲಸ ಕಾರ್ಯಗಳನ್ನು ಬಿಟ್ಟು ಸಮಯ ಕಳೆಯಬೇಕಿದೆ. ಶಾಲಾ ಮಕ್ಕಳು ಶಾಲೆಗೆ ಬಿಡುವು ಇದ್ದಾಗಲೆಲ್ಲ ನೀರಿಗಾಗಿಯೇ ನಿಲ್ಲಬೇಕಿದೆ. ಶಾಲೆಗಳು ಆರಂಭಗೊಂಡರೆ ಮಕ್ಕಳು ಶಾಲೆ ಬಿಟ್ಟು ನೀರು ಹಿಡಿದು ತರುವಲ್ಲಿ ಮುಂದಾಗುತ್ತಿರುವುದು ಸಂಕಷ್ಟಕ್ಕೆ ಗುರಿಯಾಗಿದೆ.


ಇಲ್ಲಿನ ವಾಸಿಸುವ ಪರಿಶಿಷ್ಟರಿಗಂತೂ ನೀರು ತರುವುದೊಂದೇ ಮುಖ್ಯ ಕೆಲಸವಾಗಿದೆ. ನೀರು ಸಾಗಿಸುವ ಸೈಕಲ್‍ಗಳನ್ನು ಬಳಸಿಕೊಂಡು ನೀರು ಒಯ್ಯಬೇಕಿದೆ. ದುಡಿದು ತಿನ್ನುವ ಬಡವರು ಹೊಟ್ಟೆಗೆ ಹಿಟ್ಟಿಲ್ಲ ಎಂದರೂ ಕುಡಿಯುವ ನೀರಿಗಾಗಿ ಉದ್ಯೋಗ ಬಿಟ್ಟು ಸರತಿಯಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣಗೊಂಡಿದೆ ದಯವಿಟ್ಟು
ಮೇಲಾಧಿಕಾರಿಗಳು ಇತ್ತ ಕಡೆ ಗಮನ ಹರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಅಧ್ಯಕ್ಷ ಮಂಜುನಾಥ ನೈಕೋಡಿ ಕೇಳಿ ಕೊಳ್ಳುತ್ತಿದ್ದಾರೆ