ಉಡಚಾಣ ಹುಚ್ಚಲಿಂಗೆಶ್ವರ ಜಾತ್ರೆ 25ರಂದು

ಕರಜಗಿ:ಫೆ.23:ಅಫಜಲಪೂರ ತಾಲೂಕಿನ ಉಡಚಾಣ ಗ್ರಾಮದ ಶ್ರಿ ಹುಚ್ಚಲಿಂಗೆಶ್ವರ ಜಾತ್ರಾ ಮಹೋತ್ಸವ ಶನಿವಾರ ಅದ್ದೂರಿಯಾಗಿ ಜರುಗಲಿದೆ,
ಶುಕ್ರವಾರ ರಾತ್ರಿ 10.30 ಗಂಟೆಗೆ ಭಕ್ತರ ಸಮೂಹದೊಂದಿಗೆ ಅಗ್ನಿ ಕುಂಡದಲ್ಲಿಯ ಬನ್ನಿ ಕೊರಡು ರಾಶಿಗೆ ಅಗ್ನಿ ಸ್ಪರ್ಶ ಮಾಡಲಾಗುವುದು, ನಂತರ ವಿವಿದ ಭಜನಾ ಮಂಡಳಿಗಳಿಂದ ಸಂಗೀತ ಗಿಗಿ ಪದಗಳು ಬೆಳಗಿನವರಗೆ ನಡೆಯುವವು,
25/02/23 ಶನಿವಾರ ಮುಂಜಾನೆ 10 ಗಂಟೆಗೆ ದೇವಸ್ಥಾನ ದಿಂದ ಶ್ರಿಹುಚ್ಚಲಿಂಗೆಶ್ವರ ಮೂರ್ತಿಯನ್ನು ಪಲ್ಲಕ್ಕಿಯೊಂದಿಗೆ ವಿಜೃಂಭಣೆಯಿಂದ ಬಿಮಾನದಿಯಲ್ಲಿ ಗಂಗೆ ಸಿತಾಳ ಪೆÇಜೈಗೈದು ,ನಂತರ ಪಲ್ಲಕ್ಕಿ ಮೆರವಣಿಗೆಯೊಂದಿಗೆ ಮಂದಿರ ಪ್ರವೇಶಿಸುವದು ,ಬಂಡಾರಿ ದಂಪತಿಗಳಿಂದ ಮಧ್ಯಾಹ್ನ 12 ಕ್ಕೆ ಚಂದ್ರಾಯುಧದೊಂದಿಗೆ ಅಗ್ನಿ ಪ್ರವೇಶ ಮಾಡುವುದು,
ದೊಡ್ಡ ಪ್ರಮಾಣದ ದನಗಳ ಜಾತ್ರೆ ನಡೆಯುವುತ್ತದೆ ದನಗಳಿಗೆ ನೀರಿನ ಸೌಲಬ್ಯ ಮತ್ತು ಉಚಿತ ವೈದ್ಯಕೀಯ ತಪಾಸಣೆ ಮತ್ತು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮಾಡಲಾಗುವುದು ಶನಿವಾರಮತ್ತು ಸೋಮುವಾರ ರಾತ್ರಿ ಹಳ್ಳಿ ಹುಲಿ ಕೊಟ್ಟ ಬೆಳ್ಳಿ ಕಾಲುಂಗರ ಎಂಬ ನಾಟಕ ಪ್ರದರ್ಶನಗೊಳ್ಳುವುದು ಎಂದು ಕಮಿಟಿಯ ಅಧ್ಯಕ್ಷರಾದ ಸಿದ್ದಾರ್ಥ ಮೈಂದರ್ಗಿ,ಗಡದೆಪ್ಪಾ ಕಡ್ಲಜಿ,ಖಾಜಪ್ಪ ನಾಲ್ಕಮನ,ವಿಠ್ಠಲ ಕಡ್ಲಾಜಿ ತಿಳಿಸಿದ್ದಾರೆ,