
ಬೀದರ:ಎ.7: ನಗರದ ಜನವಾಡಾ ರಸ್ತೆ ಹತಿರದ ವಿಜಯದೇವಿ ಪೌಂಡೆಶನ್ ಅಡಿಯಲ್ಲಿ ಉಟಗೆ ಆಸ್ಪತ್ರೆಯಲ್ಲಿ ವಲ್ರ್ಡ್ ಆಟಿಸಂ ಜಾಗೃತಿ ಶಿಬರದ ಉದ್ಘಾಟನೆಯನ್ನು ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿಗಳಾದ ನಾಗರಾಜ ಅವರು ನೇರವೆರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವನ್ನು ಐ.ಎ.ಪಿ. ಅಧ್ಯಕ್ಷರು ಮತ್ತು ಮಕ್ಕಳ ತಜ್ಞರಾದ ಶ್ರೀಮತಿ ಶಾಂತಲಾ ಕೌಜಲಗಿ ರವರು ಕಾರ್ಯಕ್ರಮವನ್ನುದ್ದೇಶಿಸಿ, ಸಮಸ್ಯೆಗೆ ಒಳಗಾದ ಮಕ್ಕಳನ್ನು ಪಾಲಕರು ಬೇಗ ಕಂಡು ಹಿಡಿದು, ಚಿಕಿತ್ಸೆ ಕೊಡಿಸಲು ಸಹಕರಿಸಬೇಕು ಹಾಗೂ ಪಕ್ಕದವರಿಗೂ ಸಹ ತಿಳಿಸಿ, ಸಹಾಯ ಮಾಡಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಡಾ. ರವಿಕಾಂತ ಐ.ಎ.ಪಿ. ಪ್ರಧಾನ ಕಾರ್ಯದರ್ಶಿ ಅವರು ಆಟಿಸಂ ರೋಗದ ಲಕ್ಷಣ ಮತ್ರು ಅದರ ಉಪಚಾರ ಬಗ್ಗೆ ವಿವರಿಸಿದರು, ಸ್ವಲೀನತೆ ಮತ್ತು ಅದರೊಂದಿಗೆ ವಾಸಿಸುವವರ ಬಗ್ಗೆ ಜಾಗೃತಿ ಮೂಡಿಸಲು ಪ್ರಪಂಚದಾದ್ಯಂತ ವಿಶ್ವ ಆಟಿಸಂ ದಿನವನ್ನು ಆಚರಿಸಲಾಗುತ್ತದೆ, ಅಸ್ವಸ್ಥತೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲು ವೇದಿಕೆಯನ್ನು ಬಳಸಿ, ಸ್ವಲೀನತೆಯ ವ್ಯಕ್ತಿಗಳೊಂದಿಗೆ ಸರಿಯಾಗಿ ಮತ್ತು ತಾಳ್ಮೆಯಿಂದ ಸಂವಹನ ನಡೆಸುವುದಾಗಿದೆ ಎಂದು ಹೇÉಳಿದರು.
ಅತಿಥಿ ಸ್ಥಾನವನ್ನು ಡಾ. ಪ್ರಶಾಂತ ಉಟಗೆ ರವರು ಕಾರ್ಯಕ್ರಮವನ್ನುದ್ದೇಶಿಸಿ, ಮಕ್ಕಳನ್ನು ವೈದ್ಯರ ಕೊಡುವ ಮಾತ್ರೆಗಳು ಕಡೆಗಣಿಸದೇ, ಪೂರ್ಣ ಮಾತ್ರೆಗಳು ಮಕ್ಕಳಿಗೆ ಕೊಡಬೇಕು ಹಾಗೂ ಏನಾದರೂ ಮಗುವಿನ ಕುರಿತು ಪ್ರಶ್ನೆ ಇದ್ದಲ್ಲಿ ನೇರವಾಗಿ ವೈದ್ಯರ ಸಲಹೆ ಪಡೆಯಬೇಕೆಂದು ಹೇಳಿದರು.
ಮಕ್ಕಳ ತಜ್ಞರಾದ ಡಾ. ಸುಭಾಷ ಪಾಟೀಲ ರವರು ಕಾರ್ಯಕ್ರಮವನ್ನುದ್ದೇಶಿಸಿ, ಮಕ್ಕಳ ಸಮಸ್ಯೆಗಳನ್ನು ಆಲಿಸಿ, ಪ್ರಶಾಂತ ಉಟಗೆ ರವರನ್ನು ಚಿಕಿತ್ಸೆ ಕೊಡಲು ಸಹಕರಿಸಿದಾಗ ಅವರು ಹೈದ್ರಾಬಾದದಿಂದ ಬಂದು, ತಮ್ಮ ಅಳಿಲು ಸೇವೆಯನ್ನು ಬೀದರ ಮಕ್ಕಳಿಗೆ ಕೊಡಲು ಸಹಾಯ ಮಾಡಿದ್ದಾರೆ ಎಂದು ಹೇಳಿದರು.
ಪಾಲಕರು ಸಹ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಡಾ. ಅಲ್ತಾಫ್ ಹುಸೇನ್, ಡಾ. ನಾದಿರ್, ಸಿಬ್ಬಂದಿ ವರ್ಗದವರಾದ ಶ್ರೀಕಾಂತ ಪಾಟೀಲ, ಡಾ. ಹೇಮಾ ಜೋಷಿ, ಸಂಗಮೇಶ ಬಿರಾದಾರ, ಡಾ. ವೆಂಟಕರಮಣ ಪಾಟೀಲ, ಡಾ. ನಿಕಿತಾ ಪಾಟೀಲ, ರಾಘವ ಶೆಟ್ಟಿ, ಡಾ. ಮಾನಸಿ ಕುಲಕರ್ಣಿ ಇನ್ನೀತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ರೇಣುಕಾ ಗೋಪಿಚಂದ ತಾಂದಳೆ ರವರು ನೆರವೇರಿಸಿಕೊಟ್ಟರು, ಸ್ವಾಗತವನ್ನು ಉಮಾಕಾಂತ ಲಾವಟೆ ರವರು ನೆರವೇರಿಸಿಕೊಟ್ಟರು, ವಂದನಾರ್ಪಣೆ ಡಾ. ಅರ್ಚನಾ ಕುಲಕರ್ಣಿ ರವರು ನೆರವೇರಿಸಿಕೊಟ್ಟರು.