ಉಟಕನೂರು ಪಂಚಾಯತಿ:ಬಾರಿ ಭ್ರಷ್ಟಾಚಾರ ತನಿಖೆಗೆ ಆಗ್ರಹ.

ಮಾನ್ವಿ,ಫೆ.೨೮:- ಉಟಕನೂರು ಗ್ರಾಮ ಪಂಚಾಯತಿಯಲ್ಲಿ ೧೫ ನೇ ಹಣಕಾಸಿನಲ್ಲಿ ಬಾರಿ ಭ್ರಷ್ಟಾಚಾರ ನಡೆದಿದ್ದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ,ಅಧ್ಯಕ್ಷ, ಸದಸ್ಯರು, ಗುತ್ತಿಗೆದಾರಿಂದ ಸರ್ಕಾರದ ಅನುದಾನವು ಸಂಪೂರ್ಣವಾಗಿ ಲೂಟಿಯಾಗಿದ್ದು ಕೂಡಲೇ ತನಿಖೆ ಮಾಡಿ ವಾರದೊಳಗೆ ಹಣವನ್ನು ವಾಪಸು ಪಡೆದು ಇವರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಇಲ್ಲವಾದಲ್ಲಿ ಗ್ರಾಮಸ್ಥರಿಂದ ಉಗ್ರ ಸ್ವರೂಪದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥ ಕರ್ನಾಟಕ ಪ್ರದೇಶ ವಾಲ್ಮೀಕಿ ಸಂಘದ ಮುಖಂಡ ಎಂ ಬಿ ನಾಯಕ ಉದ್ಬಾಳ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಇವರು ಅಭಿವೃದ್ಧಿ ಅಧಿಕಾರಿಯೂ ಸರ್ಕಾರದ ಅನುದಾನವನ್ನು ದುರ್ಬಳಕೆ ಆರೋಪದಡಿಲ್ಲಿ ಒಬ್ಬ ಸದಸ್ಯರೊಳಗೊಂಡತೆ ಕರ್ನಾಟಕ ರಾಜ್ಯ ಪಂಚಾಯತಿ ನಿಯಮಾನುಸಾರ ಅಮಾನತ್ತು ಮಾಡಿದ್ದು ನಮಗೆ ಸಂದ ಜಯವಾಗಿದ್ದು ಇನ್ನುಳಿದ ಅರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಲು ಒತ್ತಾಯಿಸಿದರು.
ಪ್ರಮುಖವಾಗಿ ಉಟಕನೂರು ಗ್ರಾಮ ಪಂಚಾಯತಿ ಅಧ್ಯಕ್ಷ, ಪಿಡಿಓ,ಸದಸ್ಯರ ವಿರುದ್ಧ ಪ್ರಕರಣ ಹಾಗೂ ಸದಸ್ಯತ್ವ ರದ್ದು, ಭ್ರಷ್ಟಾಚಾರ ಮಾಡಿದವರ ವೆಂಡರ್ ಕಪ್ಪು ಪಟ್ಟಿಗೆ ಸೇರಿಸಿವುದು,ಕಡ್ಡಾಯವಾಗಿ ಪಂಚಾಯತಿಯ ಪ್ರತಿ ಊರಿನ ಪ್ರತಿ ವಾರ್ಡಿನಲ್ಲಿ ಸಭೆ ಮಾಡಬೇಕು ಎಂದರು..
ಈ ಸಂದರ್ಭದಲ್ಲಿ ಮುಖಂಡರಾದ,ಮಹಾಂತೇಶ್ ನಾಯಕ ತಡಕಲ್, ಬುಡ್ಡಪ್ಪ ನಾಯಕ ಮಲ್ಲಿನ ಮಡಗು,ಬಸವರಾಜ ಬಾಗಲವಾಡ, ಬಸವರಾಜ್ ನಾಯಕ ಯಡಿವಾಳ, ಭೀಮನ ಗೌಡ ಉಟಕನೂರು, ಗೋವಿಂದ್ ನಾಯಕ ಚಿಕಲಪರ್ವಿ, ಮಲ್ಲೇಶ್ ನಾಯಕ ಮಾನ್ವಿ, ವಿಜಯ ನಾಯಕ ಕೊಟ್ಟೆಕಲ್, ಶಿವರಾಜ್ ಕರಡಿ, ಚನ್ನ ಬಸವ ಪೂಜಾರಿ, ಶಿವರಾಜ ಪಾಟಿಲ್, ಕನಕಪ್ಪ ಬೇಳವಾಟ, ರಮೇಶ ನಾಯಕ ದೊತರಬಂಡಿ, ಅಚ್ಚುತರಾಯ ಸೌಕಾರ, ಶಿವರಾಜ ಉದ್ಘಾಳ್, ವೀರನಗೌಡ ಉದ್ಘಾಳ್, ಮಾರೆಪ್ಪ ಹಿರೇಕೊಟ್ಟೆಕಲ್,ಇದ್ದರು.