ಉಜ್ವಲ ಭಾರತ ಉಜ್ವಲ ಭವಿಷ್ಯ ವಿದ್ಯುತ್ ಮಹೋತ್ಸವವನ್ನು ಶಾಸಕ ಎಂ.ಎಸ್.ಸೋಮಲಿಂಗಪ್ಪ ಉದ್ಘಾಟನೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.27: ನಗರದ ಎ.ವಿ.ಎಸ್. ಕಲ್ಯಾಣ ಮಂಟಪದಲ್ಲಿ ಹೊಸ ಮತ್ತು ನವಿಕರಿಸಬಹುದಾದ ಇಂಧನ ಸಚಿವಾಲಯ ಹಾಗೂ ವಿದ್ಯುತ್ ಇಲಾಖೆಯವತಿಯಿಂದ 75ನೇ ವರ್ಷದ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಉಜ್ವಲ ಭಾರತ ಉಜ್ವಲ ಭವಿಷ್ಯ ಇಂಧನ @ 2047 ವಿದ್ಯುತ್ ಮಹೋತ್ಸವದ ಸಮಾರಂಭವನ್ನು ಶಾಸಕ ಎಂ.ಎಸ್.ಸೋಮಲಿಂಗಪ್ಪ ಉದ್ಘಾಟಿಸಿದರು.
ಪ್ರತಿಯೊಬ್ಬ ನಾಗರಿಕರಿಗೆ ವಿದ್ಯುತ್ ಪೂರೈಕೆ ಅವಶ್ಯಕವಾಗಿದೆ, ಬಿ.ಪಿ.ಎಲ್.ಪಡಿತರ ಕಾರ್ಡ್ ಹೊಂದಿದ ಕುಟುಂಬಕ್ಕೆ 8 ಯೂನಿಟ್ ವಿದ್ಯುತ್ ಉಚಿತ ಪೂರೈಕೆ ಮಾಡಲಾಗುವುದು, ರೈತ ಏತ ನೀರಾವರಿಗೆ ವಿದ್ಯುತ್ ಅವಶ್ಯಕತೆ ಇದೆ, ರೈತರ ಏಳಿಗೆ ನಮ್ಮೆಲ್ಲರ  ಹೆಮ್ಮೆಯ ವಿಷಯ,    ವಿದ್ಯುತ್ ಬೆಲೆ ಏರಿಕೆಯನ್ನು  ಮುಖ್ಯಮಂತ್ರಿ ಹತ್ತಿರ ರೈತರ ನಿಯೋಗವನ್ನು ಕರೆದುಕೊಂಡು ಹೋಗಿ 2.50 ಮಾಡಿಸಲಾಗುವುದು, ಈಗ 7ತಾಸು ವಿದ್ಯುತ್ ಪೂರೈಕೆ ಇದೆ, ಇದನ್ನು 8 ತಾಸಿಗೆ ಹೆಚ್ಚಿಸುವ ಕಾರ್ಯ ಮಾಡಲಾಗುತ್ತದೆ, ರೈತರ ಪರ ಏಳಿಗೆ ಶ್ರಮಿಸಲಾಗುತ್ತದೆ.
 ಸೌಭಾಗ್ಯ, ಬೆಳಕು, ಗಂಗಾ ಕಲ್ಯಾಣ ಯೋಜನೆಯ ಫಲನುಭವಿಗಳಿಗೆ  ವಿದ್ಯುತ್ ಸೇವಾ ಪ್ರಮಾಣ ಪತ್ರ ನೀಡಿದರು.
ವಿದ್ಯುತ್ ಕುರಿತು ಜಾಗೃತಿ ಅಣುಕು ನಾಟಕ ಪ್ರದರ್ಶನ ನೀಡಿದರು.
ತಹಶೀಲ್ದಾರ್ ಎನ್.ಎಂ‌.ಮಂಜುನಾಥ ಸ್ವಾಮಿ, ನಗರ ಸಭೆ ಅಧ್ಯಕ್ಷೆ ಕೆ.ಸುಶೀಲಮ್ಮ, ಕಲಬುರಗಿ ಜೆಸ್ಕಾಂ ತಾಂತ್ರಿಕ ನಿರ್ದೇಶಕ ಬಿ.ಆರ್.ಸೋಮಶೇಖರ್, ವಿಜಯಪುರ ಡಿ.ಜಿ.ಎಂ.ಮಲ್ಲಿಕಾರ್ಜುನಜಿಲ್ಲಾ ಜೆಸ್ಕಾಂ ವೃತ್ತ ಕಛೇರಿಯ ಅಧೀಕ್ಷಕ ಅಭಿಯಂತರ  ವೆಂಕಟೇಶುಲು, ಜಿಲ್ಲಾ ಗ್ರಾಮೀಣ ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಜೆ.ರಂಗನಾಥ ಬಾಬು ಹಾಗೂ ಜೆಸ್ಕಾಂ ಸಿಬ್ಬಂದಿ ಇದ್ದರು.