ಉಜ್ವಲ ಭಾರತ -ಉಜ್ವಲ ಭವಿಷ್ಯ ದಿವಸದ ಪೂರ್ವಭಾವಿ ಸಭೆ

ಕಲಬುರಗಿ.ಜು.16: ಆಜಾದಿ ಕಾ ಅಮೃತಮಹೋತ್ಸವ ಆಚರಣೆ ಅಡಿಯಲ್ಲಿ “ಉಜ್ವಲ ಭಾರತ-ಉಜ್ವಲ ಭವಿಷ್ಯ” ದಿವಸವನ್ನು ಪವರ್@2047 ಅಂಗವಾಗಿ ಕಲಬುರಗಿಯ ಜೆಲ್ಲೆಯ ಕಮಲಾಪೂರ ಮತ್ತು ಆಳಂದ ಪಟ್ಟಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸಂಬಂಧಪಟ್ಟಂತಹ ಅಧಿಕಾರಿಗಳು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಬೇಕೆಂದು ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗಳಿ ಅವರು ಸೂಚಿಸಿದರು.
ಶನಿವಾರದಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘ(ರಿ)ದ ಭವನದಲ್ಲಿ ಉಜ್ವಲ ಭಾರತ- ಉಜ್ವಲ ಭವಿಷ್ಯ ದಿವಸವನ್ನು ಆಚರಿಸುವ ಕುರಿತು ಕರೆದಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಜುಲೈ 27ರಂದು ಕಮಲಾಪೂರ ಹಾಗೂ 29 ರಂದು ಆಳಂದದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಈ ನಿಟ್ಟಿನಲ್ಲಿ ಪ್ರಾದೇಶಿಕ ಭಾμÉಯಲ್ಲಿ 7 ವಿಷಯಗಳ ಮೇಲೆ ಕಿರುಚಿತ್ರಗಳು/ ದೃಶ್ಯಾವಳಿಗಳನ್ನು ಪ್ರದರ್ಶಿಸಬೇಕು ಮತ್ತು ಪೆÇೀಸ್ಟರ್ ಗಳನ್ನು ಹಾಕಬೇಕು. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಬೀದಿ ನಾಟಕ, ಜಾನಪದ ನೃತ್ಯಗಳನ್ನು ಆಯೋಜಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೂಚಿಸಿದರು.
ಭಾರತ ಸರ್ಕಾರ ಮತ್ತು ಕನಾಟಕದ ಸರ್ಕಾರದ ವಿವಿಧ ಯೋಜನೆಗಳಲ್ಲಿ ವಿದ್ಯುತ್ ಸೌಲಭ್ಯ ಪಡೆದಂತಹ ಫಲಾನುಭವಿಗಳ ಅನಿಸಿಕೆಗಳ ಹಂಚಿಕೊಳ್ಳುವುದರ ಮೂಲಕ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಕೇಂದ್ರ ಪುರಸ್ಕೃತ ಸೌಭಾಗ್ಯ, ದೀನ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ ಹಾಗೂ ಬೆಳಕು ಯೋಜನೆಗಳಲ್ಲಿ ರೈತರ ಮನೆಗಳಲ್ಲಿ ವಿದ್ಯುತ್ ಯೋಜನೆ ಕಲ್ಪಿಸಲಾಗಿದೆ. ಮುಂದಿನ 2047 ರಲ್ಲಿ ವಿದ್ಯುತ್ ಅನ್ನು ಎಲ್ಲಾ ಗ್ರಾಮಗಳಿಗೆ ಒದಗಿಸುವ ಉದ್ದೇಶವನ್ನು ಭಾರತ ಸರ್ಕಾರ ಹೊಂದಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಕಲಬುರಗಿ ಜೆಸ್ಕಾಂ ಅಧೀಕ್ಷಕ ಅಭಿಯಂತರರಾದ ಸಿದ್ದಪ್ಪ ಬೆನ್‍ಜೀಗೇರಿ, ಕಾರ್ಯನಿರ್ವಾಹಕ ಅಭಿಯಂತರರಾದ ಎಂ.ಎ. ಮಠಪತಿ, ಸಂತೋಷ ಚೌವ್ಹಣ, ಎನ್.ಟಿ.ಪಿ.ಸಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಆರ್. ವಿನೋ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು ಉಪಸ್ಥಿತರಿದ್ದರು.