ಉಜ್ವಲ್ ಯೋಜನೆಯ ಪ್ರಯೋಜನೆ ಪಡೆದುಕೊಳ್ಳಿ : ತಿಪ್ಪರಾಜು ಹವಾಲ್ದಾರ್

ಮಾನ್ವಿ:ನ.೨೪. ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಉಜ್ವಲ್ ಯೋಜನೆಯ ಪ್ರಯೋಜನೆಯನ್ನು ಪ್ರತಿಯೊಂದು ಬಡ ಕುಟುಂಬಗಳು ಪಡೆದುಕೊಳ್ಳಬೇಕು ಎಂದು ಎಸ್ ಟಿ ಮೋರ್ಚಾದ ರಾಜ್ಯಾಧ್ಯಕ್ಷ ಹಾಗೂ ರಾಯಚೂರು ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಹೇಳಿದರು.
ತಾಲೂಕಿನ ಚಂದ್ರಬಂಡ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಸರಿ ಸುಮಾರು ೮೦ಕ್ಕೂ ಹೆಚ್ಚು ಕುಟುಂಬಕ್ಕೆಉಚಿತವಾಗಿ ಗ್ಯಾಸ್ ಮತ್ತು ಸಿಲಿಂಡರ್ ವಿತರಿಸಿ ಮಾತಾನಾಡಿದ ಅವರು ಪ್ರಧಾನಿ ಮಂತ್ರಿಗಳಾದ ಸನ್ಮಾನ್ಯ ನರೇಂದ್ರ ಮೋದಿಯವರು ದೇಶದ ಬಡತನ ರೇಖೆಗಳಿಗಿಂತ ಕೆಳಗಿರುವ ಕುಟುಂಬಗಳಿಗೆ ಅನುಕೂಲವಾಗಲೆಂದು ಈ ಯೋಜನೆಯನ್ನು ಜಾರಿಗೊಳಿಸಿದ್ದು ಪ್ರತಿಯೊಬ್ಬರು ಈ ಯೋಜನೆಯನ್ನು ಸದುಪಯೋಗ ಪಡೆದುಕೋಳ್ಳಬೇಕೆಂದು ತಿಪ್ಪರಾಜು ಹವಾಲ್ದಾರ್ ಹೇಳಿದರು.
ಈ ಸಂದರ್ಭದಲ್ಲಿ ಭಾಜಪಾ ಗ್ರಾಮೀಣ ಮಂಡಲದ ಅಧ್ಯಕ್ಷರಾದ ಶಂಕರಗೌಡ ಮಿರ್ಜಾಪುರ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಶ್ರೀ ಅಚ್ಯುತ್ ರೆಡ್ಡಿ, ಜಿಲ್ಲಾ ಭಾಜಪಾ ಕಾರ್ಯದರ್ಶಿ ಶಾಂತಕುಮಾರ್ ಉಪ್ರಾಳ, ಬಂಡಾಯಗೌಡ ಅರಷಗೇರಿ, ಕೆ.ಬಲರಾಮ ಕಡಮದೊಡ್ಡಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.