
ಸಂಜೆವಾಣಿ ವಾರ್ತ
ಕೂಡ್ಲಿಗಿ.ಮೇ. 10 :- ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಉಜ್ಜಿನಿ ಗ್ರಾಮದ ಮತಗಟ್ಟೆಯೊಂದರಲ್ಲಿ ಇಂದು ಬೆಳಿಗ್ಗೆ ಉಜ್ಜಿನಿ ಶ್ರೀಗಳು ಮತದಾನದ ಹಕ್ಕು ಚಲಾಯಿಸಿದರು.
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಉಜ್ಜಯಿನಿ ಪೀಠದ ಶ್ರೀ ಶ್ರೀ ಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳು ಶ್ರೀ ಮರುಳಾಸಿದ್ದೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 238ರಲ್ಲಿ ಇಂದು ಬೆಳಿಗ್ಗೆ ಮತದಾನ ಮಾಡುವ ಮೂಲಕ ಸಂವಿಧಾನಿಕ ಹಕ್ಕನ್ನು ಚಲಾಯಿಸಿದರು.