ಉಜ್ಜಿನಿ ಪೀಠದಲ್ಲಿ ಜಂಗಮ ವಟುಗಳಿಗೆ ಶಿವ ದೀಕ್ಷೆ

ಕೊಟ್ಟೂರು ಮೇ 19. : ತಾಲೂಕಿನ ಉಜ್ಜಿನಿ ಸದ್ದರ್ಮ ಪೀಠದಲ್ಲಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವ ಹಾಗೂ ದಾರುಕ ಜಯಂತಿ ಅಂಗವಾಗಿ ಪೀಠದಲ್ಲಿ
ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷೆ ನೀಡಲಾಯಿತು. ಪೀಠದ ಸಿದ್ದಲಿಂಗ ಜಗದ್ಗುರು ಮಾತನಾಡಿ, ಜಂಗಮರು ಶಿವನ ಜ್ಞಾನ ಪಡೆಯಬೇಕಾದರೆ, ಮೊದಲು ಅಯ್ಯಾಚಾರ ದೀಕ್ಷೆ ಪಡೆಯಬೇಕು ಎಂದರು.