ಉಜ್ಜಿನಿ ಪೀಠಕ್ಕೆ ಸಚಿವ ಆನಂದಸಿಂಗ್ ಬೇಟಿ

ಕೊಟ್ಟೂರು ನ 16 :ತಾಲೂಕಿನ ಉಜ್ಜಿನಿ ಪೀಠದ ಸ್ವಾಮಿಗಳ ವಿವಾದ ಹಿನ್ನಲೆಯಲ್ಲಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್
ಉಜ್ಜಿನಿಪೀಠಕ್ಕೆ ಭೇಟಿನೀಡಿ ಸ್ವಾಮಿಗಳ ಜೋತೆ ಸುಧೀರ್ಘವಾಗಿ ಚರ್ಚಿಸಿದರು.
ಪೀಠಧ್ಯಕ್ಷರ ಗೊಂದಲ ಬೇಡ ನಿಮ್ಮಪರವಾಗಿ ಇರುವ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಪೀಠದಿಂದ ಸಚಿವ ಆನಂದ್ ಸಿಂಗ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಪಿ.ಚನ್ನಬಸವನಗೌಡ ಇವರನ್ನು ಸನ್ಮಾನಮಾಡಲಾಯಿತು. ಇತ್ತೀಚೆಗೆ ಮುಕ್ತಿ ಮಂದಿರದ ಸಭೆಯಲ್ಲಿ ಉಜ್ಜಿನಿ ಪೀಠಕ್ಕೆ ತ್ರಿಲೋಚನ ಶಿವಾಚಾರ್ಯರೇ ಅಧಿಕೃತ ಪಟ್ಟಾಧ್ಯಕ್ಷರು ಎಂದು ರಂಭಾಪುರಿ ಮತ್ತು ಕೇದಾರ ಸ್ವಾಮಿಗಳು ಘೋಷಣೆ ಮಾಡಿದ ಹಿನ್ನಲೆಯಲ್ಲಿ ಗೊಂದಲ ಮೂಡಿದೆ.