ಉಜ್ಜಿನಿಪೀಠಕ್ಕೆಶಾಸಕಭೀಮಾನಾಯ್ಕಭೇಟಿ

ಕೊಟ್ಟೂರು ನ22: ತಾಲೂಕಿನ ಉಜ್ಜಿನಿ ಪೀಠದಲ್ಲಿ ಮಹಾಸ್ವಾಮಿಗಳ ಬಗ್ಗೆ ಗೊಂದಲದ ಹೇಳಿಕೆ ಹಿನ್ನಲೆಯಲ್ಲಿ ಆರಂಭದಲ್ಲಿ ಸಚಿವ ಶ್ರೀರಾಮುಲು, ಸಂಸದ ದೇವೇಂದ್ರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ನಂತರಹಡಗಲಿ ಶಾಸಕ ಪಿಟಿ ಪರಮೇಶ್ವರನಾಯ್ಕ ಇದೀಗ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಎಸ್.ಭೀಮಾನಾಯ್ಕ ಮಠಕ್ಕೆ ಭೇಟಿನೀಡಿ ಪೀಠದಲ್ಲಿನ ಬೆಳವಣಿಗೆಗಳ ಬಗ್ಗೆ ಚರ್ಚೆಮಾಡಿದರು
ನಂತರ ಮಾತನಾಡಿದ ಶಾಸಕ ಎಸ್.ಭೀಮಾನಾಯ್ಕ ಪೀಠದ ಜೋತೆ ಇಡೀ ಕ್ಷೇತ್ರದ ಜನತೆ ನಿಮ್ಮಜೋತೆ ಇರುತ್ತೆವೆ ಎಂಬ ಭರವಸೆ ನೀಡಿದರು. ಉಜ್ಜಿನಿ ಜಿಲ್ಲಾ ಪಂಚಯಿತಿ ಸದಸ್ಯ ಎಂಎಂಜೆಹರ್ಷವರ್ಧನ, ಬೂದಿಶಿವಕುಮಾರ, ರುದ್ರಯ್ಯ, ಶಾಸಕರ ಆಪ್ತಸಹಾಯಕ ಸಿದ್ದೇಶ, ಮಠದ ವ್ಯವಸ್ಥಾಪಕ ಬಿವೀರೇಶ ಸೇರಿದಂತೆ ಇತರರು ಇದ್ದರು.