ಉಜ್ಜಯಿನಿ ಪುರಾಣ ಮಂಗಲಕಾರ್ಯ

ಸಂಜೆವಾಣಿ ವಾರ್ತೆ ‌
ಕೊಟ್ಟೂರು, ಸೆ.09: ಶ್ರೀ ಮದ್ ಉಜ್ಜಯಿನಿ ಸದ್ದರ್ಮ ಸಿಂಹಾಸನ ಮಹಾಸಂಸ್ಥಾನ ಪೀಠದಲ್ಲಿ ಶ್ರಾವಣ ಮಾಸದ ಪೂಜಾ ಅನುಷ್ಠಾನ ಮಂಗಲ ಮತ್ತು ಮಹಾತಪಸ್ವಿ ಸದ್ಧರ್ಮ ಸೂರ್ಯ ಲಿಂ.ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ಭಗವತ್ಪಾದರ ಪುರಾಣ ಪ್ರವಚನ ಮಹಾಮಂಗಲ
 ಕಾರ್ಯಕ್ರಮವು ಶ್ರೀ ಮದ್ ಉಜ್ಜಯನಿ ಜಗದ್ಗುರುಗಳ ದಿವ್ಯ ಸಾನಿಧ್ಯದಲ್ಲಿ  ಬುಧವಾರ ರಾತ್ರಿನಡೆಯಿತು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ತಿಮ್ಮಣ್ಣ ಹುಲುಮನಿ, ವಿವಿಧ ಮಠಾಧೀಶರರು ಇದ್ದರು