ಉಜ್ಜಯಿನಿ ಜಗದ್ಗುರುಗಳಿಗೆ ಅನ್ಯಾಯವಾದರೆ ಸಹಿಸುವದಿಲ್ಲ

ಕಲಬುರಗಿ ನ 15: ಉಜ್ಜಯಿನಿ ಜಗದ್ಗುರುಗಳಿಗೆ ಅನ್ಯಾಯವಾದರೆ ಭಕ್ತರು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಪ್ರಸ್ತುತ ಜಗದ್ಗುರುಗಳು ಸರಿಯಾಗಿ ಪೀಠವನ್ನು ನಿಭಾಯಿಸುತ್ತಿದ್ದಾರೆ. ಜಗದ್ಗುರುಗಳಿಗೆ ಮಾನಸಿಕವಾಗಿ ಹಿಂಸೆ ನೀಡುವುದು ಸರಿಯಲ್ಲ ನಿನ್ನೆ ನಡೆದ ಬೆಳವಣಿಗೆಯನ್ನು ನಾವು ಒಪ್ಪುವುದಿಲ್ಲ. ಸಿದ್ದಲಿಂಗ ರಾಜ ದೇಶಿಕೇಂದ್ರ ಭಗವತ್ಪಾದರನ್ನು ಬದಲಾವಣೆ ಮಾಡಲು ಬಿಡುವುದಿಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಯುವ ಘಟಕ ಗೌರವ ಅಧ್ಯಕ್ಷ ಎಂ ಎಸ್ ಪಾಟೀಲ್ ನರಿಬೋಳ ಹೇಳಿದ್ದಾರೆ.
ಉಜ್ಜಯಿನಿ ಪೀಠದ ವಿಷಯದಲ್ಲಿ ರಂಭಾಪುರಿ ಮತ್ತು ಕೇದಾರ ಶ್ರೀಗಳ ನಡೆ ಸರಿಯಾದುದಲ್ಲ.ಉಜ್ಜಯಿನಿಯ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರನ್ನು ಜಗದ್ಗುರುಗಳೆಂದು ಸದ್ಭಕ್ತ ಮಂಡಳಿ ಒಪ್ಪಿದೆ. ಇಬ್ಬರು ಜಗದ್ಗುರುಗಳು ಈ ರೀತಿ ಮಾಡಿದರೆ ಸಮಾಜಕ್ಕೆ ಸರಿಯಾದ ಸಂದೇಶ ಹೋಗುವುದಿಲ್ಲ .ಮೊದಲೇ ಪ್ರತ್ಯೇಕ ಲಿಂಗಾಯತ ವೀರಶೈವ-ಲಿಂಗಾಯತ ಜಗಳದ ಮಧ್ಯೆ ಇದೊಂದು ಸೇರಿದರೆ ಸಮಾಜದಲ್ಲಿ ಒಗ್ಗಟ್ಟು ಉಳಿಯುವುದು ಅಸಾಧ್ಯ .ಈಗಾಗಿರುವ ಎಲ್ಲ ಬೆಳವಣಿಗೆಗಳನ್ನು ಹಿಂಪಡೆದುಕೊಂಡು ಪ್ರಸ್ತುತ ಉಜ್ಜಯಿನಿ ಜಗದ್ಗುರುಗಳೆ ಜಗದ್ಗುರುಗಳೆಂದು ನಾಲ್ವರು ಜಗದ್ಗುರುಗಳು ಘೋಷಣೆ ಮಾಡಬೇಕು. ಇಲ್ಲದಿದ್ದರೆ ಉಜ್ಜಯಿನಿ ಪೀಠದ ಪರವಾಗಿ ಅ.ಭಾ ವೀರಶೈವ ಮಹಾಸಭೆಯಿಂದ ಹೋರಾಟ ಪ್ರಾರಂಭವಾಗುತ್ತವೆ ಎಂದು ಜಗದ್ಗುರು ಗಳಲ್ಲಿ ಮನವಿ ಮಾಡಿದ್ದಾರೆ