ಉಜ್ಜಯನಿ ಪೀಠದ ಶ್ರೀಗಳ ನೇಮಕ ವಿವಾದ: ಪೊಲೀಸ್ ಬಂದೋ ಬಸ್ತು

ಬಳ್ಳಾರಿ ನ. 16 : ವೀರಶೈವ ಪಂಚ ಪೀಠಗಳಲ್ಲಿ‌ಒಂದಾದ ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜಿನಿ ಪೀಠಾಧ್ಯಕ್ಷರ ನೇಮಕ ವಿವಾದದಿಂದಾಗಿ‌ ಪೀಠವನ್ನು ಹೊಂದಿರುವ ಮರುಳ ಸಿದ್ದೇಶ್ವರ ದೇವಸ್ಥಾನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ರಂಭಾಪುರಿ ಪೀಠಾದ ವೀರಸೋಮೇಶ್ವರ ಶ್ರೀಗಳ ಸಮ್ಮುಖದಲ್ಲಿ ಮುಕ್ತಿ ಮಂದಿರದಲ್ಲಿ ಮೊನ್ನೆ (ಶುಕ್ರವಾರ) ಸಭೆ ನಡೆದಿದ್ದು. ಅಲ್ಲಿ ಉಜ್ಜಯನಿ‌‌ ಪೀಠಕ್ಕೆ ನೂತನವಾಗಿ ತ್ರಿಲೋಚನಾ ಸ್ವಾಮೀಜಿ ಅವರನ್ನು ನೇಮಕ‌ ಮಾಡಿ ಘೋಷಣೆ ಮಡಲಾಗಿದೆ.

ಉಜ್ಜಿನಿ ಪೀಠದ ಜಗದ್ಗುರುಗಳಾಗಿ ಪಂಚಪೀಠಗಳ ಪರಂಪರೆ ಶಿಷ್ಠಾಚಾರಗಳಿಗನುಗುಣವಾಗಿ ನೇಮಕಗೊಂಡು ನಾನು ಮುಂದುವರೆದಿರುವಾಗ ತ್ರಿಲೋಚನಾ ಸ್ವಾಮೀಜಿಗಳು ಯಾವ ಪೀಠಕ್ಕೆ (ಮಧ್ಯಪ್ರದೇಶದ ಉಜ್ಜೈನಿ ಪೀಠ ಅಥವಾ ಕೊಟ್ಟೂರು ಉಜ್ಜಿನಿ ಪೀಠ) ಜಗದ್ಗುರು ಎಂದು ತಿಳಿಯುತ್ತಿಲ್ಲವೆಂದು ಪೀಠದ ಹಾಲಿ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರು ಪ್ರಶ್ನಿಸಿದ್ದಾರೆ.

ಇತರೆ ನಾಲ್ವರು ಪಂಚಪೀಠಾಧೀಶರರು ಆರ್ಶೀವದಿಸಿ ಶಾಸ್ತ್ರ ಬದ್ಧವಾಗಿ ನನ್ನನ್ನು 2011 ರಲ್ಲಿ ನೇಮಕ ಮಾಡಿದ್ದು, ಈ ಸಮಾರಂಭಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಿದ್ದರು. ಪಟ್ಟಾಧಿಕಾರಿ ಮಹೋತ್ಸವ ಸಮಾರಂಭಕ್ಕೆ ಅಂದಿನ‌ನ ಮುಖ್ಯಮಂತ್ರಿ ಸದಾನಂದಗೌಡರು, ಶಾಸಕ ಬಿ.ನಾಗೇಂದ್ರ ಸೇರಿದಂತೆ ಇತರೆ ಗಣ್ಯರು ಆಗಮಿಸಿದ್ದರು.

ಮುಕ್ತಿ ಮಂದಿರದಲ್ಲಿ ಶುಕ್ರವಾರ ನಡೆದ ಶಕ್ತಿ ಸಂವರ್ಧನ ಸಂಕಲ್ಪ ಸಮಾರಂಭಕ್ಕೆ ನನ್ನನ್ನು ಆಹ್ವಾನಿಸಿದ್ದರೂ ಭಾಗವಹಿಸುತ್ತಿದ್ದೆ ನನ್ನನ್ನು ದೂರ ಇಟ್ಟು ಈ ರೀತಿ‌ನೇಮಕ‌ಮಾಡಿದ್ದರ ಬಗ್ಗೆ ಭಕ್ತ ಸಮೂಹದಿಂದಲೇ ಆಕ್ಷೇಪ ಇದೆ ಎಮನದರು.

ಪೊಲೀಸ್ ಬಂದೋಬಸ್ತು:

ಮುಕ್ತಿ ಮಂದಿರದಲ್ಲಿ ಶುಕ್ರವಾರ ಘೋಷಿಸಲಾಗಿರುವ ಜಗದ್ಗುರು ವಿಷಯಕ್ಕೆ ಸಂಬಂಧಿಸಿದಂತೆ ಪೀಠದಲ್ಲಿ ಭಕ್ತರಿಂದ ಆಕ್ರೋಶದ ಮಾತುಗಳು ಕೇಳಿಬಂದವು. ಉಜ್ಜಿನಿ ಸದ್ಧರ್ಮ ಪೀಠಕ್ಕೆ ಅನಾಮಧೇಯ ಸ್ವಾಮೀಜಿ ಬರಬಹುದು ಎಂಬ ದೂರು ಹಿನ್ನಲೆಯಲ್ಲಿ‌ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಡಿವೈಎಸ್ಪಿ, ಸರ್ಕಲ್‍ ಇನ್​ಸ್ಪೆಕ್ಟರ್, 4 ಜನ ಪಿಎಸ್ಐಗಳು, 7 ಜನ‌ಎಎಸ್ಐಗಳು ಮತ್ತು 25 ಜನ‌ ಪೊಲೀಸ್ ಕಾನ್ಸ್ಟ್​​ಟೇಬಲ್​ಗಳು ಬಂದೋಬಸ್ತ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಪೀಠದಲ್ಲಿ ಯಾವುದೇ ಗದ್ದಲ, ಗಲಾಟೆಗಳಾಗದಂತೆ ಶಾಂತಿ ಕಾಪಾಡುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿರ್ದೇಶನದ ಮೇರೆಗೆ ಈ ಕಾರ್ಯವನ್ನು ಕೈಗೊಂಡಿದ್ದೇವೆ ಎಂದು ಕೊಟ್ಟೂರು ಸರ್ಕಲ್ ಇನ್ಸ್‌ಪೆಕ್ಟರ್ ಹೆಚ್. ದೊಡ್ಡಪ್ಪ ಹೇಳಿದ್ದಾರೆ.

ಈ‌ ಮಧ್ಯೆ ಸಚಿವ ಶ್ರೀರಾಮುಲು ಪೀಠಕ್ಕೆ ಭೇಟಿ ನೀಡಿದ್ದಾರೆ. ಪೀಠದ ಬೆಳವಣಿಗೆ ಬಗ್ಗೆ ಚರ್ಚಿಸಿದ್ದಾರೆ. ಬಿಜೆಪಿ ಮುಖಂಡರು‌ ಪೀಠದ ಭಕ್ತರಾದ ಕೆ.ಎಂ. ತಿಪ್ಪೇಸ್ವಾಮಿ, ಹೆಚ್. ವೀರನಗೌಡ, ಮಲ್ಲಿಕಾರ್ಜುನಗೌಡ ಮೊದಲಾದವರು ಇದ್ದರು