ಉಜ್ಜಯನಿ ಪೀಠದ ಗೊಂದಲಕ್ಕೆ ಸುಖಾಂತ್ಯ ನೀಡಿ: ಸಾಲಿ ಸಿದ್ಧಯ್ಯ ಮನವಿ

ಹೊಸಪೇಟೆ, ನ.18: ಪಂಚಪೀಠಗಳಲ್ಲಿ ಎರಡನೆಯದಾಗಿರುವ ಉಜ್ಜಯನಿ ಸದ್ಧರ್ಮಪೀಠದ ಅಧಿಕಾರಕ್ಕೆ ಸಂಬಂಧಪಟ್ಟಂತೆ ಉಂಟಾಗಿರುವ ಉದ್ವೇಗಗಳಿಗೆ ತೆರೆ ಎಳೆದು ಸಮಾಜ ಬಾಂಧವರಲ್ಲಿ ಉಂಟಾಗುತ್ತಿರುವ ಗೊಂದಲಗಳನ್ನು ನೀವರಿಸಬೇಕೆಂದು ಬಳ್ಳಾರಿ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷರಾದ ಸಾಲಿ ಸಿದ್ಧಯ್ಯ ಸ್ವಾಮಿ ಅವರು ಮನವಿ ಮಾಡಿದ್ದಾರೆ.
ಮಾನವರು ಧಾರ್ಮಿಕ ಮನೋಬಾವಗಳನ್ನು ಕಡಿಮೆ ಮಾಡಿಕೊಳ್ಳುತ್ತಿರುವ ಪ್ರಸ್ತುತ ಸಂದರ್ಭಗಳಲ್ಲಿ ಪೀಠಗಳಲ್ಲಿ ಉಂಟಾಗುತ್ತಿರುವ ಗೊಂದಲಗಳು ಸಮಸ್ತ ಸಮಾಜದ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟುಮಾಡುತ್ತಿರುವ ಹಿನ್ನಲೆಯಲ್ಲಿ ಪಂಚಪೀಠದ ಜಗದ್ಗುರುಗಳು ಒಮ್ಮತದ ನಿರ್ಣಯ ಕೈಗೊಂಡು ಸಮಾಜದ ಮತ್ತು ಧರ್ಮದ ಒಳಿತಿಗಾಗಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ವೀರಶೈವ ಮಹಾಸಭಾ ಘಟಕದ ಪರವಾಗಿ ಮನವಿಯನ್ನು ಪ್ರಕಟಣೆ ಮೂಲಕ ಸಲ್ಲಿಸಿದ್ದಾರೆ.