ಉಜನಿ ಲಕ್ಷ್ಮಿ ದೇವಸ್ಥಾನದ ಕಳಸಾರೋಹಣ : ಕಲಾವಿದರಿಗೆ ಸನ್ಮಾನ

ಔರಾದ :ಫೆ.28: ತಾಲೂಕಿನ ಉಜನಿ ಗ್ರಾಮದ ಲಕ್ಷ್ಮಿ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದರಿಗೆ ಸನ್ಮಾನಿಸಲಾಯಿತು.

ಗ್ರಾಮದ ಲಕ್ಷ್ಮಿ ದೇವಸ್ಥಾನದಲ್ಲಿ ಅಖಂಡ ಹರಿನಾಮ ನಿಮಿತ್ತ ಅಖಂಡ ಹರಿನಾಮ ಸಪ್ತಾಹ ಕಾರ್ಯಕ್ರಮ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಹೇಮರೆಡ್ಡಿ ಮಲ್ಲಮ್ಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಂಗೀತಕಾರ್ಯಕ್ರಮ ಜರುಗಿತು. ಭಜನೆ, ಕೀರ್ತನೆ ಹಾಗೂ ಸಂಗೀತ ಕಲಾವಿದರಿಗೆ ಗೌರವ ಸನ್ಮಾನ ಜರುಗಿತು.

ಈ ಸಂದರ್ಭದಲ್ಲಿ ಕಲಾವಿದರಾದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕ ವಿನಾಯಕ ಚೌದ್ರಿ ಭಾಲ್ಕಿ, ತಬಲಾವಾದಕ ಸಿದ್ದಯ್ಯ ಸ್ವಾಮಿ ಬೇಲ್ದಾಳ, ವಚನ ಗಾಯಕ ಶಿವಾಜಿರಾವ ಪಾಟೀಲ ಗುಡಪಳ್ಳಿ ಗ್ರಾಮ ಪಂಚಾಯತ್ ಅದ್ಯಕ್ಷ ರವಿಂದ್ರರೆಡ್ಡಿ ಹೇಗಡೆ, ನರಸಿಂಗರಾವ ಕುಲಕರ್ಣಿ ವಜಿನಾಥ ವಡಗೆ ಸಂಗಮೇಶ ಬೇಲ್ದಾಳ ಚಂದ್ರಾರೆಡ್ಡಿ ಶ್ರೀ ಕಾಂತ ಅನಿಲರೆಡ್ಡಿ ಸೇರಿದಂತೆ ಇನ್ನಿತರರಿದ್ದರು.