ಉಚ್ಛ ನ್ಯಾಯಾಲಯದಲ್ಲಿ ಯೋಗ ದಿನಾಚರಣೆ

ಕಲಬುರಗಿ,ಜೂ.21: ಉಚ್ಛ ನ್ಯಾಯಲಯದ ಕಲಬುರಗಿ ಪೀಠದಲ್ಲಿ ಬುಧವಾರ 9ನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಯೋಗಾಭ್ಯಾಸ ಮಾಡಲಾಯಿತು.

ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾ. ಬಿ.ಎಂ.ಶ್ಯಾಮಪ್ರಸಾದ, ಸೂರಜ ಗೋವಿಂದರಾಜ, ಎನ್.ಎಸ್.ಸಂಜಯಗೌಡ, ಆರ್.ನಟರಾಜ, ಹೇಮಂತ ಚಂದನಗೌಡರ್ ಹಾಗೂ ಉಮೇಶ ಎಂ. ಅಡಿಗ, ನ್ಯಾಯಾವಾದಿಗಳ ಸಂಘದ ಅಧ್ಯಕ್ಷ ಗುಪ್ತಲಿಂಗ ಪಾಟೀಲ ಸೇರಿದಂತೆ ಹೈಕೋರ್ಟ್ ಸಿಬ್ಬಂದಿ ವರ್ಗ ಯೋಗಭ್ಯಾಸದಲ್ಲಿ ಭಾಗವಹಿಸಿದ್ದರು.

ಯೋಗ ತರಬೇತುದಾರ ಸುಜಾತಾ ನಾಗನಹಳ್ಳಿ ಅವರು ಯೋಗ ತರಬೇತಿ ನೀಡಿದಲ್ಲದೆ ಅದರ ಮಹತ್ವ ಸಹ ತಿಳಿಸಿಕೊಟ್ಟರು.