ಉಚ್ಚ ಗ್ರಾಮದಲ್ಲಿ 57ನೆಯ ಮಾಸಿಕ ಶಿವಾನುಭವ ಗೋಷ್ಠಿ

ಭಾಲ್ಕಿ:ಜ.27: ಪೂಜ್ಯ ಶ್ರೀ ದಿವ್ಯಯೋಗಿ ಶ್ರೀ ಕಂಠಯ್ಯ ಸ್ವಾಮಿಗಳ 57ನೆಯ ಮಾಸಿಕ ಶಿವಾನುಭವ ಗೋಷ್ಠಿ ಕಾರ್ಯಕ್ರಮವು ಉಚ್ಚ ಗ್ರಾಮದ ಪೂಜ್ಯ ಶ್ರೀ ದಿವ್ಯಯೋಗಿ ಶ್ರೀಕಂಠಯ್ಯ ಸ್ವಾಮಿಗಳ ಲಿಂಗಯೋಗ ಧ್ಯಾನ ಮಂದಿರದಲ್ಲಿ ದಿನಾಂಕ 28-01-2024ರಂದು ರವಿವಾರ ಮಧ್ಯಾಹ್ನ 2 ಗಂಟೆಗೆ ಜರುಗಲಿದೆ. ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಶಾಂತಯ್ಯ ಸ್ವಾಮಿ ಅವರು ನೆರವೇರಿಸುವರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮೊಹಮ್ಮದ್ ಅಸ್ಲಾಂಮಿಯಾ ಚಿಟಗುಪ್ಪಾ ಆಗಮಿಸಲಿದ್ದಾರೆ. ಶಾಂತಾಬಾಯಿ ವೈಜಿನಾಥ ಕುಂಬಾರ ಭಾಲ್ಕಿ ಹಾಗೂ ಶ್ರೀ ಜೈಪ್ರಕಾಶ ಕುಂಬಾರ ಭಾಲ್ಕಿ ಅವರು ಗೌರವ ಉಪಸ್ಥಿತಿಯನ್ನು ವಹಿಸುವರು. ಶೈಲೇಂದ್ರ ಕವಡಿ ಹುಮನಾಬಾದ ಅನುಭಾವ ಹೇಳುವರು. ಸರಸ್ವತಿ ಶಿವಕುಮಾರ ಜೈನಾಪುರೆ ಬಸವಗುರು ಪೂಜೆಯನ್ನು ನೆರವೇರಿಸುವರು. ಶಿವಯೋಗಿ ಸ್ವಾಮಿ ಸ್ವಾಗತಿಸುವರು. ಶರಣು ಸಮರ್ಪಣೆಯನ್ನು ಚಂದನಾ ಸ್ವಾಮಿ ಅವರು ನೆರವೇರಿಸುವರು, ಕವನ ಸ್ವಾಮಿ ವಚನ ಗಾಯನವನ್ನು ಮಾಡುವರು, ಶ್ರೀದೇವಿ ಸ್ವಾಮಿ ಭಕ್ತಿಗೀತೆಯನ್ನು ನೆರವೇರಿಸುವರು. ಸಿದ್ದಲಿಂಗ ಸ್ವಾಮಿ ನಿರೂಪಿಸುವರು. ಎಂದು ಶ್ರೀ ಶಾಂತಯ್ಯಾ ಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.