ಉಚ್ಚಾ ಗ್ರಾಮದಲ್ಲಿ ಶರಣಬಸವೇಶ್ವರ ಜಾತ್ರೆ ಸಂಪನ್ನ

ಭಾಲ್ಕಿ:ಎ.3: ತಾಲೂಕಿನ ಉಚ್ಚಾ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಐದು ದಿನಗಳ ಕಾರ್ಯಕ್ರಮವನ್ನು ಬುಧವಾರ ಶ್ರೀ ರಾಜೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ತಡೋಳಾ ಶ್ರೀ ಗಳಿಂದ ಆಶಿರ್ವಚನ ನೀಡಲಾಯಿತು.

ಗುರುವಾರ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕುಂಭಮೆಳ, ಗ್ರಾಮದ ಅಕ್ಕಮಹಾದೇವಿ ಬಳಗದಿಂದ ಕೋಲಾಟ, ಭಜನೆ, ಹಾಗೂ ಡೊಳ್ಳು ಕುಣಿತದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಕೊನೆಯ ದಿನವಾದ ಶುಕ್ರವಾರ ಕೊವಿಡ್ ನಿಯಮದಂತೆ ರಥೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.