ಉಚ್ಚಾ ಗ್ರಾಮದಲ್ಲಿ ಬೂಸ್ಟರ್ ಡೋಸ್ ವ್ಯಾಕ್ಸೀನ್ ಮೇಳ

ಭಾಲ್ಕಿ :ಜು.21: ಭಾಲ್ಕಿ ತಾಲೂಕಿನ ಉಚ್ಚ ಗ್ರಾಮದಲ್ಲಿ ಕೋವಿಡ್ ನ ಮೂರನೇ ಲಸಿಕೆ ಹಾಕಿಸಲು ಬೂಸ್ಟರ್ ಡೋಸ್ ವ್ಯಾಕ್ಸೀನ್ ಮೇಳ ಅಭಿಯಾನ ಕಾರ್ಯಕ್ರಮ ಆರಂಭವಾಯಿತು. ಗ್ರಾಮದ ಅನೇಕ ಜನರು ಬೂಸ್ಟರ್ ಡೋಸ್ ವ್ಯಾಕ್ಸೀನ್ ಪಡೆದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ. ರಂಗನಾಥ್ ಅವರು ಪ್ರಧಾನ ಮಂತ್ರಿಗಳ ಆದೇಶದಂತೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ 75 ದಿವಸಗಳ ಉಚಿತ ಬೂಸ್ಟರ್ ಡೋಸ್ ವ್ಯಾಕ್ಸೀನ್ ಮೇಳ ನಡೆಯುತ್ತಿದ್ದು ಕೊರೊನಾ ಬಗ್ಗೆ ಜನರಿಗೆ ಆರಂಭದಲ್ಲಿದ್ದ ಭಯ, ಆತಂಕ ಕ್ರಮೇಣ ಕಡಿಮೆಯಾಗಿದೆ. ಆದರೆ 4ನೇ ಅಲೆ ಮುನ್ನೆಚ್ಚರಿಕೆ ಕ್ರಮವಾಗಿ ಬೂಸ್ಟರ್ ಡೋಸೇಜ್ ಪಡೆದುಕೊಳ್ಳಲು ಸರಕಾರ ಸೂಚನೆ ನೀಡಿದೆ. ಆರೋಗ್ಯ ಕಾರ್ಯಕರ್ತರು, ಫ್ರಂಟ್ ಲೈನ್ ವರ್ಕರ್ಸ್, 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ಸರಕಾರವೇ ಉಚಿತವಾಗಿ ಬೂಸ್ಟರ್ ಡೋಸ್ ನೀಡಲಾಗುತ್ತಿತ್ತು. 18ರಿಂದ 59ನೇ ವಯೋಮಾನದವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಬೂಸ್ಟರ್ ಡೋಸ್ ನೀಡಲಾಗುತ್ತಿತ್ತು. ಖಾಸಗಿ ಆಸ್ಪತ್ರೆಗಳಲ್ಲಿ ಮೂರನೇ ಡೋಸ್ ಪಡೆಯಲು ಒಟ್ಟು 386ರೂ ವೆಚ್ಚವಾಗುತ್ತದೆ. ಆದರೆ ಮಾನ್ಯ ಪ್ರಧಾನ ಮಂತ್ರಿಗಳ ಆದೇಶದಂತೆ ಭಾರತದ 75ನೆಯ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಆರೋಗ್ಯಕರ ದೇಶವನ್ನು ನಿರ್ಮಿಸಲು ಸರ್ಕಾರ ಉಚಿತವಾಗಿ 75 ದಿವಸಗಳ ಕಾಲ ಜುಲೈ 15ರಿಂದ ಅಭಿಯಾನ ಶುರುವಾಗಿದೆ. ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಡಾ. ರಂಗನಾಥ್ ಮೆಡಿಕಲ್ ಆಫೀಸರ್ ಪಿ.ಏಹ್.ಸಿ. ವರವಟ್ಟಿ ಅವರು ತಿಳಿಸಿದರು.
ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಉಚ್ಚ ಗ್ರಾಮದಲ್ಲಿ ಸರ್ಕಾರಿ ಉಚಿತ ಬೂಸ್ಟರ್ ಡೋಸ್ ವ್ಯಾಕ್ಸೀನ್ ನೀಡಲಾಯಿತು.
ಕಾರ್ಯಕ್ರಮದಲ್ಲಿ ಆರೋಗ್ಯ ಸಿಬ್ಬಂದಿಗಳಾದ ಶಿವಕುಮಾರ ಪಾಟೀಲ್, ಆನಂದ ದಾಲೆ, ಆನಂದ ಮಹಾಜನ, ಗ್ರೇಸ್ ಸಿಸ್ಟರ್, ಸುವರ್ಣ ಸಿಸ್ಟರ್, ಸ್ಟೆಲ್ಲಾ ಸಿಸ್ಟರ್ ಪಿ.ಹೆಚ.ಸಿ.ಒ
ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಮೀನಾಕ್ಷಿ ಧರ್ಮಣ್ಣ , ಶ್ರೀಮತಿ ಅನಿತಾ ನೌಬಾದೆ, ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ಮಹೇಶ್ವರಿ ಮಹಾಗಾವೆ, ಜೈಶೀಲಾ ಆರಾದೆ, ಶ್ರೀಮತಿ ಮಲ್ಲಮ್ಮ ಚಿದ್ರೆ ಮದಕಟ್ಟಿ ಗ್ರಾಮ ಪಂಚಾಯತ ಸದಸ್ಯರಾದ ಶ್ರೀ ಸಿದ್ರಾಮ ಅಳ್ಳೆ, ಶ್ರೀ ಶಿವನಾಥ ಮಹಗಾವೇ, ಶ್ರೀ ಪವನ ಠಾಕೂರ್, ಶ್ರೀಮತಿ ಸರಸ್ವತಿ ಪಾಟೀಲ್, ಶ್ರೀಮತಿ ಜಗದೇವಿ ನಾಗಭೂಷಣ, ಸಮಾಜ ಸೇವಕರಾದ ಶ್ರೀ ದಿಲೀಪ ಧರ್ಮಣ್ಣ ಉಪಸ್ಥಿತರಿದ್ದರು.